ಕಾರು ಅಪಘಾತದಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ಮಾಜಿ ಆಲ್‌ರೌಂಡರ್ ಆಂಡ್ರ್ಯೂ ಸೈಮಂಡ್ಸ್ ಸಾವು

ಸಿಡ್ನಿ: ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಆಂಡ್ರ್ಯೂ ಸೈಮಂಡ್ಸ್ ಈಶಾನ್ಯ ಆಸ್ಟ್ರೇಲಿಯಾದ ಟೌನ್ಸ್‌ವಿಲ್ಲೆ ಬಳಿ ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ. ಅವರಿಗೆ 46 ವರ್ಷ ವಯಸ್ಸಾಗಿತ್ತು.
ಶನಿವಾರ ತಡರಾತ್ರಿ ನಡೆದ ಅಪಘಾತದ ಬಗ್ಗೆ ಪೊಲೀಸ್ ಹೇಳಿಕೆಯನ್ನು ಉಲ್ಲೇಖಿಸಿ ಕ್ರಿಕೆಟ್ ಆಸ್ಟ್ರೇಲಿಯಾ ಭಾನುವಾರ ತನ್ನ ವೆಬ್‌ಸೈಟ್‌ನಲ್ಲಿ ಸೈಮಂಡ್ಸ್ ಸಾವಿನ ಕುರಿತು ವರದಿ ಮಾಡಿದೆ.

ಸೈಮಂಡ್ಸ್ ಆಸ್ಟ್ರೇಲಿಯಾ ಪರ 26 ಟೆಸ್ಟ್ ಪಂದ್ಯಗಳನ್ನು ಆಡಿದರು ಮತ್ತು ಎರಡು ಶತಕಗಳನ್ನು ಗಳಿಸಿದರು, ಆದರೆ ಅವರು ಸೀಮಿತ ಓವರ್ ಸ್ಪೆಷಲಿಸ್ಟ್ ಎಂದು ಹೆಚ್ಚು ಪ್ರಸಿದ್ಧರಾಗಿದ್ದರು. ಅವರು ಆಸ್ಟ್ರೇಲಿಯಾ ಪರ 198 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ ಮತ್ತು ಎರಡು ವಿಶ್ವಕಪ್ ಗೆದ್ದ ತಂಡದ ಭಾಗವಾಗಿದ್ದರು. ನಿವೃತ್ತಿಯ ನಂತರ, ಸೈಮಂಡ್ಸ್ ಕ್ರಿಕೆಟ್ ವಿವರಣೆಕಾರರಾಗಿದ್ದರು.
ಟೌನ್ಸ್‌ವಿಲ್ಲೆಯಿಂದ ಸುಮಾರು 50 ಕಿಲೋಮೀಟರ್ (30 ಮೈಲುಗಳು) ದೂರದಲ್ಲಿರುವ ಹರ್ವೆ ರೇಂಜ್‌ನಲ್ಲಿ ಅಪಘಾತ ಸಂಭವಿಸಿದೆ ಎಂದು ಕ್ವೀನ್ಸ್‌ಲ್ಯಾಂಡ್ ಪೊಲೀಸರು ತಿಳಿಸಿದ್ದಾರೆ. “ಪ್ರಾಥಮಿಕ ಮಾಹಿತಿಯಂತೆ ರಾತ್ರಿ 11 ಗಂಟೆಯ ನಂತರ ಕಾರ್ ಅನ್ನು ಆಲಿಸ್ ರಿವರ್ ಬ್ರಿಡ್ಜ್ ಬಳಿಯ ಹರ್ವೆ ರೇಂಜ್ ರಸ್ತೆಯಲ್ಲಿ ಓಡಿಸುತ್ತಿದ್ದಾಗ ಅದು ರಸ್ತೆಮಾರ್ಗವನ್ನು ಬಿಟ್ಟು ಉರುಳಿದೆ ಎಂದು ಸೂಚಿಸುತ್ತದೆ” ಎಂದು ಪೊಲೀಸ್ ಹೇಳಿಕೆ ತಿಳಿಸಿದೆ.
.ಲೆಜೆಂಡರಿ ಲೆಗ್ ಸ್ಪಿನ್ನರ್ ಶೇನ್ ವಾರ್ನ್ ಮಾರ್ಚ್‌ನಲ್ಲಿ ಥಾಯ್ಲೆಂಡ್‌ನಲ್ಲಿ ನಿಧನರಾದ ನಂತರ ಸೈಮಂಡ್ಸ್‌ ನಿಧನ ಆಸ್ಟ್ರೇಲಿಯಾದ ಕ್ರಿಕೆಟ್‌ಗೆ ಮತ್ತೊಂದು ಕಹಿ ಸುದ್ದಿಯಾಗಿದೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement