ತೊರೆಯಿರಿ ಅಥವಾ ಸಾವನ್ನು ಎದುರಿಸಿ: ಪುಲ್ವಾಮಾದಲ್ಲಿ ಕಾಶ್ಮೀರಿ ಪಂಡಿತರಿಗೆ ಬೆದರಿಕೆ ಹಾಕಿದ ಭಯೋತ್ಪಾದಕರ ಗುಂಪು..!

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಹವಾಲ್ ಟ್ರಾನ್ಸಿಟ್ ವಸತಿಗೃಹದಲ್ಲಿ ನೆಲೆಸಿರುವ ಕಾಶ್ಮೀರಿ ಪಂಡಿತರಿಗೆ ಲಷ್ಕರ್-ಎ-ಇಸ್ಲಾಂ ಎಂಬ ಭಯೋತ್ಪಾದಕ ಸಂಘಟನೆ ಬೆದರಿಕೆ ಹಾಕಿದೆ.
ವಲಸಿಗರ ಕಾಲೋನಿ ಅಧ್ಯಕ್ಷರನ್ನು ಉದ್ದೇಶಿಸಿ ಬರೆದ ಪತ್ರದಲ್ಲಿ, ಗುಂಪು ಎಲ್ಲಾ ‘ವಲಸಿಗರು ಮತ್ತು ಆರ್‌ಎಸ್‌ಎಸ್ ಏಜೆಂಟರಿಗೆ’ “ತೊರೆಯಿರಿ ಅಥವಾ ಸಾವನ್ನು ಎದುರಿಸಿ” ಎಂದು ಹೇಳಲಾಗಿದೆ.
ಅಲ್ಲದೆ, ಭಯೋತ್ಪಾದಕ ಗುಂಪು “ಕಾಶ್ಮೀರಿ ಮುಸ್ಲಿಮರನ್ನು ಕೊಲ್ಲಲು ಕಾಶ್ಮೀರದಲ್ಲಿ ಮತ್ತೊಂದು ಇಸ್ರೇಲ್ ಬಯಸುವ ಕಾಶ್ಮೀರಿ ಪಂಡಿತರಿಗೆ ಜಾಗವಿಲ್ಲ” ಎಂದು ಹೇಳಿದೆ. ನಿಮ್ಮ ಭದ್ರತೆಯನ್ನು ದ್ವಿಗುಣಗೊಳಿಸಿ ಅಥವಾ ಮೂರರಷ್ಟು ಹೆಚ್ಚಿಸಿ, ಉದ್ದೇಶಿತ ಹತ್ಯೆಗೆ ಸಿದ್ಧರಾಗಿರಿ. ನೀವು ಸಾಯುವಿರಿ” ಎಂದು ಪತ್ರದಲ್ಲಿ ಬೆದರಿಕೆ ಹಾಕಲಾಗಿದೆ.

ಜಮ್ಮು ಮತ್ತು ಕಾಶ್ಮೀರದ ಬುದ್ಗಾಮ್ ಜಿಲ್ಲೆಯಲ್ಲಿ ಸರ್ಕಾರಿ ನೌಕರ ಹಾಗೂ ಕಾಶ್ಮೀರಿ ಪಂಡಿತ ರಾಹುಲ್ ಭಟ್ ಭಯೋತ್ಪಾದಕರ ಗುಂಡಿಗೆ ಬಲಿಯಾದ ಕೆಲವೇ ದಿನಗಳಲ್ಲಿ ಈ ಬೆದರಿಕೆ ಪತ್ರ ಬಂದಿದೆ. ಗುರುವಾರ ಮಧ್ಯಾಹ್ನ ಕೇಂದ್ರ ಕಾಶ್ಮೀರದ ಚದೂರದಲ್ಲಿರುವ ತಹಸೀಲ್ದಾರ್ ಕಚೇರಿಯಲ್ಲಿ ಅವರ ಮೇಲೆ ದಾಳಿ ನಡೆದಿತ್ತು, ರಾಹುಲ್‌ ಭಟ್‌ ಸಾವಿಗೀಡಾಗಿದ್ದರು. ಭಯೋತ್ಪಾದಕ ಗುಂಪು ‘ಕಾಶ್ಮೀರ ಟೈಗರ್ಸ್’ ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ.
ದಾಳಿಯ ನಂತರ, ಕಾಶ್ಮೀರಿ ಪಂಡಿತ್ ಸಮುದಾಯವು ಕೇಂದ್ರಾಡಳಿತ ಪ್ರದೇಶದಾದ್ಯಂತ ಬೀದಿಗಿಳಿದು ಪ್ರತಿಭಟನೆಗಳನ್ನು ನಡೆಸಿತು. ಶನಿವಾರ, ಕಾಶ್ಮೀರಿ ಪಂಡಿತ್ ಸಮುದಾಯದ ಸರ್ಕಾರಿ ನೌಕರರು ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರಿಗೆ ಪತ್ರದಲ್ಲಿ ಕಾಶ್ಮೀರ ಕಣಿವೆಯಿಂದ ಸ್ಥಳಾಂತರಿಸುವಂತೆ ಹತಾಶ ಮನವಿ ಮಾಡಿದರು. “ಕಾಶ್ಮೀರ ನಮಗೆ ಸುರಕ್ಷಿತವಲ್ಲ” ಎಂದು ಅವರು ಬರೆದಿದ್ದಾರೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement