ಬ್ಯಾಡ್ಮಿಂಟನ್‌ನಲ್ಲಿ ಭಾರತದಿಂದ ಇತಿಹಾಸ ಸೃಷ್ಟಿ: 14 ಬಾರಿಯ ಚಾಂಪಿಯನ್ಸ್ ಇಂಡೋನೇಷ್ಯಾ ಸೋಲಿಸಿ ಚೊಚ್ಚಲ ಥಾಮಸ್ ಕಪ್ ಪ್ರಶಸ್ತಿ ಗೆದ್ದ ಭಾರತ

ಬ್ಯಾಂಕಾಕ್: ಮೇ 15 ರಂದು ಬ್ಯಾಂಕಾಕ್‌ನಲ್ಲಿ ನಡೆದ ಥಾಮಸ್ ಉಬರ್ ಕಪ್ 2022 ರಲ್ಲಿ ಭಾರತವು 14 ಬಾರಿಯ ಚಾಂಪಿಯನ್ಸ್ ಇಂಡೋನೇಷ್ಯಾವನ್ನು ಸೋಲಿಸಿ ಇತಿಹಾಸವನ್ನು ಬರೆದಿದೆ.
ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಇಂಡೋನೇಷ್ಯಾ ವಿರುದ್ಧ 3-0 ಜಯಗಳಿಸುವ ಮೂಲಕ ಭಾರತೀಯ ಪುರುಷರ ಬ್ಯಾಡ್ಮಿಂಟನ್‌ ತಂಡವು ಇದೇ ಮೊದಲ ಬಾರಿಗೆ ಪ್ರತಿಷ್ಠಿತ ಥಾಮಸ್ ಕಪ್ ಪ್ರಶಸ್ತಿಯನ್ನು ಗೆದ್ದಿದೆ.
ವಿಶ್ವ ಚಾಂಪಿಯನ್‌ಶಿಪ್‌ನ ಪದಕ ವಿಜೇತ ಲಕ್ಷ್ಯ ಸೇನ್, ಕಿಡಂಬಿ ಶ್ರೀಕಾಂತ್ ಮತ್ತು ವಿಶ್ವದ 8 ನೇ ಶ್ರೇಯಾಂಕದ ಡಬಲ್ಸ್ ಜೋಡಿ ಚಿರಾಗ್ ಶೆಟ್ಟಿ ಮತ್ತು ಸಾತ್ವಿಕಸಾಯಿರಾಜ್ ರಾಂಕಿರೆಡ್ಡಿ ಸ್ಮರಣೀಯ ಪ್ರದರ್ಶನಗಳನ್ನು ನೀಡುವ ಮೂಲಕ ಭಾರತವು ಫೈನಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿತು.

ನಾಕೌಟ್ ಹಂತಗಳಲ್ಲಿ ಆಫ್‌ಕಲರ್ ಆದ ನಂತರ, ಲಕ್ಷ್ಯ ಸೇನ್ ಅವರು ಭಾರತಕ್ಕೆ 1-0 ಮುನ್ನಡೆ ತಂದುಕೊಟ್ಟರು, ವಿಶ್ವದ ಐದನೇ ಶ್ರೇಯಾಂಕದ ಆಂಥೋನಿ ಸಿನಿಸುಕಾ ಗಿಂಟಿಂಗ್ ವಿರುದ್ಧ ಲಕ್ಷ್ಯ ಸೇನ್‌ ಅವರು 8-21 21-17 21-16 ಅಂತರದಲ್ಲಿ ಜಯಗಳಿಸಿದರು.

ದೇಶದ ಅತ್ಯುತ್ತಮ ಡಬಲ್ಸ್ ಜೋಡಿ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಎರಡನೇ ಗೇಮ್‌ನಲ್ಲಿ ನಾಲ್ಕು ಮ್ಯಾಚ್ ಪಾಯಿಂಟ್‌ಗಳನ್ನು ಉಳಿಸುವ ಮೂಲಕ ದೃಡತೆ ಪ್ರದರ್ಶಿಸಿದರು, ಅಂತಿಮವಾಗಿ ಮೊಹಮ್ಮದ್ ಅಹ್ಸಾನ್ ಮತ್ತು ಕೆವಿನ್ ಸಂಜಯ ಸುಕಮುಲ್ಜೊ ಅವರನ್ನು ಬಾರತದ ಜೋಡಿ 18-21 23-21 21-19 ರಿಂದ ಸೋಲಿಸಿತು..
ಎರಡನೇ ಸಿಂಗಲ್ಸ್‌ನಲ್ಲಿ, ಕಿದಂಬಿ ಶ್ರೀಕಾಂತ್ ಅವರು ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ವಿಜೇತ ಜೊನಾಟನ್ ಕ್ರಿಸ್ಟಿ ಅವರನ್ನು 48 ನಿಮಿಷಗಳಲ್ಲಿ 21-15 23-21 ರಿಂದ ನೇರ ಸೆಟ್‌ಗಳಲ್ಲಿ ಸೋಲಿಸಿ ಸ್ಪರ್ಧೆಯನ್ನು ಮುಕ್ತಾಯಗೊಳಿಸಿದರು.

ಪ್ರಮುಖ ಸುದ್ದಿ :-   ನಿಮ್ಮವನಾಗಿದ್ದೆ...ಯಾವಾಗಲೂ ನಿಮ್ಮವನಾಗಿಯೇ ಇರ್ತೇನೆ..: ಬಿಜೆಪಿ ಟಿಕೆಟ್ ನಿರಾಕರಣೆ ನಂತ್ರ ಪಿಲಿಭಿತ್‌ ಜನತೆಗೆ ʼಹೃದಯಸ್ಪರ್ಶಿʼ ಪತ್ರ ಬರೆದ ವರುಣ ಗಾಂಧಿ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement