ನೀರು ಕುಡಿಯಲು ಹೋದ ಮೂವರು ಬಾಲಕಿಯರು ಕೃಷಿಹೊಂಡದಲ್ಲಿ ಬಿದ್ದು ಸಾವು

ಗದಗ: ಜಿಲ್ಲೆಯ ಮುಂಡರಗಿ ತಾಲೂಕಿನ ಅತ್ತಿಕಟ್ಟಿ ತಾಂಡಾದ ಹೊರವಲಯದ ಕೃಷಿ ಹೊಂಡದಲ್ಲಿ ಕಾಲು ಜಾರಿ ಬಿದ್ದು ಮೂವರ ಬಾಲಕಿಯರು ಮೃತಪಟ್ಟಿದ್ದಾರೆ.
ಮೃತರನ್ನು ಅತ್ತಿಕಟ್ಟಿ ತಾಂಡಾದ ಸುನಿತಾ ಲಮಾಣಿ (13) ಅಂಕಿತಾ ಲಮಾಣಿ (10) ಹಾಗೂ ಡೋಣಿ ತಾಂಡಾದ ಸುನಿತಾ (11) ಎಂದು ಹೇಳಲಾಗಿದೆ. ಕುರಿ ಮರಿ ಮೇಯಿಸಲು ಹೋಗಿದ್ದ ಮೂವರು ಬಾಲಕಿಯರು,ಆಟವಾಡುತ್ತ ಕೃಷಿ ಹೊಂಡಕ್ಕೆ ತೆರಳಿದ್ದರು. ಮಧ್ಯಾಹ್ನದ ಬಿರು ಬಿಸಿಲಿನ ಕೈಕಾಲು ಮುಖ ತೊಳೆದುಕೊಳ್ಳಲು ಮುಂದಾಗಿದ್ದರು. ಆಗ ಆಯತಪ್ಪಿ ಹೊಂಡದಲ್ಲಿ ಬಿದ್ದ ಮೃತ ಪಟ್ಟ ಬಗ್ಗೆ ಸಂಶಯ ವ್ಯಕ್ತವಾಗಿದೆ.

ಅತ್ತಿಕಟ್ಟಿ ತಾಂಡಾದಲ್ಲಿ ಮದುವೆ ಹಿನ್ನೆಲೆಯಲ್ಲಿ ಕುಟುಂಬ ಸಮೇತ ತಾಂಡಾಕ್ಕೆ ಬಂದಿದ್ದರು. ಮದುವೆ ಮನೆಯಲ್ಲಿ 15 ರಿಂದ 20 ಮಕ್ಕಳ ತಂಡವೇ ಸೇರಿತ್ತು. ಮಕ್ಕಳು ಗುಂಪು  ಕುರಿಗಳ ಜೊತೆಗೆ ಹೋಲಕ್ಕೆ ಹೋಗಿದೆ.
ಆದರೆ ಮೂವರು ಮಕ್ಕಳು ಬಾಯಾರಿ ನೀರು ಕುಡಿಯಲು ಬಂದ ವೇಳೆ ಕೃಷಿ ಹೊಂಡದಲ್ಲಿ ಕಾಲು ಕಾರಿ ಬಿದ್ದ ಅವಘಡ ಸಂಭವಿಸಿದೆ ಎನ್ನಲಾಗುತ್ತಿದೆ. ನೀರು ಕುಡಿಯಲು ಒಬ್ಬಳು ಹೋಗಿದ್ದಾಗ ಕಾಲು ಜಾರಿ ಬಿದ್ದಿದ್ದಾಳೆ, ಅವಳನ್ನು ರಕ್ಷಿಸಲು ಹೋಗಿ ಇನ್ನಿಬ್ಬರು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಊರಿನ ಜನ ಮಕ್ಕಳ ಶವ ಮೇಲೆತ್ತಿದ್ದಾರೆ.
ಅಗ್ನಿ ಶಾಮಕ ದಳ ಸ್ಥಳಕ್ಕೆ ಭೇಟಿ ನೀಡುವ ಹೊತ್ತಲ್ಲೇ ಇಬ್ಬರ ಶವ ಆಚೆ ತೆಗೆಯಲಾಗಿತ್ತು‌. ಸ್ಥಳೀಯರ ಸಹಾಯದಿಂದ ಸಂಜೆ ಮತ್ತೊಬ್ಬ ಬಾಲಕಿ ಶವವವನ್ನೂ ತೆಗೆಯಲಾಗಿದೆ.

ಪ್ರಮುಖ ಸುದ್ದಿ :-   ಹತ್ಯೆಗೀಡಾದ ನೇಹಾ ಹಿರೇಮಠ ಮನೆಗೆ ಸಿಎಂ ಸಿದ್ದರಾಮಯ್ಯ ಭೇಟಿ ; ಕುಟುಂಬಸ್ಥರಿಗೆ ಸಾಂತ್ವನ

 

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement