ಕನ್ನಡಿಗ ಅನಿಲ್ ಹೆಗ್ಡೆಗೆ ಬಿಹಾರ ರಾಜ್ಯಸಭಾ ಟಿಕೆಟ್

ಪಾಟ್ನಾ: ಬಿಹಾರದಿಂದ ರಾಜ್ಯಸಭೆಗೆ ಈ ಬಾರಿ ಆಡಳಿತಾರೂಢ ಜೆಡಿಯು ದಕ್ಷಿಣ ಕನ್ನಡ ಮೂಲದ ಅನಿಲ ಹೆಗ್ಡೆ ಅವರಿಗೆ ಟಿಕೆಟ್ ನೀಡಿದೆ.
ಮೂಲತಃ ಉಡುಪಿ ಜಿಲ್ಲೆಯವರಾದ  ಅನಿಲ್ ಹೆಗ್ಡೆ ಅವರು ಸುದೀರ್ಘ ಅವಧಿ ವರೆಗೆ ಜಾರ್ಜ್ ಫರ್ನಾಂಡಿಸ್ ಅವರ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಮಹೇಂದ್ರ ಪ್ರಸಾದ ನಿಧನದಿಂದ ತೆರವಾದ ಸ್ಥಾನಕ್ಕೆ ಉಪಚುನಾವಣೆ ನಡೆಯುತ್ತಿದ್ದು, ಇಗ ಜೆಡಿಯು ಅನಿಲ್ ಹೆಗ್ಡೆ ಅವರನ್ನು ಕಣಕ್ಕಿಳಿಸಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ.
ಕಳೆದ ವರ್ಷ ಡಿಸೆಂಬರ್ 27ರಂದು ಜನತಾ ದಳ ಯುನೈಟೆಡ್ (ಜೆಡಿಯು) ಸಂಸದ ಮಹೇಂದ್ರ ಪ್ರಸಾದ ನಿಧನದ ನಂತರ ತೆರವಾದ ರಾಜ್ಯಸಭಾ ಸ್ಥಾನಕ್ಕೆ ಬಿಹಾರದಲ್ಲಿ ಉಪಚುನಾವಣೆ ನಡೆಯುತ್ತಿದೆ. ಮೇ 30 ರಂದು ಉಪಚುನಾವಣೆ ನಡೆಯಲಿದೆ.

ಜೆಡಿಯು ರಾಷ್ಟ್ರೀಯ ಅಧ್ಯಕ್ಷ ರಾಜೀವ್ ರಂಜನ್ ಸಿಂಗ್ ಅಲಿಯಾಸ್ ಲಲ್ಲನ್ ಸಿಂಗ್ ಅವರು ಮೇಲ್ಮನೆಯ ತೆರವಾದ ಸ್ಥಾನಕ್ಕೆ ಹೆಗ್ಡೆ ಅವರನ್ನು ಅಬ್ಯರ್ಥಿ ಮಾಡುವುದಾಗಿ ಘೋಷಣೆ ಮಾಡಿದರು.
ನಮ್ಮ ಪಕ್ಷದ ಸಂಸದ ಡಾ. ಮಹೇಂದ್ರ ಪ್ರಸಾದ್ ಅವರ ಅಕಾಲಿಕ ಮರಣದಿಂದ ತೆರವಾದ ಬಿಹಾರದಿಂದ ರಾಜ್ಯಗಳ ಪರಿಷತ್ತಿಗೆ ನಡೆಯುವ ಉಪಚುನಾವಣೆಗೆ ಅನಿಲ್ ಹೆಗ್ಡೆ ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಪಕ್ಷ ನಿರ್ಧರಿಸಿದೆ ಎಂದು ಅವರು ಹೇಳಿದ್ದಾರೆ.
ಪಕ್ಷವು ಅಂತಿಮವಾಗಿ ಅವರ ಕೊಡುಗೆಯನ್ನು ಗುರುತಿಸಿದೆ ಮತ್ತು ಅವರ ಮೌನ ಕಾರ್ಯಕ್ಕಾಗಿ ಅವರನ್ನು ಪುರಸ್ಕರಿಸಿದೆ” ಎಂದು ಜೆಡಿಯು ಇನ್ನೊಬ್ಬ ನಾಯಕ ಹೇಳಿದರು, ಹೆಗ್ಡೆ ಅವರು ಮಾಜಿ ಹಿರಿಯ ಸಂಸದ ಜಾರ್ಜ್ ಫರ್ನಾಂಡಿಸ್ ಅವರೊಂದಿಗೆ ಕೆಲಸ ಮಾಡಿದ್ದಾರೆ ಎಂದು ಹೇಳಿದರು.

ಪ್ರಮುಖ ಸುದ್ದಿ :-   ರಾಜ್ಯದ ಹಲವೆಡೆ ಮಳೆ : ವಿಜಯಪುರದಲ್ಲಿ ಐತಿಹಾಸಿಕ ಸ್ಮಾರಕ ಮೆಹತರ್ ಮಹಲಿನ ಮೀನಾರ್ ಮೇಲ್ತುದಿಗೆ ಹಾನಿ, ಕುಷ್ಟಗಿಯಲ್ಲಿ ಸಿಡಿಲಿಗೆ ರೈತ ಸಾವು

ಅನಿಲ ಹೆಗ್ಡೆ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡುವ ಮೂಲಕ ಆಡಳಿತಾರೂಢ ಎನ್‌ಡಿಎ ಮಿತ್ರಪಕ್ಷವಾಗಿರುವ ಜೆಡಿಯು, ಸಮರ್ಪಿತ ಕಾರ್ಯಕರ್ತರಿಗೆ ಪಕ್ಷದ ಉನ್ನತ ನಾಯಕತ್ವ ಸೂಕ್ತ ಸಮಯದಲ್ಲಿ ಸೂಕ್ತ ಪ್ರತಿಫಲ ನೀಡಲಿದೆ ಎಂಬ ಸಂದೇಶ ರವಾನಿಸಿದೆ.
ಸ್ವಂತ ಮನೆಯೂ ಇಲ್ಲದ  ಅನಿಲ ಹೆಗ್ಡೆ ಕುಂದಾಪುರದ ಸಳ್ವಾಡಿಯಲ್ಲಿ 1960 ಮೇ 20ರಂದು ಜನಿಸಿರುವ ಅನಿಲ ಹೆಗ್ಡೆ, ಬಿದ್ಕಲ್‌ ಕಟ್ಟೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿ ಮಂಗಳೂರು ಸರ್ಕಾರಿ ಕಾಲೇಜಿನ ಓದಿದ್ದಾರೆ. ಅನಿಲ ಹೆಗ್ಡೆ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರ ಚಿಕ್ಕಪ್ಪನ ಮಗ.  ಆರಂಭದಲ್ಲಿ ಜನತಾ ಪರಿವಾರದಲ್ಲಿ ಗುರುತಿಸಿಕೊಂಡಿದ್ದರು. ನಂತರ ಜಾರ್ಜ್ ಫರ್ನಾಂಡಿಸ್ ಸಂಪರ್ಕಕ್ಕೆ ಬಂದು, ದಶಕಗಳ ಕಾಲ ಅವರ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಾರೆ. ಮದುವೆಯಾಗದೆ ಉಳಿದಿರುವ ಅನಿಲ ಹೆಗ್ಡೆ ಕಳೆದ 12ವರ್ಷಗಳಿಂದ ಪಾಟ್ನಾದ ಜೆಡಿಯು ಕಚೇರಿಯಲ್ಲಿ ವಾಸಿಸುತ್ತಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement