ಬೊಜ್ಜು ಕರಗಿಸುವ ಶಸ್ತ್ರಚಿಕಿತ್ಸೆ ನಂತರ ಸಾವಿಗೀಡಾದ ಕನ್ನಡ ಕಿರುತೆರೆಯ ನಟಿ

ಬೆಂಗಳೂರು :ಕನ್ನಡದ ಗೀತಾ ಮತ್ತು ದೊರೆಸಾನಿ ಧಾರಾವಾಹಿಗಳಲ್ಲಿ ನಟಿಸುತ್ತಿದ್ದ ಕಿರುತರೆ ನಟಿ ಚೇತನಾ ರಾಜ್‌ (22)ಅಕಾಲಿಕವಾಗಿ ನಿಧನರಾಗಿದ್ದಾರೆ.
ಸೋಮವಾರ ನಗರದ ಖಾಸಗಿ ಆಸ್ಪತ್ರೆಯಲ್ಲಿ ಫ್ಯಾಟ್‌ ಸರ್ಜರಿಗೆ ಒಳಗಾಗಿದ್ದ ಕಿರುತರೆ ನಟಿ ಚೇತನಾ ರಾಜ್‌ ರವರು ಶಸ್ತ್ರಚಿಕಿತ್ಸೆಯ ವೇಳೆ ಶ್ವಾಸಕೋಶದಲ್ಲಿ ನೀರಿನ ಅಂಶ ಶೇಖರಣೆಯಾಗಿ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.

ಸೋಮವಾರ ಬೆಳಿಗ್ಗೆ ಸುಮಾರು 9:30 ಕ್ಕೆ ತಮ್ಮ ಮನೆಯವರಿಗೂ ಮಾಹಿತಿಯನ್ನು ನೀಡದೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ನಟಿ ಚೇತನಾ ರಾಜ್‌ ಅವರ ಆರೋಗ್ಯದಲ್ಲಿ ಸಂಜೆ 5 ಗಂಟೆಗೆ ಏರುಪೇರಾಗಿದ್ದು, ಕೂಡಲೇ ಅವರನ್ನು ಶಂಕರಮಠದ ಕಾಡೇ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.

ಅವರು ಬೆಂಗಳೂರಿನ ರಾಜಾಜಿನಗರದಲ್ಲಿರುವ ಶೆಟ್ಟಿಯ ಸೌಂದರ್ಯವರ್ಧಕ ಕೇಂದ್ರದಲ್ಲಿ ‘ಕೊಬ್ಬು ಮುಕ್ತ’ ಪ್ಲಾಸ್ಟಿಕ್ ಸರ್ಜರಿ ಮಾಡಲು ನಿರ್ಧರಿಸಿದರು.
ಆದರೆ, ಶಸ್ತ್ರಚಿಕಿತ್ಸೆ ಅಂದುಕೊಂಡಂತೆ ಆಗಲಿಲ್ಲ. ಪ್ಲಾಸ್ಟಿಕ್ ಸರ್ಜರಿ ಮಾಡಿದ ವೈದ್ಯರೊಂದಿಗೆ ಚೇತನಾಳನ್ನು ಸಂಜೆ 5:30ಕ್ಕೆ ಕಾಡೆ ಆಸ್ಪತ್ರೆಗೆ ಕರೆತಂದು ಹೃದಯಾಘಾತಕ್ಕೊಳಗಾದ ವ್ಯಕ್ತಿ ಎಂದು ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಹೇಳಿದ್ದಾರೆ ಎನ್ನಲಾಗಿದೆ.
ಕಾಡೆ ಆಸ್ಪತ್ರೆಯ ವೈದ್ಯರು ಸಿಪಿಆರ್ ಪ್ರಾರಂಭಿಸಿದರು ಮತ್ತು 45 ನಿಮಿಷಗಳ ಕಾಲ ಪ್ರಯತ್ನಿಸಿದರೂ, ಚೇತನಾ ಅವರನ್ನು ಬದುಕಿಸಲು ಸಾಧ್ಯವಾಗಲಿಲ್ಲ. ಐಸಿಯು ತಜ್ಞ ಡಾ.ಸಂದೀಪ್ ಅವರು ಬಸವೇಶ್ವರನಗರ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್‌ಗೆ ನೀಡಿರುವ ದೂರಿನಲ್ಲಿ ಚೇತನಾ ಅವರು ಸೋಮವಾರ ಸಂಜೆ 6:45ಕ್ಕೆ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಶೆಟ್ಟಿ ಅವರ ಸೌಂದರ್ಯವರ್ಧಕ ಕೇಂದ್ರದ ವೈದ್ಯರಿಗೆ ಚೇತನಾ ಅವರು ಈಗಾಗಲೇ ನಿಧನರಾಗಿದ್ದಾರೆಂದು ತಿಳಿದಿತ್ತು ಎಂದು ಅವರು ತಿಳಿಸಿದ್ದಾರೆ.
ಚೇತನಾ ಅವರಿಗೆ ಶಸ್ತ್ರಚಿಕಿತ್ಸೆ ಮಾಡುವ ಮೊದಲು ಆಕೆಯ ಪೋಷಕರ ಅನುಮತಿ ಪಡೆಬೇಕಿತ್ತು ಬದಲಾಗಿ ಅವರ ಅನುಮತಿಯನ್ನು ಪಡೆಯದೇ ಚಿಕಿತ್ಸೆಗೆ ಮುಂದಾಗಿರುವುದು ಸರಿಯಲ್ಲ ಎಂದು ಆಕೆಯ ಪೋಷಕರು ಮತ್ತು ದೊಡ್ಡಪ್ಪ ರಾಜಣ್ಣ ಆರೋಪಿಸಿದ್ದಾರೆ.

ಪ್ರಮುಖ ಸುದ್ದಿ :-   ಶ್ರೀರಂಗಪಟ್ಟಣ: ಐಸ್‌ ಕ್ರೀಂ ತಿಂದ ಬಳಿಕ ಅವಳಿ ಮಕ್ಕಳ ಸಾವು

ಮಗಳು ಕಾಸ್ಮೆಟಿಕ್ ಸರ್ಜರಿಗೆ ಒಳಗಾಗುತ್ತಿದ್ದಾಳೆ ಎಂದು ನಮಗೆ ಗೊತ್ತಿರಲಿಲ್ಲ. ಆಸ್ಪತ್ರೆಯವರು ಕೂಡ ನಮಗೆ ಮಾಹಿತಿ ನೀಡಿಲ್ಲ. ನನ್ನ ಮಗಳು ದಪ್ಪ ಇದ್ದಾಳೆ ಎಂದು ಯಾರೋ ಹೇಳಿದ್ದಾರೆ. ಹಾಗಾಗಿಯೇ ಅವಳು ಸರ್ಜರಿ ಮಾಡಿಸಿಕೊಳ್ಳಲು ಮುಂದಾಗಿದ್ದಾಳೆ. ಆಸ್ಪತ್ರೆಯಲ್ಲಿ ಕೇವಲ ಕೊಬ್ಬು ತಗೆಯುತ್ತೇವೆ ಎಂದು ಹೇಳಿದ್ದರಂತೆ. ಆದರೆ ಅವಳಿಗೆ ಉಸಿರಾಟದ ತೊಂದರೆ ಆಗಿ, ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ’ ಎಂದು ತಂದೆ ಆರೋಪಿಸಿದ್ದಾರೆ.
ʼಒಲವಿನ ನಿಲ್ದಾಣʼ ಧಾರಾವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಟಿ ಚೇತನಾ ಅವರು ಬಿಡುಗಡೆಯ ಹಂತದಲ್ಲಿದ್ದ ಹವಾಯಾಮಿ ಸಿನಿಮಾದಲ್ಲಿಯೂ ನಟಿಸಿದ್ದರು.
ಈ ಘಟನೆ ಕುರಿತು ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement