ಶೀನಾ ಬೋರಾ ಹತ್ಯೆ ಪ್ರಕರಣ: ಇಂದ್ರಾಣಿ ಮುಖರ್ಜಿಗೆ ಜಾಮೀನು ನೀಡಿದ ಸುಪ್ರೀಂ ಕೋರ್ಟ್

ನವದೆಹಲಿ: 2015ರಲ್ಲಿ ನಡೆದ ಶೀನಾ ಬೋರಾ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಶೀನಾ ತಾಯಿ ಇಂದ್ರಾಣಿ ಮುಖರ್ಜಿಗೆ ಸುಪ್ರೀಂ ಕೋರ್ಟ್ ಬುಧವಾರ ಜಾಮೀನು ನೀಡಿದೆ.
ಇಂದ್ರಾಣಿ ಕಳೆದ 6.5 ವರ್ಷಗಳಿಂದ ಜೈಲಿನಲ್ಲಿದ್ದಾರೆ ಎಂಬುದನ್ನು ನ್ಯಾಯಮೂರ್ತಿಗಳಾದ ಎಲ್ ನಾಗೇಶ್ವರ ರಾವ್, ಬಿ ಆರ್ ಗವಾಯಿ ಮತ್ತು ಎ ಎಸ್ ಬೋಪಣ್ಣ ಅವರಿದ್ದ ಪೀಠ ಪರಿಗಣಿಸಿತು.
ನಾವು ಇಂದ್ರಾಣಿ ಮುಖರ್ಜಿಗೆ ಜಾಮೀನು ನೀಡುತ್ತಿದ್ದೇವೆ. ಆರೂವರೆ ವರ್ಷಗಳು (ಆಕೆ ಜೈಲಿನಲ್ಲಿದ್ದ ಅವಧಿ) ತುಂಬಾ ದೀರ್ಘ ಸಮಯ” ಎಂದು ಪೀಠ ಹೇಳಿತು.ಪ್ರಕರಣದ ಅರ್ಹತೆ ಬಗ್ಗೆ ಯಾವುದೇ ಅವಲೋಕನ ಮಾಡುವುದಿಲ್ಲ. ಆದರೆ ವಿಚಾರಣೆ ಶೀಘ್ರದಲ್ಲೇ ಕೊನೆಯಾಗುವ ಸಾಧ್ಯತೆ ಇಲ್ಲ ಎಂದು ಅದು ಹೇಳಿತು.

ಶೇ 50ರಷ್ಟು ಸಾಕ್ಷಿಗಳನ್ನು ಪ್ರಾಸಿಕ್ಯೂಷನ್‌ನಿಂದ ಕೈಬಿಟ್ಟರೂ, ವಿಚಾರಣೆ ಶೀಘ್ರದಲ್ಲೇ ಮುಗಿಯುವುದಿಲ್ಲ” ಎಂದು ಹೇಳಿದ ಪೀಠ, ಈ ಕಾರಣದಿಂದ “ಅವರಿಗೆ (ಇಂದ್ರಾಣಿಗೆ) ಜಾಮೀನು ನೀಡಲಾಗಿದೆ ಪೀಟರ್ ಮುಖರ್ಜಿ (ಪ್ರಕರಣದಲ್ಲಿ ಇಂದ್ರಾಣಿ ಅವರ ಎರಡನೇ ಪತಿ ಮತ್ತು ಉದ್ಯಮಿ) ಅವರಿಗೆ ವಿಧಿಸಲಾದ ಷರತ್ತುಗಳನ್ನೇ ಇಂದ್ರಾಣಿ ಗೂ ವಿಧಿಸಲಾಗುವುದು” ಎಂದು ಹೇಳಿತು.
ಐಪಿಸಿ ಸೆಕ್ಷನ್‌ 120 ಬಿ (ಅಪರಾಧ ಪಿತೂರಿ), 364 (ಅಪಹರಣ), 302 (ಕೊಲೆ) ಮತ್ತು 201 (ಸಾಕ್ಷ್ಯ ನಾಶ) ಅಡಿಯಲ್ಲಿ ಮುಖರ್ಜಿ ಅವರನ್ನು 2015ರಲ್ಲಿ ಬಂಧಿಸಲಾಗಿತ್ತು. ಶೀನಾ ಅವರನ್ನು ಕಾರು ಚಾಲಕ ಶ್ಯಾಂವರ್‌ ರೈ ಸಹಾಯದಿಂದ ಇಂದ್ರಾಣಿ ಹಾಗೂ ಆಕೆಯ ಮಾಜಿ ಪತಿ ಸಂಜಯ್‌ ಖನ್ನಾ, ಎರಡನೇ ಪತಿ ಪೀಟರ್‌ ಮುಖರ್ಜಿ ಕೊಂದಿದ್ದರು ಎಂದು ಸಿಬಿಐ ವಾದಿಸಿತ್ತು.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ: ಮತದಾನಕ್ಕೂ ಮುನ್ನವೇ ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿ...!

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement