ಬೆಂಗಳೂರಿನಲ್ಲಿ ಭಾರೀ ಮಳೆ: ಇಬ್ಬರು ಕಾರ್ಮಿಕರು ಸಾವು

ಬೆಂಗಳೂರು: ರಾಜಧಾನಿ ಬೆಂಗಳೂರಲ್ಲಿ ಮಳೆ ಆರ್ಭಟ ಮುಂದುವರೆದಿದೆ. ನಿನ್ನೆ, ಸೋಮವಾರ ಮಧ್ಯಾಹ್ನದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಇಬ್ಬರು ಕಾರ್ಮಿಕರು ಸಾವಿಗೀಡಾದ ಬಗ್ಗೆ ವರದಿಯಾಗಿದೆ.
ಉಲ್ಲಾಳ ಉಪನಗರದ ಉಪಕಾರ ಲೇಔಟ್‌ನಲ್ಲಿ ಪೈಪ್‌ ಲೈನ್ ಕಾಮಗಾರಿ ವೇಳೆ ಅವಘಡ ಸಂಭವಿಸಿದೆ. ಪೈಪ್‌ ಲೈನ್ ಕಾಮಗಾರಿ ಸ್ಥಳದಲ್ಲಿ ಮಳೆ ನೀರು ತುಂಬಿಕೊಂಡು ಇಬ್ಬರು ಕಾರ್ಮಿಕರು ಉಸಿರು ಕಟ್ಟಿ ಮೃತಪಟ್ಟಿದ್ದಾರೆ. ಮೂವರು ಕಾರ್ಮಿಕರು ಕೆಲಸ ಮಾಡುತ್ತಾ ಇದ್ದರು. ಅದೃಷ್ಟವಶಾತ್ ಓರ್ವ ಪಾರಾಗಿದ್ದರೆ ಎಂದು ಹೇಳಲಾಗಿದೆ.

ಉಲ್ಲಾಳ ಉಪನಗರದ ಉಪಕಾರ್ ಲೇಔಟ್ ಬಳಿ ಕಾವೇರಿ ನೀರಿನ 5 ಹಂತದ ಪೈಪ್ ಲೈನ್ ಕಾಮಗಾರಿಯಲ್ಲಿ ಮೂವರು ಕಾರ್ಮಿಕರು ತೊಡಗಿದ್ದ ವೇಳೆ ಮಳೆ ನೀರು ಒಮ್ಮೆಲೇ ತುಂಬಿಕೊಂಡಿದ್ದೆ. ಓರ್ವ ಕಾರ್ಮಿಕ ಪಾರಾಗಿ ಹೊರಕ್ಕೆ ಬಂದಿದ್ದಾನೆ. ಆದರೆ ಇಬ್ಬರು ಅಲ್ಲಿಂದ ಹೊರಕ್ಕೆ ಬರಲಾಗದೆ ಸಾವಿಗೀಡಾಗಿದ್ದಾರೆ. ನೀರಿನ ರಭಸಕ್ಕೆ ಇಬ್ಬರು ಕಾರ್ಮಿಕರು ಪೈಪ್ ಒಳಗೆಯೇ ಹಲವು ದೂರ ಕೊಚ್ಚಿ ಹೋಗಿದ್ದಾರೆ. ಉಸಿರು ಕಟ್ಟಿ ಇಬ್ಬರು ಸತ್ತಿದ್ದು, ರಾತ್ರಿಯಿಡೀ ಮೃತ ದೇಹ ಅದೇ ಪೈಪ್ ಲೈನ್ ನಲ್ಲಿ ಇತ್ತು ಎಂದು ಹೇಳಲಾಗಿದೆ. ಮೃತರನ್ನು ಬಿಹಾರ ಮೂಲದ ದೇತಭರತ ಹಾಗೂ ಉತ್ತರ ಪ್ರದೇಶದ ಅಂಕಿತಕುಮಾರ್ ಅಂತ ಗುರುತಿಸಲಾಗಿದೆ.
ಇಬ್ಬರು ಕಾರ್ಮಿಕರ ಸಾವಿಗೆ ಸಂಬಂಧಿಸಿದಂತೆ ಇಬ್ಬರು ಗುತ್ತಿಗೆದಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜ್ಞಾನಭಾರತಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಪ್ರಮುಖ ಸುದ್ದಿ :-   ಹುಕ್ಕಾ, ಹುಕ್ಕಾ ಬಾರ್‌ ನಿಷೇಧಿಸಿರುವ ರಾಜ್ಯ ಸರ್ಕಾರದ ಆದೇಶ ಎತ್ತಿ ಹಿಡಿದ ಹೈಕೋರ್ಟ್‌

ರಾಜಧಾನಿ ಬೆಂಗಳೂರಲ್ಲಿ ನಿನ್ನೆ ಮಧ್ಯಾಹ್ನದಿಂದಲೇ ಶುರುವಾದ ಮಳೆ ಬಿಟ್ಟೂ ಬಿಡದಂತೆ ಸುರಿದಿದೆ. ನಿನ್ನೆ ರಾತ್ರಿ 9:45 ರ ವೇಳೆಗೆ ಒಟ್ಡಾರೆ ಬೆಂಗಳೂರಲ್ಲಿ 95 ಮಿಮೀ ಮಳೆ ಸುರಿದಿದೆ. ನಗರದ ಹಲವು ಪ್ರದೇಶದಲ್ಲಿ ಒಂದು ತಾಸಿನ ಆಸುಪಾಸು 100 ಮಿಮೀ ಹೆಚ್ಚು ಮಳೆ ಸುರಿದು ದಾಖಲೆ ನಿರ್ಮಿಸಿದೆ.
ಗುಡುಗು ಸಿಡಿಲಿನಿಂದ ಉಂಟಾದ ವಿದ್ಯುತ್ ವೈಫಲ್ಯದಿಂದಾಗಿ ಗ್ರೀನ್ ಲೈನ್‌ನಲ್ಲಿ ಮೆಟ್ರೋವನ್ನು ನಿಲ್ಲಿಸಬೇಕಾಗಿರುವುದರಿಂದ ಮೆಟ್ರೋ ಸೇವೆಗಳು ಸಹ ಅಲ್ಪಾವಧಿಗೆ ಪರಿಣಾಮ ಬೀರಿದವು.
ಬೆಂಗಳೂರಿನ ಜೆಪಿ ನಗರ, ಜಯನಗರ, ಲಾಲ್‌ಬಾಗ್, ಚಿಕ್ಕಪೇಟೆ, ಮೆಜೆಸ್ಟಿಕ್, ಮಲ್ಲೇಶ್ವರಂ, ರಾಜಾಜಿನಗರ, ಯಶವಂತಪುರ, ಎಂಜಿ ರಸ್ತೆ, ಕಬ್ಬನ್ ಪಾರ್ಕ್, ವಿಜಯನಗರ, ರಾಜರಾಜೇಶ್ವರಿ ನಗರ, ಕೆಂಗೇರಿ, ಮಾಗಡಿ ರಸ್ತೆ ಮತ್ತು ಮೈಸೂರು ರಸ್ತೆ ಸೇರಿದಂತೆ ಅನೇಕ ಪ್ರದೇಶಗಳು ಹೆಚ್ಚು ಬಾಧಿತವಾಗಿವೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement