ಮಹತ್ವದ ಹೆಜ್ಜೆ…. 300 ರೂ.ಗಳ ವರೆಗಿನ ಎಲ್ಲ ಪರೀಕ್ಷೆಗಳೂ ಇನ್ಮುಂದೆ ದೆಹಲಿ ಏಮ್ಸ್‌ನಲ್ಲಿ ಉಚಿತ

ನವದೆಹಲಿ: ದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಎಐಐಎಂಎಸ್) ನಲ್ಲಿರುವ ರೋಗಿಗಳಿಗೆ ₹ 300 ರೂ.ಗಳ ವರೆಗಿನ ವೆಚ್ಚದ ಪರೀಕ್ಷೆಗಳಿಗೆ ಶುಲ್ಕ ವಿಧಿಸಲಾಗುವುದಿಲ್ಲ ಎಂದು ಪ್ರಧಾನ ಸಂಸ್ಥೆ ಗುರುವಾರ ಘೋಷಿಸಿದ್ದು, ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಇದರಿಂದ ದೊಡ್ಡ ರೀತಿಯಲ್ಲಿ ಅನುಕೂಲವಾಗಲಿದೆ. ರಕ್ತ, ಮೂತ್ರ ಪರೀಕ್ಷೆಗಳು, ಅಲ್ಟ್ರಾಸೌಂಡ್, ಎಕ್ಸ್-ರೇ, ಇತ್ಯಾದಿ ಈಗ ಉಚಿತವಾಗಿ ಲಭ್ಯವಿರುತ್ತದೆ. … Continued

ಐಐಟಿ ಮದ್ರಾಸ್‌ನಲ್ಲಿ ಟ್ರಯಲ್ ನೆಟ್‌ವರ್ಕ್‌ನಿಂದ ಮೊದಲ 5G ಕರೆ ಮಾಡಿದ ಸಚಿವ ಅಶ್ವಿನಿ ವೈಷ್ಣವ್

ನವದೆಹಲಿ: ಐಐಟಿ ಮದ್ರಾಸ್‌ನಲ್ಲಿ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಟೆಲಿಕಾಂ ಗೇರ್‌ಗಳನ್ನು ಬಳಸಿಕೊಂಡು ಸ್ಥಾಪಿಸಲಾದ ಪ್ರಾಯೋಗಿಕ ನೆಟ್‌ವರ್ಕ್‌ನಲ್ಲಿ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಗುರುವಾರ ಮೊದಲ 5G ಕರೆ ಮಾಡಿದ್ದಾರೆ. ಸ್ಟಾರ್ಟ್‌ಅಪ್‌ಗಳು ಮತ್ತು ಉದ್ಯಮದವರು ತಮ್ಮ ಉತ್ಪನ್ನಗಳನ್ನು ಸ್ಥಳೀಯವಾಗಿ ಪರೀಕ್ಷಿಸಲು ಮತ್ತು ಮೌಲ್ಯೀಕರಿಸಲು ಮತ್ತು ವಿದೇಶಿ ಸೌಲಭ್ಯಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಐಐಟಿ ಮದ್ರಾಸ್‌ನಲ್ಲಿ ದೇಶದ ಮೊದಲ … Continued

ಮಹಿಳಾ ಬಾಕ್ಸಿಂಗ್ ವಿಶ್ವ ಚಾಂಪಿಯನ್‌ಶಿಪ್: ಭಾರತಕ್ಕೆ ಐತಿಹಾಸಿಕ ಚಿನ್ನ ತಂದುಕೊಟ್ಟ ನಿಖತ್ ಜರೀನ್

ನವದೆಹಲಿ: ಭಾರತದ ನಿಖತ್ ಝರೀನ್ ಬಾಕ್ಸಿಂಗ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಥಾಯ್ಲೆಂಡ್‌ನ ಜುಟಾಮಾಸ್ ಜಿಟ್‌ಪಾಂಗ್ ಅವರನ್ನು ಫೈನಲ್‌ನಲ್ಲಿ ಸರ್ವಾನುಮತದ ನಿರ್ಧಾರದಿಂದ ಸೋಲಿಸಿ ಚಿನ್ನ ಗೆದ್ದಿದ್ದಾರೆ. ಹೆಚ್ಚು ರೇಟಿಂಗ್ ಪಡೆದ ಭಾರತೀಯ ಲೈಟ್‌ವೇಟ್ಸ್‌ ಬಾಕ್ಸರ್ ನಿಖತ್ ಜರೀನ್ IBA ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಮೊದಲ ಪ್ರತಿನಿಧಿಯಾಗಿದ್ದರು. ದೊಡ್ಡ ಬಲಗೈ ಜಾಬ್‌ಗಳಿಂದ ತನ್ನ ಎದುರಾಳಿಯನ್ನು ಸಾಕಷ್ಟು ಆಕ್ರಮಣಕಾರಿಯಾಗಿ … Continued

ಬಿಜೆಪಿ ಸೇರಿದ ಮಾಜಿ ಕಾಂಗ್ರೆಸ್ ನಾಯಕ ಸುನಿಲ್ ಜಾಖರ್

ನವದೆಹಲಿ: ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದ ಪಂಜಾಬ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಸುನಿಲ್ ಜಾಖರ್ ಅವರು, ಈಗ ಬಿಜೆಪಿ ಸೇರ್ಪಡೆಯಾಗಿದ್ದಾರೆ. ‌ ಜಾಖರ್ ಅವರು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ಸಮ್ಮುಖದಲ್ಲಿ ಕೇಸರಿ ಶಾಲು ಧರಿಸಿದರು. ಕಾಂಗ್ರೆಸ್ ನಾಯಕತ್ವ ಮತ್ತು ಮಾಜಿ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಅವರ ವಿರುದ್ಧ ಟೀಕೆಗಳನ್ನು ಮಾಡಿದ್ದಕ್ಕಾಗಿ ಪಕ್ಷವು … Continued

ತಾಲಿಬಾನ್‌ನಿಂದ ಹೊಸ ನಿಯಮ: ಟಿವಿ ಚಾನೆಲ್‌ಗಳಲ್ಲಿ ನಿರೂಪಕಿಯರು ಮುಖ ಮುಚ್ಚಿಕೊಂಡೇ ಕಾರ್ಯಕ್ರಮ ನೀಡ್ಬೇಕಂತೆ..!

ಕಾಬೂಲ್: ಇತ್ತೀಚೆಗಷ್ಟೇ ಮಹಿಳೆಯರಿಗೆ ಶಿಕ್ಷಣ, ಮಹಿಳಾ ಉದ್ಯೋಗಿಗಳಿಗೆ ನಿಷೇಧ ಮತ್ತು ಮಹಿಳೆಯರ ಚಾಲನಾ ಪರವಾನಗಿ ರದ್ದು, ಮಾನವ ಹಕ್ಕುಗಳ ಆಯೋಗ ರದ್ದು ಸೇರಿದಂತೆ ಹಲವು ವಿವಾದಿತ ಕ್ರಮ ಕೈಗೊಂಡಿದ್ದ ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರ ಈಗ ಟಿವಿ ಚಾನೆಲ್‌ಗಳಲ್ಲಿ ಕೆಲಸ ಮಾಡುವ ಎಲ್ಲ ಮಹಿಳಾ ನಿರೂಪಕರಿಗೆ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸುವಾಗ ತಮ್ಮ ಮುಖಗಳನ್ನು ಮುಚ್ಚಿಕೊಳ್ಳುವಂತೆ ನಿರ್ದೇಶಿಸಿದೆ ಎಂದು ವರದಿಯಾಗಿದೆ. … Continued

ರೋಡ್ ರೇಜ್ ಪ್ರಕರಣ: ನವಜೋತ್ ಸಿಂಗ್ ಸಿಧುಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದ ಸುಪ್ರೀಂ ಕೋರ್ಟ್

ನವದೆಹಲಿ:1988 ರ ರೋಡ್ ರೇಜ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ಮತ್ತು ಭಾರತದ ತಂಡದ ಮಾಜಿ ಆಟಗಾರ ನವಜೋತ್ ಸಿಂಗ್ ಸಿಧು ಅವರಿಗೆ ಸುಪ್ರೀಂ ಕೋರ್ಟ್ ಗುರುವಾರ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದೆ. ನ್ಯಾಯಮೂರ್ತಿಗಳಾದ ಎ.ಎಂ. ಖಾನ್ವಿಲ್ಕರ್ ಮತ್ತು ಸಂಜಯ್ ಕಿಶನ್ ಕೌಲ್ ಅವರ ಪೀಠವು 1988 ರ ರೋಡ್ ರೇಜ್ ಪ್ರಕರಣದಲ್ಲಿ ತನಗೆ ವಿಧಿಸಿದ್ದ … Continued

ಕೃಷ್ಣ ಜನ್ಮಭೂಮಿ ಪ್ರಕರಣ: ಮಸೀದಿ ತೆರವು ಕೋರಿದ್ದ ಅರ್ಜಿ ವಿಚಾರಣೆ ಯೋಗ್ಯ ಎಂದ ಮಥುರಾ ಜಿಲ್ಲಾ ನ್ಯಾಯಾಲಯ

ಲಕ್ನೋ: ಮಹತ್ವದ ಬೆಳವಣಿಗೆಯೊಂದರಲ್ಲಿ ಮಥುರಾ ಶಾಹಿ ಈದ್ಗಾ ಮಸೀದಿಯನ್ನು ಕೃಷ್ಣ ಜನ್ಮಭೂಮಿ ಪ್ರದೇಶದಲ್ಲಿ ನಿರ್ಮಿಸಿರುವುದರಿಂದ ಅದನ್ನು ತೆರವುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯು ವಿಚಾರಣಾ ನಿರ್ವಹಣಾ ಯೋಗ್ಯ ಎಂದು ಜಿಲ್ಲಾ ನ್ಯಾಯಾಲಯ ತಿಳಿಸಿದೆ. ಈ ಹಿಂದೆ ಮೊಕದ್ದಮೆ ವಜಾಗೊಳಿಸಿದ್ದ ಸಿವಿಲ್ ನ್ಯಾಯಾಲಯದ ಆದೇಶವನ್ನು ಜಿಲ್ಲಾ ನ್ಯಾಯಾಧೀಶ ರಾಜೀವ್ ಭಾರ್ತಿ ರದ್ದುಗೊಳಿಸಿದರು. “ಫಿರ್ಯಾದಿದಾರ ಮೊಕದ್ದಮೆ ಹೂಡುವ ಹಕ್ಕನ್ನು ಊರ್ಜಿತಗೊಳಿಸಲಾಗಿದೆ. … Continued

ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: 32 ಶೈಕ್ಷಣಿಕ ಜಿಲ್ಲೆಗೆ ಎ ಗ್ರೇಡ್, ಮೊದಲನೇ ಸ್ಥಾನ ಹಂಚಿಕೊಂಡ 145 ವಿದ್ಯಾರ್ಥಿಗಳು

ಬೆಂಗಳೂರು: 021-22ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಇಂದು ಪ್ರಕಟವಾಗಿದ್ದು, ಶೇ.85.63 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಬಾರಿ ಜಿಲ್ಲಾವಾರು ರ್ಯಾಂಕಿಂಗ್​ ಕೈಬಿಡಲಾಗಿದೆ. ಶ್ರೇಣಿ ಆಧರಿಸಿ ಜಿಲ್ಲೆಗಳ ಗುಣಾತ್ಮಕ ಫಲಿತಾಂಶ ವಿಶ್ಲೇಷಿಸಲಾಗಿದೆ ರಾಜ್ಯದ 34 ಶೈಕ್ಷಣಿಕ ಜಿಲ್ಲೆಗಳಲ್ಲಿ 32 ಜಿಲ್ಲೆಗಳು ಎ ಶ್ರೇಣಿ ಪಡೆದಿವೆ. ಬಿ ಶ್ರೇಣಿಗೆ ಸೇರಿರುವ ಜಿಲ್ಲೆಗಳಲ್ಲಿ ಬೆಂಗಳೂರು ದಕ್ಷಿಣ ಹಾಗೂ ಯಾದಗಿರಿ ಮಾತ್ರ … Continued

ಭಯೋತ್ಪಾದನೆಗೆ ಹಣಕಾಸು ಪ್ರಕರಣ: ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕ ಯಾಸಿನ್ ಮಲಿಕ್ ದೋಷಿ ಎಂದು ಎನ್‌ಐಎ ನ್ಯಾಯಾಲಯ ತೀರ್ಪು

ನವದೆಹಲಿ: ಭಯೋತ್ಪಾದನೆ ಹಣಕಾಸು ಪ್ರಕರಣದಲ್ಲಿ ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕ ಯಾಸಿನ್ ಮಲಿಕ್ ಅವರನ್ನು ದೆಹಲಿಯ ಎನ್‌ಐಎ ನ್ಯಾಯಾಲಯ ಗುರುವಾರ ದೋಷಿ ಎಂದು ಘೋಷಿಸಿದೆ. ಶಿಕ್ಷೆಯ ಪ್ರಮಾಣದ ಕುರಿತು ವಾದಗಳು ಮೇ 25 ರಂದು ನಡೆಯಲಿವೆ. ಮುಂದಿನ ವಿಚಾರಣೆಯ ದಿನಾಂಕದ ಮೊದಲು ತನ್ನ ಹಣಕಾಸಿನ ಆಸ್ತಿಗಳ ಬಗ್ಗೆ ಅಫಿಡವಿಟ್ ಅನ್ನು ಒದಗಿಸುವಂತೆ ನ್ಯಾಯಾಲಯವು ಮಲಿಕ್ ಅವರನ್ನು ಕೇಳಿದೆ. … Continued