ವಾರಾಣಸಿ: ಕಾಶಿ ವಿಶ್ವನಾಥ ದೇವಸ್ಥಾನ-ಜ್ಞಾನವಾಪಿ ಮಸೀದಿ ಸಂಕೀರ್ಣದ ವಿಡಿಯೋಗ್ರಾಫಿಕ್ ಸಮೀಕ್ಷೆ ನಡೆಸಲು ವಾರಣಾಸಿಯ ನ್ಯಾಯಾಲಯ ನೇಮಿಸಿದ ಆಯೋಗವು ಮೇ 19 ರಂದು, ಗುರುವಾರ ತನ್ನ ವರದಿಯನ್ನು ಸಲ್ಲಿಸಿದೆ ಎಂದು ವಕೀಲರು ಹೇಳಿದ್ದಾರೆ.
ಜಿಲ್ಲಾ ಸಿವಿಲ್ ನ್ಯಾಯಾಧೀಶ ರವಿಕುಮಾರ್ ದಿವಾಕರ್ ಅವರ ನ್ಯಾಯಾಲಯಕ್ಕೆ ಮೇ 14, 15 ಮತ್ತು 16 ರಂದು ನಡೆದ ಸರ್ವೆ ಕಾರ್ಯದ ವರದಿಯನ್ನು ವಿಶೇಷ ವಕೀಲ ವಿಶಾಲ್ ಸಿಂಗ್ ಸಲ್ಲಿಸಿದ್ದಾರೆ ಎಂದು ಪ್ರಕರಣದಲ್ಲಿ ಹಿಂದೂ ಪರವಾಗಿ ವಕಾಲತ್ತು ವಹಿಸಿರುವ ವಕೀಲ ಮದನ್ ಮೋಹನ್ ಯಾದವ್ ಹೇಳಿದರು.
ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155
ಅಲ್ಲದೆ, ವಕೀಲ ಕಮಿಷನರ್ ಹುದ್ದೆಯಿಂದ ನ್ಯಾಯಾಲಯದಿಂದ ವಜಾಗೊಂಡಿರುವ ಅಜಯ್ ಮಿಶ್ರಾ ಅವರು ಮೇ 6 ಮತ್ತು 7 ರಂದು ನಡೆಸಿದ ಸಮೀಕ್ಷೆಯ ಕುರಿತು ಬುಧವಾರ ಸಂಜೆ ವರದಿ ಸಲ್ಲಿಸಿದ್ದಾರೆ ಎಂದು ಯಾದವ್ ಹೇಳಿದರು.
ಮಂಗಳವಾರ ಮಿಶ್ರಾ ಅವರನ್ನು ಪದಚ್ಯುತಗೊಳಿಸಿದ ನ್ಯಾಯಾಲಯವು ವಿಶಾಲ್ ಸಿಂಗ್ ಅವರನ್ನು ವಿಶೇಷ ವಕೀಲ ಕಮಿಷನರ್ ಆಗಿ ಮತ್ತು ಅಜಯ್ ಪ್ರತಾಪ್ ಸಿಂಗ್ ಅವರನ್ನು ಸಹಾಯಕ ವಕೀಲ ಕಮಿಷನರ್ ಆಗಿ ನೇಮಿಸಿತ್ತು.
ಮರು ರಚನೆಯಾದ ಆಯೋಗವು ಮೇ 14, 15 ಮತ್ತು 16ರಂದು ಸಮೀಕ್ಷೆ ನಡೆಸಿತ್ತು.
ನಿಮ್ಮ ಕಾಮೆಂಟ್ ಬರೆಯಿರಿ