56 ವರ್ಷದ ವ್ಯಕ್ತಿಯ ದೇಹದಿಂದ ಬರೋಬ್ಬರಿ 206 ಕಿಡ್ನಿ ಕಲ್ಲುಗಳನ್ನು ಹೊರತೆಗೆದ ವೈದ್ಯರು..!

ಹೈದರಾಬಾದ್‌: ಆರು ತಿಂಗಳ ಕಾಲ ತೀವ್ರ ನೋವಿನಿಂದ ಬಳಲುತ್ತಿದ್ದ ಹೈದರಾಬಾದ್‌ನಲ್ಲಿ 56 ವರ್ಷದ ವ್ಯಕ್ತಿಯೊಬ್ಬರಿಗೆ ಶಸ್ತ್ರಚಿಕಿತ್ಸೆ ಮಾಡಿದ ನಂತರ ಅವರ ಮೂತ್ರ ಪಿಂಡದಿಂದ 206 ಕಲ್ಲುಗಳನ್ನು ತೆಗೆದುಹಾಕಲಾಯಿತು…! ಅವೇರ್ ಗ್ಲೆನೆಗಲ್ಸ್ ಗ್ಲೋಬಲ್ ಆಸ್ಪತ್ರೆಯಲ್ಲಿ ರೋಗಿಗೆ ಒಂದು ಗಂಟೆ ಸುದೀರ್ಘ ಶಸ್ತ್ರಚಿಕಿತ್ಸೆ ಮಾಡಿದ ನಂತರ ಈ ಕಲ್ಲುಗಳನ್ನು ತೆಗೆಯಲಾಯಿತು.
“ಶಸ್ತ್ರಚಿಕಿತ್ಸೆ ನಂತರ ರೋಗಿಯು ಚೆನ್ನಾಗಿ ಚೇತರಿಸಿಕೊಂಡಿದ್ದು, ಎರಡನೇ ದಿನ ಆಸ್ಪತ್ರೆಯಿಂದ ಅವರನ್ನು ಬಿಡುಗಡೆ ಮಾಡಲಾಯಿತು ಎಂದು ವೈದ್ಯರು ಹೇಳಿದ್ದಾರೆ. ಕೀಹೋಲ್ ಶಸ್ತ್ರಚಿಕಿತ್ಸೆಗೆ ಪೂರ್ವಸಿದ್ಧತೆ ಮಾಡಲಾಯಿತು ಹಾಗೂ ಇದು ಒಂದು ಗಂಟೆಯ ಕಾಲ ನಡೆಯಿತು.

ನಲ್ಗೊಂಡದ ನಿವಾಸಿ ವೀರಮಲ್ಲ ರಾಮಲಕ್ಷ್ಮಯ್ಯ ಅವರು ಏಪ್ರಿಲ್ 22 ರಂದು ಅವೇರ್ ಗ್ಲೆನೆಗಲ್ಸ್ ಗ್ಲೋಬಲ್ ಆಸ್ಪತ್ರೆಯ ವೈದ್ಯರನ್ನು ಸಂಪರ್ಕಿಸಿದ್ದರು. ಅವರು ಸ್ಥಳೀಯ ಆರೋಗ್ಯ ವೈದ್ಯರು ಸೂಚಿಸಿದ ಕೆಲವು ಔಷಧಿಗಳನ್ನು ತೆಗೆದುಕೊಂಡರು ಅದರಿಂದ ಅವರಿಗೆ ನೋವು ಕಡಿಮೆಯಾಗಲಿಲ್ಲ. ನೋವು ಅವರ ದೈನಂದಿನ ಕಾರ್ಯಗಳ ಮೇಲೆ ಪರಿಣಾಮ ಬೀರಿತು ಮತ್ತು ಈ ಕಲ್ಲುಗಳಿಂದಾಗಿ 56 ವರ್ಷ ವಯಸ್ಸಿನ ರೋಗಿ ಆರು ತಿಂಗಳ ಕಾಲ ಎಡ ಸೊಂಟದಲ್ಲಿ ತೀವ್ರವಾದ ನೋವಿನಿಂದ ಬಳಲುತ್ತಿದ್ದರು. ಬೇಸಿಗೆಯಲ್ಲಿ ಹೆಚ್ಚುತ್ತಿರುವ ತಾಪಮಾನದಿಂದಾಗಿ ಇದು ಮತ್ತಷ್ಟು ಉಲ್ಬಣಗೊಂಡಿತು.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ 2ನೇ ಹಂತದ ಮತದಾನ : ಶ್ರೀಮಂತ ಅಭ್ಯರ್ಥಿ ₹ 622 ಕೋಟಿ ಒಡೆಯ, ಅತ್ಯಂತ ಬಡ ಅಭ್ಯರ್ಥಿ ಬಳಿ ಇರುವುದು ಕೇವಲ...

ಕೊನೆಗೆ ಅವರುಅವೇರ್ ಗ್ಲೆನೆಗಲ್ಸ್ ಗ್ಲೋಬಲ್ ಆಸ್ಪತ್ರೆ ಗೆ ಬಂದರು. ಆಸ್ಪತ್ರೆಯ ಹಿರಿಯ ಮೂತ್ರಶಾಸ್ತ್ರಜ್ಞ ಡಾ.ಪೂಲಾ ನವೀನ್ ಕುಮಾರ್, ಆರಂಭಿಕ ತಪಾಸಣೆ ಮತ್ತು ಅಲ್ಟ್ರಾಸೌಂಡ್ ಸ್ಕ್ಯಾನ್‌ಗಳಿಂದ ಬಹು ಎಡ ಮೂತ್ರಪಿಂಡದ ಕ್ಯಾಲ್ಕುಲಿ (ಎಡಭಾಗದಲ್ಲಿ ಮೂತ್ರಪಿಂಡದ ಕಲ್ಲುಗಳು) ಇರುವಿಕೆಯನ್ನು ಕಂಡುಕೊಂಡರು.
ನಂತರ ಶಸ್ತ್ರಚಿಕಿತ್ಸೆ ನಡೆಸಲು ನಿರ್ಧರಿಸಲಾಯಿತು. ಡಾ. ನವೀನ್ ಕುಮಾರ್ ಅವರಿಗೆ ಮೂತ್ರಶಾಸ್ತ್ರಜ್ಞ ಡಾ. ವೇಣು, ಅರಿವಳಿಕೆ ತಜ್ಞ ಡಾ. ಮೋಹನ್ ಸಹಕರಿಸಿದರು. ಶಸ್ತ್ರಚಿಕಿತ್ಸೆ ಸಮಯದಲ್ಲಿ ಬರೋಬ್ಬರಿ 206 ಮೂತ್ರಪಿಂಡದ ಕಲ್ಲುಗಳನ್ನು ತೆಗೆಯಲಾಯಿತು.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement