ಈ ಯೋಜನೆಯ ಎಲ್​ಪಿಜಿ ಸಿಲಿಂಡರ್​ಗೆ 200 ರೂ. ಸಬ್ಸಿಡಿ ಘೋಷಿಸಿದ ಕೇಂದ್ರ ಸರ್ಕಾರ..!

ನವದೆಹಲಿ: ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಸುಮಾರು 9 ಕೋಟಿ ಫಲಾನುಭವಿಗಳಿಗೆ ಪ್ರತಿ ಸಿಲಿಂಡರ್‌ಗೆ (ಒಟ್ಟು 12 ಸಿಲಿಂಡರ್‌ಗಳ ವರೆಗೆ) 200 ರೂಪಾಯಿ ಸಬ್ಸಿಡಿಯನ್ನು (LPG Subsidy) ಕೇಂದ್ರ ಸರ್ಕಾರ ಶನಿವಾರ ಘೋಷಿಸಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ಕುರಿತು ಟ್ವೀಟ್ ಮಾಡಿದ್ದು, ಈ ವರ್ಷ ಪ್ರಧಾನ ಮಂತ್ರಿ ಉಜ್ವಲ ಯೋಜನೆಯ 9 ಕೋಟಿಗೂ ಹೆಚ್ಚು ಫಲಾನುಭವಿಗಳಿಗೆ ಪ್ರತಿ ಗ್ಯಾಸ್ ಸಿಲಿಂಡರ್‌ಗೆ 200 ರೂ.ಗಳ ಸಬ್ಸಿಡಿ ನೀಡುತ್ತೇವೆ. ಇದು ನಮ್ಮ ದೇಶದ ಪ್ರತಿ ಮನೆಯ ತಾಯಂದಿರಿಗೆ, ಸಹೋದರಿಯರಿಗೆ ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.

ನಾವು ಪೆಟ್ರೋಲ್ ಮೇಲಿನ ಕೇಂದ್ರ ಅಬಕಾರಿ ಸುಂಕವನ್ನು ಲೀಟರ್‌ಗೆ 8 ಮತ್ತು ಡೀಸೆಲ್‌ಗೆ 6 ರಷ್ಟು ಕಡಿಮೆ ಮಾಡುತ್ತಿದ್ದೇವೆ. ಇದರಿಂದ ಪೆಟ್ರೋಲ್ ದರ ಲೀಟರ್‌ಗೆ 9.5 ಮತ್ತು ಡೀಸೆಲ್‌ಗೆ ₹7 ಇಳಿಕೆ ಆಗಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಬಜೆಟ್‌ನಲ್ಲಿ 1.05 ಲಕ್ಷ ಕೋಟಿ ರಸಗೊಬ್ಬರ ಸಬ್ಸಿಡಿ ಜೊತೆಗೆ, ಭಾರತದ ರೈತರಿಗೆ ಮತ್ತಷ್ಟು ಸಹಾಯ ಮಾಡಲು ಹೆಚ್ಚುವರಿ 1.10 ಲಕ್ಷ ಕೋಟಿ ನೀಡಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಜೆಡಿಯು ಯುವ ಮುಖಂಡನ ಗುಂಡಿಕ್ಕಿ ಹತ್ಯೆ

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement