ಬೆಂಗಳೂರು: ಬೆಂಗಳೂರಿನಲ್ಲಿ 8 ವಲಯಗಳಿಗೆ ಬೆಂಗಳೂರಿನ ಸಚಿವರ ನೇತೃತ್ವದಲ್ಲಿ ಕಾರ್ಯಪಡೆಗಳನ್ನು ರಚಿಸಲಾಗಿದೆ. ದಾವೋಸ್ ಪ್ರವಾಸಕ್ಕೂ ಮೊದಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೆಂಗಳೂರಿನ ಎಂಟು ವಲಯಗಳ ಜವಾಬ್ದಾರಿಯನ್ನು ಸಚಿವರಿಗೆ ಹಂಚಿಕೆ ಮಾಡಿದ್ದಾರೆ.
advertisement
ಭಾನುವಾರ ಮುಖ್ಯಮಂತ್ರಿ ಬೊಮ್ಮಾಯಿ ನೇತೃತ್ವದಲ್ಲಿ ಸಭೆ ನಡೆದಿದ್ದು, ಸಭೆ ಬಳಿಕ ಈ ಕಾರ್ಯಪಡೆ ರಚಿಸಲಾಗಿದೆ. ಇದರಲ್ಲಿ ಸಂಬಂಧಪಟ್ಟ ವಲಯಗಳ ಶಾಸಕರು, ಸಂಸದರು ಮತ್ತು ಬಿಬಿಎಂಪಿ ಅಧಿಕಾರಿಗಳು ಸದಸ್ಯರಾಗಿರುತ್ತಾರೆ. ವಲಯಗಳ ಜಂಟಿ ಆಯುಕ್ತರು ಇದರ ಸಂಚಾಲಕರಾಗಿ ಕಾರ್ಯ ನಿರ್ವಹಿಸುತ್ತಾರೆ.
ಆರ್ ಅಶೋಕ್- ದಕ್ಷಿಣ ವಲಯ, ಡಾ.ಅಶ್ವತ್ಥ ನಾರಾಯಣ- ಪೂರ್ವ ವಲಯ, ವಿ ಸೋಮಣ್ಣ- ಪಶ್ಚಿಮ ವಲಯ, ಎಸ್ ಟಿ ಸೋಮಶೇಖರ್ -ಆರ್ ಆರ್ ನಗರ ವಲಯ, ಬೈರತಿ ಬಸವರಾಜ್- ಮಹದೇವಪುರ ವಲಯ, ಗೋಪಾಲಯ್ಯ -ಬೊಮ್ಮನಹಳ್ಳಿ ವಲಯ, ಮುನಿರತ್ನ -ಯಲಹಂಕ ಮತ್ತು ದಾಸರಹಳ್ಳಿ ವಲಯದ ಜವಾಬ್ದಾರಿ ನೀಡಲಾಗಿದೆ.
ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ಟೆಲಿಗ್ರಾಮ್ ಚಾನೆಲ್ ಸೇರಿ | |
ವಾಟ್ಸಾಪ್ ಗ್ರೂಪ್ ಸೇರಿ | |
ಫೇಸ್ ಬುಕ್ ಫಾಲೋ ಮಾಡಿ | |
ಗೂಗಲ್ ನ್ಯೂಸ್ ನಲ್ಲಿ ಸೇರಿ | |
ಟ್ವಿಟರ್ ನಲ್ಲಿ ಫಾಲೋ ಮಾಡಿ |
ನಿಮ್ಮ ಕಾಮೆಂಟ್ ಬರೆಯಿರಿ