ಆಸ್ಪತ್ರೆಯಲ್ಲಿ ಮೃತಪಟ್ಟಿದೆ ಎಂದು ಘೋಷಿಸಿದ ನವಜಾತ ಶಿಶು ಅಂತ್ಯಸಂಸ್ಕಾರ ಮಾಡುವ ಮೊದಲು ಜೀವಂತ…!

ಜಮ್ಮು: ಸೋಮವಾರ ಜಮ್ಮು ಮತ್ತು ಕಾಶ್ಮೀರದ ರಾಂಬನ್ ಜಿಲ್ಲೆಯ ಬನಿಹಾಳ್‌  ಉಪ ಜಿಲ್ಲಾ ಆಸ್ಪತ್ರೆಯಲ್ಲಿ ನವಜಾತ ಶಿಶು ಮೃತಪಟ್ಟಿದೆ ಎಂದು ಘೋಷಿಸಲಾಯಿತು. ನಂತರ ಕುಟುಂಬ ಸದಸ್ಯರು ಸಮಾಧಿ ಮಾಡಲು ಕರೆದೊಯ್ಯುವಾಗ ಮಗು ಜೀವಂತವಾಗಿರುವುದು ಕಂಡುಬಂದಿದೆ.
ನಿರ್ಲಕ್ಷ್ಯದ ವಿರುದ್ಧ ಕೋಪಗೊಂಡ ಮಗುವಿನ ಕುಟುಂಬ ಸದಸ್ಯರು ಆಸ್ಪತ್ರೆಯ ಹೊರಗೆ ಪ್ರತಿಭಟನೆ ನಡೆಸಿದರು. ಘಟನೆಯನ್ನು ಗಮನಿಸಿದ ಅಧಿಕಾರಿಗಳು ಶಿಶುವಿನ ಕುಟುಂಬದವರ ಪ್ರತಿಭಟನೆಯ ನಂತರ ಇಬ್ಬರು ಆಸ್ಪತ್ರೆಯ ನೌಕರರನ್ನು ಅಮಾನತುಗೊಳಿಸಿದ್ದಾರೆ.
ಬಂಕೂಟ್ ನಿವಾಸಿ ಬಶರತ್ ಅಹ್ಮದ್ ಅವರ ಪತ್ನಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಲಾಗಿದೆ. ನಂತರ, ಮಗು ಸತ್ತಿದೆ ಎಂದು ಆಸ್ಪತ್ರೆಯ ಸಿಬ್ಬಂದಿ ಕುಟುಂಬಕ್ಕೆ ತಿಳಿಸಿದರು. ಬಳಿಕ ಮಗುವನ್ನು ಅಂತ್ಯಸಂಸ್ಕಾರಕ್ಕೆ ಕೊಂಡೊಯ್ಯಲಾಯಿತು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಆದರೆ ಕುಟುಂಬದ ಸದಸ್ಯರು ಮಗುವಿನ ಅಂಗಾಂಗಳ ಚಲನೆ ಗಮನಿಸಿ ಇತರರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಮಗುವನ್ನು ಮತ್ತೆ ಆಸ್ಪತ್ರೆಗೆ ಸಾಗಿಸಲಾಗಿದ್ದು, ಅಲ್ಲಿಂದ ವಿಶೇಷ ಚಿಕಿತ್ಸೆಗಾಗಿ ಶ್ರೀನಗರದ ಆಸ್ಪತ್ರೆಗೆ ರವಾನಿಸಲಾಗಿದೆ.
ಏತನ್ಮಧ್ಯೆ, ಎಸ್‌ಎಚ್‌ಒ ಬನಿಹಾಲ್ ಮುನೀರ್ ಖಾನ್ ನೇತೃತ್ವದ ಪೊಲೀಸ್ ತಂಡವು ಆಸ್ಪತ್ರೆಗೆ ಆಗಮಿಸಿ ಪ್ರತಿಭಟನಾಕಾರರನ್ನು ಸಮಾಧಾನಪಡಿಸಿದರು ಮತ್ತು ನಿರ್ಲಕ್ಷ್ಯಕ್ಕೆ ತಪ್ಪಿತಸ್ಥರೆಂದು ಕಂಡುಬಂದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
“ನವಜಾತ ಶಿಶುವಿನ ಸಾವಿನ ಪ್ರಕರಣದ ವಿಚಾರಣೆ ಬಾಕಿಯಿದೆ, ಎಸ್‌ಡಿಹೆಚ್ ಬನಿಹಾಲ್‌ನ ಗೈನೆ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಜೂನಿಯರ್ ಸ್ಟಾಫ್ ನರ್ಸ್ ಸುಮಿನಾ ಬೇಗಂ ಮತ್ತು ಸ್ವೀಪರ್‌ ಹಜಾರಾ ಬೇಗಂ ಅವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ” ಎಂದು ಬಿಎಂಒ ಆದೇಶ ಹೇಳಿದೆ.

ಪ್ರಮುಖ ಸುದ್ದಿ :-   ರಾಹುಲ್ ಗಾಂಧಿ ಸ್ಪರ್ಧೆಯ ಸಸ್ಪೆನ್ಸ್ ನಡುವೆ ಅಮೇಥಿಯಲ್ಲಿ ರಾರಾಜಿಸುತ್ತಿರುವ "ರಾಬರ್ಟ್ ವಾದ್ರಾ ಅಬ್ ಕಿ ಬಾರ್" ಪೋಸ್ಟರ್...!

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement