ದುಬಾರಿ ವಾಚ್ ಮಾರಲು ಹೋದ ಭಾರತದ ತಂಡದ ವಿಕೆಟ್‌ ಕೀಪರ್‌ ರಿಷಭ್ ಪಂತಗೆ 1.63 ಕೋಟಿ ರೂ.ಪಂಗನಾಮ…!

ನವದೆಹಲಿ: ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಹಾಗೂ ಭಾರತದ ಕ್ರಿಕೆಟ್‌ ತಂಡದ ವಿಕೆಟ್‌ ಕೀಪರ್‌ ರಿಷಭ್ ಪಂತ್ ಅವರು ತಮ್ಮಲ್ಲಿದ್ದ ದುಬಾರಿ ಬೆಲೆಯ ವಾಚುಗಳು ಹಾಗೂ ಚಿನ್ನಾಭರಣಗಳನ್ನು ಮಾರಲು ಹೋಗಿ 1.63 ಕೋಟಿ ಕಳೆದುಕೊಂಡ ಪ್ರಕರಣ ಬೆಳಕಿಗೆ ಬಂದಿದೆ.

advertisement

ರಿಷಭ್ ಪಂತ್ ಅವರಿಗೆ ವಾಚ್‍ಗಳ ಮೋಹವಿದ್ದು ದುಬಾರಿ ಬೆಲೆಯ ವಾಚುಗಳನ್ನು ಕೊಂಡುಕೊಳ್ಳಲು ಸದಾ ಮುಂದಿರುತ್ತಾರೆ.
ತಮ್ಮಲ್ಲಿರುವ ಹಳೆಯ ದುಬಾರಿ ವಾಚುಗಳನ್ನು ಮಾರಲು ಹೋದ ರಿಷಭ್ ಪಂತ್‍ಗೆ ಹರಿಯಾಣ ಕ್ರಿಕೆಟರ್ ಮೃಣಾಂಕ್ ಸಿಂಗ್ ಮೋಸ ಮಾಡಿ ಪರಾರಿಯಾಗಿದ್ದು ಈತನ ವಿರುದ್ಧ ರಿಷಭ್ ಪಂತ್‌ ಅವರ ಮ್ಯಾನೇಜರ್ ಪುನೀತ್ ಸೋಲಂಕಿ ದೂರು ನೀಡಿದ್ದಾರೆ. 2021ರ ಜನವರಿಯಲ್ಲಿ ಮೃಣಾಂಕ್ ಸಿಂಗ್ ನಾನು ಒಬ್ಬ ಖ್ಯಾತ ಕ್ರಿಕೆಟಿಗನಾಗಿದ್ದು, ಐಷಾರಾಮಿ ವಾಚುಗಳು, ಬ್ಯಾಗ್‍ಗಳು, ಆಭರಣಗಳನ್ನು ಖರೀದಿಸುವ ಹಾಗೂ ಮಾರಾಟ ಮಾಡುವ ವೃತ್ತಿಯನ್ನೂ ಮಾಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾನೆ.

ಅಲ್ಲದೆ, ಮೃಣಾಂಕ್ ರಿಷಭ್ ಪಂತ್ ಬಳಿ ಇದ್ದ 36.25 ಲಕ್ಷ ಬೆಲೆ ಬಾಳುವ ಫ್ರಾಂಕ್ ಮರ್ಲರ್ ಹಾಗೂ 62.60 ಲಕ್ಷ ಮೌಲ್ಯದ ರಿಚರ್ಡ್ ಮಿಲ್ಲೆ ಎಂಬ ವಾಚುಗಳು ಹಾಗೂ ಕೆಲವು ಚಿನ್ನಾಭರಣಗಳನ್ನು ಒಳ್ಳೆಯ ಬೆಲೆಗೆ ಮಾರಿಕೊಡುವುದಾಗಿ ಹೇಳಿ ಚೆಕ್ ನೀಡಿ ಖರೀದಿಸಿದ್ದ. ಆದರೆ ಮೃಣಾಂಕ್ ನೀಡಿದ ಚೆಕ್ ಬೌನ್ಸ್ ಆದಾಗ ರಿಷಭ್ ಪಂತ್ ಹಾಗೂ ಮ್ಯಾನೇಜರ್ ಪುನೀತ್ ಸೋಲಂಕಿ ಅವರು ತಾವು ಮೋಸ ಹೋಗಿರುವುದಾಗಿ ತಿಳಿದು ಜುಹು ಪೊಲೀಸರಿಗೆ ದೂರು ನೀಡಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನನ್ನು ಬಂಧಿಸಿದ ಪೊಲೀಸರು 6 ಲಕ್ಷ ಹಣ ವಶಪಡಿಸಿಕೊಂಡು ವಿಚಾರಣೆ ನಡೆಸಿದಾಗ ಮೃಣಾಂಕ್, ಪಂತ್‍ಗಲ್ಲದೆ ಹಲವರು ಕ್ರಿಕೆಟಿಗರಿಗೆ ಮೋಸ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ಟೆಲಿಗ್ರಾಮ್ ಚಾನೆಲ್ ಸೇರಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಓದಿರಿ :-   ಮೂಡ್ ಆಫ್ ನೇಷನ್ ಸಮೀಕ್ಷೆ: 2024ರಲ್ಲಿಯೂ ಮೋದಿಯೇ ಪ್ರಧಾನಿಯಾಗಬೇಕೆಂದು ಅರ್ಧಕ್ಕಿಂತ ಹೆಚ್ಚು ಜನರ ಒಲವು; ಸಿಎಂಗಳಲ್ಲಿ ನವೀನ್‌ ಪಟ್ನಾಯಕ್‌ ಬೆಸ್ಟ್‌

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

/ 5. ಒಟ್ಟು ವೋಟುಗಳು

ನಿಮ್ಮ ಕಾಮೆಂಟ್ ಬರೆಯಿರಿ

advertisement