ಧಾರವಾಡ: ಲಕ್ಕಿ ಕಾರಿನಲ್ಲಿ ಬಂದು ಹೊರಟ್ಟಿ ನಾಮಪತ್ರ

posted in: ರಾಜ್ಯ | 0

ಧಾರವಾಡ: ಪಶ್ಚಿಮ ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಚುನಾವಣೆಯ ಬಿಜೆಪಿ ಅಭ್ಯರ್ಥಿಯಾಗಿರುವ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಇಂದು, ಮಂಗಳವಾರ ಧಾರವಾಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.
ಪತ್ನಿ ಹೇಮಲತಾ ಜೊತೆ ತಮ್ಮ ಲಕ್ಕಿ ಅಂಬಾಸಿಡರ್‌ ಕಾರಿನಲ್ಲಿ ಧಾರವಾಡ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಅವರು, ಒಂದು ಸೆಟ್ ನಾಮಪತ್ರ ಪತ್ನಿ ಜೊತೆ ಹಾಗೂ ಮತ್ತೊಂದು ಸೆಟ್ ನಾಮಪತ್ರ ತಮ್ಮ ಆಪ್ತರ ಜೊತೆ ಸಲ್ಲಿಸಿದ್ದಾರೆ.

advertisement

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಎರಡು ಸೆಟ್‍ನಲ್ಲಿ ನಾಮಪತ್ರ ಸಲ್ಲಿಸಿದ್ದೇನೆ. ಎರಡೂ ಸೆಟ್ ನಾಮಪತ್ರ ಸ್ವೀಕಾರ ಆಗಿವೆ. ಮೇ 26ಕ್ಕೆ ಮುಖ್ಯಮಂತ್ರಿ ಬೊಮ್ಮಾಯಿ., ಪ್ರಹ್ಲಾದ ಜೋಶಿ ಸೇರಿ ಅನೇಕ ನಾಯಕರು ಬರುತ್ತಾರೆ. ಆಗ ಮತ್ತೊಮ್ಮೆ ನಾಮಪತ್ರ ಸಲ್ಲಿಸುವುದಾಗಿ ತಿಳಿಸಿದರು.
ಅಂಬಾಸಿಡರ್‌ ಅಲ್ಲಿ ಬಂದು ನಾಮಪತ್ರ ಸಲ್ಲಿಕೆ ಮಾಡಿದ ಬಗ್ಗೆ ಮಾತನಾಡಿದ ಅವರು, ನನಗೆ ಈ ಕಾರಿನ ಮೇಲೆ ಒಂದು ಭಾವನಾತ್ಮಕ ಸಂಬಂಧವಿದೆ, ನನಗೆ ಈ ಕಾರ್ ಮೇಲೆ ಬಹಳ ಪ್ರೀತಿ, ಆ ಪ್ರೀತಿಗಾಗಿ ತೆಗೆದುಕೊಂಡು ಬಂದಿದ್ದೇನೆ. ಈಗಾಗಲೇ ಅದು 8 ಲಕ್ಷ ಕಿ.ಮೀ ಓಡಿದೆ, ಎಲ್ಲರಿಗೂ CNB 5757 ಅಂದರೆ ಪರಿಚಯ ಎಂದ ಅವರು, ಈ ಕಾರಿನಲ್ಲಿ ಹೋದರೆ ಹೊರಟ್ಟಿ ಬಂದು ಎಂದು ಹೇಳುತ್ತಿದ್ದರು. ಶುಭ ಕಾರ್ಯಕ್ಕೆ ಈ ಕಾರ್ ಒಳ್ಳೆಯದು ಎಂದು ತಲೆಯಲ್ಲಿದ್ದು, ಹೀಗಾಗಿ ಆ ಕಾರು ಬಳಸುತ್ತೇವೆ ಎಂದರು

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ಟೆಲಿಗ್ರಾಮ್ ಚಾನೆಲ್ ಸೇರಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಓದಿರಿ :-   ಬೆಳಗಾವಿ ನಂತರ ಈಗ ಮೂಡಲಗಿಯ ಧರ್ಮಟ್ಟಿಯಲ್ಲೂ ಚಿರತೆ ಪ್ರತ್ಯಕ್ಷ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ

advertisement