ಕಾಶ್ಮೀರ ಪ್ರತ್ಯೇಕತಾವಾದಿ ಯಾಸಿನ್ ಮಲಿಕ್ ಪರ ಬ್ಯಾಟ್ ಬೀಸಿದ ಶಾಹಿದ್ ಅಫ್ರಿದಿ: ಪಾಕಿಸ್ತಾನಿ ಕ್ರಿಕೆಟಿಗನ ವಿರುದ್ಧ ಹರಿಹಾಯ್ದ ಅಮಿತ್ ಮಿಶ್ರಾ

ನವದೆಹಲಿ: ಕಾಶ್ಮೀರಿ ಪ್ರತ್ಯೇಕತಾವಾದಿ ಯಾಸಿನ್ ಮಲಿಕ್ ಅವರ ಭವಿಷ್ಯವನ್ನು ದೆಹಲಿ ನ್ಯಾಯಾಲಯ ನಿರ್ಧರಿಸುವ ನಿಮಿಷಗಳ ಮೊದಲು, ಭಯೋತ್ಪಾದಕ ಮಾಸ್ಟರ್ ಮೈಂಡ್ ಬಗ್ಗೆ ಸಹಾನುಭೂತಿ ಮತ್ತು ಭಾರತೀಯ ನ್ಯಾಯ ವ್ಯವಸ್ಥೆಯ ವಿರುದ್ಧ ಮಾತನಾಡಿದ್ದಕ್ಕಾಗಿ ಪಾಕಿಸ್ತಾನಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ವಿರುದ್ಧ ಭಾರತೀಯ ಕ್ರಿಕೆಟಿಗ ಅಮಿತ್ ಮಿಶ್ರಾ ಕಿಡಿಕಾರಿದ್ದಾರೆ.
ಕಾಶ್ಮೀರಿ ಪ್ರತ್ಯೇಕತಾವಾದಿ ಮತ್ತು ಜಮ್ಮು ಮತ್ತು ಕಾಶ್ಮೀರ ಲಿಬರೇಶನ್ ಫ್ರಂಟ್ (ಜೆಕೆಎಲ್‌ಎಫ್) ಸಂಸ್ಥಾಪಕ ಯಾಸಿನ್ ಮಲಿಕ್ ಭಯೋತ್ಪಾದಕ ನಿಧಿ ಪ್ರಕರಣದಲ್ಲಿ ಎನೈಎ ಕೋರ್ಟ್‌ ಆತನಿಗೆ ಬುಧವಾರ ಜೀವಾವಧಿ ಶಿಕ್ಷೆ ವಿಧಿಸಿದೆ.

ತೀರ್ಪು ಪ್ರಕಟಿಸುವ ಕೆಲವೇ ಕ್ಷಣಗಳ ಮೊದಲು ಪಾಕಿಸ್ತಾನಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಅವರು ಯಾಸಿನ್ ಮಲಿಕ್ ಅವರನ್ನು ಬೆಂಬಲಿಸಿದರು ಮತ್ತು ಅವರ ವಿರುದ್ಧ ಸುಳ್ಳು ಭಾರತದಲ್ಲಿ ಆರೋಪಗಳನ್ನು ಹೊರಿಸಲಾಗಿದೆ. ಇದು ಭಾರತದಿಂದ ಕಾಶ್ಮೀರವು ಸ್ವಾತಂತ್ರ್ಯ ಪಡೆಯುವ ಹೋರಾಟದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಮಾನವ ಹಕ್ಕುಗಳ ದುರುಪಯೋಗದ ವಿರುದ್ಧ ವಿಮರ್ಶಾತ್ಮಕ ಧ್ವನಿಗಳನ್ನು ಮೌನಗೊಳಿಸಲು ಭಾರತದ ನಿರಂತರ ಪ್ರಯತ್ನಗಳು ನಿಷ್ಪ್ರಯೋಜಕವಾಗಿದೆ. ಕಾಶ್ಮೀರದ ನಾಯಕರ ವಿರುದ್ಧ ಅನ್ಯಾಯ ಮತ್ತು ಕಾನೂನುಬಾಹಿರ ಚಟುವಟಿಕೆಗಳ ಬಗ್ಗೆ ವಿಶ್ವಸಂಸ್ಥೆಯು ಈ ವಿಷಯದಲ್ಲಿ ಮಧ್ಯಪ್ರವೇಶಿಸಬೇಕು ಎಂದು ಒತ್ತಾಯಿಸುವ ಮೂಲಕ ಮತ್ತೊಮ್ಮೆ ತಮ್ಮ ಭಾರತ ವಿರೋಧಿ ನಿಲುವು ಪ್ರದರ್ಶಿಸಿದ್ದಾರೆ.

ಪ್ರಮುಖ ಸುದ್ದಿ :-   ದೆಹಲಿ ವಕ್ಫ್ ಬೋರ್ಡ್ ಹಗರಣ : 9 ತಾಸುಗಳ ವಿಚಾರಣೆಯ ನಂತರ ಎಎಪಿ ನಾಯಕ ಅಮಾನತುಲ್ಲಾ ಖಾನ್ ಬಂಧಿಸಿದ ಇ.ಡಿ.

https://twitter.com/SAfridiOfficial/status/1529357436733337600?ref_src=twsrc%5Etfw%7Ctwcamp%5Etweetembed%7Ctwterm%5E1529357436733337600%7Ctwgr%5E%7Ctwcon%5Es1_&ref_url=https%3A%2F%2Fnewsroompost.com%2Fsports%2Fshahid-afridi-bats-for-separatist-yasin-malik-amit-mishra-blasts-pakistani-cricketer%2F5104040.html

ಶಾಹಿದ್‌ ಅಫ್ರಿದಿ ಹೇಳಿಕೆಗೆ ತಿರುಗೇಟು ಭಾರತದ ಮಾಜಿ ಕ್ರಿಕೆಟಿಗ ಅಮಿತ್ ಮಿಶ್ರಾ ಭಯೋತ್ಪಾದಕ ಪ್ರಾಯೋಜಕನ ಬಗ್ಗೆ ಸಹಾನುಭೂತಿ ಹೊಂದಿದ್ದಕ್ಕಾಗಿ ಅವನ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಅಫ್ರಿದಿ ಅವರ ಹೇಳಿಕೆಗಳಿಗೆ ಉತ್ತರಿಸಿದ ಅಮಿತ್ ಮಿಶ್ರಾ, JKLF ನಾಯಕ ಯಾಸಿನ್‌ ಮಲಿಕ್‌ ಸ್ವತಃ ನ್ಯಾಯಾಲಯದಲ್ಲಿ ಆರೋಪಗಳನ್ನು ಒಪ್ಪಿಕೊಂಡಿದ್ದಾರೆ ಎಂದು ತಿವಿದಿದ್ದಾರೆ. ನಿಮ್ಮ ಜನ್ಮದಿನಾಂಕದಂತೆ ಎಲ್ಲವೂ ತಪ್ಪುದಾರಿಗೆಳೆಯುವುದಿಲ್ಲ ಎಂದು ಅಮಿತ್ ಮಿಶ್ರಾ ಟ್ವೀಟ್‌ನಲ್ಲಿ ಅಫ್ರಿದಿಗೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಶಾಹಿದ್ ಅಫ್ರಿದಿ ಮಾತ್ರವಲ್ಲ, ಪಾಕಿಸ್ತಾನದ ಅನೇಕ ಟ್ವಿಟರ್ ಹ್ಯಾಂಡಲ್‌ಗಳು ಯಾಸಿನ್ ಮಲಿಕ್ ಅವರ ಪ್ರಾಸಿಕ್ಯೂಷನ್ ವಿರುದ್ಧ ಧ್ವನಿ ಎತ್ತುತ್ತಿವೆ. ಅಪರಾಧಿ ಕಾಶ್ಮೀರಿ ಪ್ರತ್ಯೇಕತಾವಾದಿಯ ಬಗ್ಗೆ ಸಹಾನುಭೂತಿ ಮೂಡಿಸಲು ಹಲವಾರು ಪಾಕಿಸ್ತಾನಿ ಹ್ಯಾಂಡಲ್‌ಗಳು ಸಾಮಾಜಿಕ ಮಾಧ್ಯಮವನ್ನು ಬಳಸಿಕೊಂಡಿವೆ.ಭದ್ರತಾ ಪಡೆಗಳ ಮೇಲೆ ಕಲ್ಲು ತೂರಾಟ, ಅಮಾಯಕ ನಾಗರಿಕರನ್ನು ಗುರಿಯಾಗಿಸಿಕೊಂಡು ಭಾರತದ ವಿರುದ್ಧ ಯುದ್ಧ ನಡೆಸುವುದು ಸೇರಿದಂತೆ ಕಣಿವೆಯಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗೆ ನಿಧಿಯನ್ನು ಸಂಘಟಿಸಿದ ಆರೋಪದಲ್ಲಿ ಮಲಿಕ್ ತಪ್ಪೊಪ್ಪಿಕೊಂಡಿದ್ದಾನೆ.

ಪ್ರಮುಖ ಸುದ್ದಿ :-   ರಾಜ್‌ ಕುಂದ್ರಾಗೆ ಸೇರಿದ ₹97 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಿದ ಇ.ಡಿ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement