ಕರಾಚಿಯಲ್ಲಿರುವ ದಾವೂದ್‌ ಇಬ್ರಾಹಿಂ ತನ್ನ ಸಂಬಂಧಿಗಳಿಗೆ ಪ್ರತಿತಿಂಗಳು 10 ಲಕ್ಷ ರೂ. ಕಳುಹಿಸ್ತಾನೆ: ಇಡಿ ಮುಂದೆ ಹೊರಬಿತ್ತು ಸ್ಫೋಟಕ ಮಾಹಿತಿ

ಮುಂಬೈ: ದೇಶದಿಂದ ಪರಾರಿಯಾಗಿರುವ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಪಾಕಿಸ್ತಾನದ ಕರಾಚಿಯಲ್ಲಿ ನೆಲೆಸಿದ್ದು, ಭಾರತದಲ್ಲಿರುವ ತಮ್ಮ ಸಂಬಂಧಿಕರಿಗೆ ತಿಂಗಳಿಗೆ 10 ಲಕ್ಷ ರೂಪಾಯಿ ಕಳುಹಿಸುತ್ತಿದ್ದಾನೆ ಎಂದು ಜಾರಿ ನಿರ್ದೇಶನಾಲಯದ ಮುಂದೆ ಮಹಾರಾಷ್ಟ್ರದ ಸಚಿವ ನವಾಬ್ ಮಲಿಕ್ ವಿರುದ್ಧದ ಅಕ್ರಮ ಹಣ ವರ್ಗಾವಣೆ ಪ್ರಕರಣದ ಸಾಕ್ಷಿದಾರರು ಸ್ಫೋಟಕ ಮಾಹಿತಿ ನೀಡಿದ್ದಾರೆ.

ದಾವೂದ್ ಇಬ್ರಾಹಿಂ ಆಸ್ತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಚಿವ ಮಲಿಕ್ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ಸಲ್ಲಿಸಿರುವ ದೋಷಾರೋಪಣಾ ಪಟ್ಟಿಯಲ್ಲಿ ಇಬ್ಬರು ಸಾಕ್ಷಿದಾರರ ಹೇಳಿಕೆಗಳನ್ನು ಉಲ್ಲೇಖಿಸಲಾಗಿದೆ.
ದಾವೂದ್ ಇಬ್ರಾಂಹಿ ಸಹೋದರಿ ಹಸೀನಾ ಪಾರ್ಕರ್ ಮಗ ಅಲಿಶಾ ಪಾರ್ಕರ್ ಸಾಕ್ಷ್ಯ ನುಡಿದಿದ್ದು, ತನ್ನ ಮಾಮು ದಾವೂದ್ ಇಬ್ರಾಹಿಂ (ತಾಯಿಯ ಚಿಕ್ಕಪ್ಪ) 1986ರ ವರೆಗೂ ಮುಂಬೈನ ದಂಬರ್ವಾಲಾ ಕಟ್ಟಡದ 4 ನೇ ಮಹಡಿಯಲ್ಲಿ ವಾಸಿಸುತ್ತಿದ್ದ. ಅನಂತರ ಪಾಕಿಸ್ತಾನದ ಕರಾಚಿಯಲ್ಲಿದ್ದಾನೆ ಎಂದು ನಾನು ವಿವಿಧ ಮೂಲಗಳು ಮತ್ತು ಕುಟುಂಬ ಸದಸ್ಯರಿಂದ ಕೇಳಿದ್ದೇನೆ ಎಂದು ಹೇಳಿಕೆ ನೀಡಿದ್ದಾನೆ.

ದಾವೂದ್ ಇಬ್ರಾಹಿಂ ಕರಾಚಿಗೆ ಹೋದಾಗ ನಾನು ಜನಿಸಿರಲಿಲ್ಲ ಮತ್ತು ನಾನು ಅಥವಾ ನನ್ನ ಕುಟುಂಬ ಸದಸ್ಯರು ಅವನೊಂದಿಗೆ ಸಂಪರ್ಕದಲ್ಲಿಲ್ಲ ಎಂದು ಸಾಕ್ಷಿದಾರರು ಹೇಳಿಕೆ ನೀಡಿದ್ದಾರೆ. ಆದರೆ ದಾವೂದ್ ಇಬ್ರಾಹಿಂನ ಪತ್ನಿ ಈದ್, ದೀಪಾವಳಿ ಮತ್ತು ಇತರ ಹಬ್ಬದ ಸಂದರ್ಭಗಳಲ್ಲಿ ತನ್ನ ಪತ್ನಿ ಮತ್ತು ಸಹೋದರಿಯರೊಂದಿಗೆ ಸಂಪರ್ಕದಲ್ಲಿರುತ್ತಾಳೆ ಎಂದು ಅಲಿಶಾ ಪಾರ್ಕರ್ ಹೇಳಿದ್ದಾರೆ.
ಇನ್ನೋರ್ವ ಸಾಕ್ಷಿದಾರ ಖಾಲಿದ್ ಉಸ್ಮಾನ್ ಶೇಖ್ ಇಡಿ ಮುಂದೆ ಹೇಳಿಕೆ ನೀಡಿದ್ದು, (ಇಕ್ಬಾಲ್) ಕಸ್ಕರ್ (ದಾವೂದ್ ಇಬ್ರಾಹಿಂ ಸಹೋದರ) ದಾವೂದ್ ತನ್ನ ಜನರ ಮೂಲಕ ಹಣ ಕಳುಹಿಸುವುದಾಗಿ ಹೇಳಿದ್ದಾನೆ ಎಂದು ತಿಳಿಸಿದ್ದಾರೆ. ಕಸ್ಕರ್ ಪ್ರತಿ ತಿಂಗಳು 10 ಲಕ್ಷ ರೂಪಾಯಿಗಳನ್ನು ಪಡೆಯುವುದಾಗಿ ತಿಳಿಸಿದ್ದಾನೆ. ಒಂದೆರಡು ಸಂದರ್ಭಗಳಲ್ಲಿ ಆತ ನನಗೆ ಹಣವನ್ನು ತೋರಿಸಿದ ಮತ್ತು ದಾವೂದ್ ಬಾಯ್‍ನಿಂದ ಹಣವನ್ನು ಸ್ವೀಕರಿಸಿದ್ದೇನೆ ಎಂದು ಹೇಳಿದ್ದ ಎಂದು ಸಾಕ್ಷಿ ಹೇಳಿಕೆ ನೀಡಿದ್ದಾರೆ.
ಮಹಾರಾಷ್ಟ್ರ ಸಚಿವ ಮಲಿಕ್ (62)ರನ್ನು ಫೆಬ್ರವರಿ 23 ರಂದು ದಾವೂದ್‌ಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಸಿದಂತೆ ಜಾರಿ ನಿರ್ದೇಶನಾಲಯ ಬಂಧಿಸಿತ್ತು. ಸದ್ಯ ಮಲ್ಲಿಕ್ ಜೈಲಿನಲ್ಲಿದ್ದಾರೆ.

ಪ್ರಮುಖ ಸುದ್ದಿ :-   100 ವರ್ಷಗಳಲ್ಲಿ ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮೊದಲ ಮಹಿಳಾ ಉಪಕುಲಪತಿ ನೇಮಕ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement