17 ವರ್ಷಗಳ ಕಾಲ ಲವ್, 2 ಮಕ್ಕಳಾದ ನಂತರ ಮದುವೆಯಾದ ಸಿನಿ ನಿರ್ದೇಶಕ ಹನ್ಸಲ್ ಮೆಹ್ತಾ, ಸಫೀನಾ ಹುಸೇನ್ ಜೋಡಿ

ಹಲವಾರು ಹಿಂದಿ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಮತ್ತು ಕಿರುತೆರೆಯಲ್ಲೂ ಅನೇಕ ಧಾರಾವಾಹಿಗಳಿಗೆ ನಿರ್ದೇಶನ ಮಾಡಿರುವ ಹನ್ಸಲ್ ಮೆಹ್ತಾ, ಹದಿನೇಳು ವರ್ಷಗಳ ಡೇಟಿಂಗ್‌ ಬಳಿಕ ಸಫೀನಾ ಹುಸೇನ್ ಅವರನ್ನು ಮದುವೆಯಾಗಿದ್ದಾರೆ.
ಅಜಯ್ ದೇವಗನ್ ನಟನೆ ಛಲಾಂಗ್ ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ಸಿನಿಮಾಗಳನ್ನು ಹನ್ಸಲ್‌ ಮೆಹ್ತಾ ನಿರ್ದೇಶನ ಮಾಡಿದ್ದಾರೆ. ಹಲವಾರು ಟಿವಿ ಧಾರಾವಾಹಿಗಳಿಗೆ ನಿರ್ದೇಶನದ ಮಾಡಿದ್ದಾರೆ ಹಾಗೂ ನಿರ್ಮಾಣ ಕೂಡ ಮಾಡಿದ್ದಾರೆ. ಸಾಹಿದ್ ಚಿತ್ರಕ್ಕಾಗಿ ಅವರಿಗೆ ರಾಷ್ಟ್ರ ಪ್ರಶಸ್ತಿ ಕೂಡ ಸಂದಿದೆ. ಇಂತಹ ನಿರ್ದೇಶಕರಾದ ಹನ್ಸಲ್‌ ಮೆಹ್ತಾ ಅವರು ಹದಿನೇಳು ವರ್ಷಗಳ ಪ್ರೀತಿಸಿ, ಎರಡು ಮಕ್ಕಳು ಆದ ನಂತರ ಮದುವೆಯಾಗುವ ಮೂಲಕ ಈಗ ಸುದ್ದಿಯಾಗಿದ್ದಾರೆ.

ಸಫೀನಾ ಹುಸೇನ್ ಮತ್ತು ಮೆಹ್ತಾ ಸತಿ ಪತಿಗಳಂತೆಯೇ ಬದುಕುತ್ತಿದ್ದರು. ಹಾಗಾಗಿ ಈ ಜೋಡಿಗೆ ಇಬ್ಬರು ಹೆಣ್ಣು ಮಕ್ಕಳು ಕೂಡ ಇದ್ದಾರೆ. ಈ ಕುರಿತು ಮಾತನಾಡಿರುವ ಮೆಹ್ತಾ, ‘ನಾವಿಬ್ಬರೂ ಮದುವೆ ಆಗದೇ ಇದ್ದರೂ, ಪ್ರತಿಜ್ಞೆ ತಗೆದುಕೊಂಡಂತೆ ಬದುಕು ನಡೆಸಿದೆವು. ಮಕ್ಕಳು ಬೆಳೆಯುವುದನ್ನು ನೋಡುತ್ತಾ 17 ವರ್ಷಗಳು ಹೇಗೆ ಕಳೆದವು ಎನ್ನುವುದು ನಮಗೆ ಗೊತ್ತಾಗಲಿಲ್ಲ. ಇದೀಗ ನಾವಿಬ್ಬರೂ ಮದುವೆಯಾಗುತ್ತಿದ್ದೇವೆ’ ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಅತ್ಯಧಿಕ ಅಪಾಯದ ಮಟ್ಟ 6ರ ವಿರುದ್ಧ ರಕ್ಷಣೆಗಾಗಿ ದೇಶದ ಅತ್ಯಂತ ಹಗುರ ಬುಲೆಟ್ ಪ್ರೂಫ್ ಜಾಕೆಟ್‌ ಅಭಿವೃದ್ಧಿಪಡಿಸಿದ ಡಿ ಆರ್‌ ಡಿ ಒ

ಸಫೀನಾ ಮತ್ತು ಮೆಹ್ತಾ ಮದುವೆಯು ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ. ಆಪ್ತರಷ್ಟೇ ಈ ಮದುವೆಯಲ್ಲಿ ಭಾಗಿಯಾಗಿದ್ದಾರೆ.
ಹನ್ಸಲ್ ಮೆಹ್ತಾಗೆ ಇದು ಎರಡನೇ ಮದುವೆ. ಅವರು ತಮ್ಮ 20ನೇ ವಯಸ್ಸಿನಲ್ಲೇ ಸುನೀತಾ ಎನ್ನುವವರ ಜೊತೆ ಮದುವೆಯಾಗಿದ್ದರು. ಈ ಜೋಡಿಗೆ ಪಲ್ಲವ ಮತ್ತು ಜಯ್ ಎಂಬಿಬ್ಬರು ಮಕ್ಕಳೂ ಇದ್ದಾರೆ. ಆನಂತರ ಸುನೀತಾ ಜೊತೆ ಮೆಹ್ತಾ ವಿಚ್ಛೇದನ ಪಡೆದುಕೊಂಡರು. ಸುನೀತಾ ಅವರಿಂದ ದೂರವಾದ ನಂತರ ನಟ ಯುಸೂಫ್ ಹುಸೇನ್ ಅವರ ಪುತ್ರಿ ಸಫೀನಾ ಅವರನ್ನು ಪ್ರೀತಿಸಿ ಒಟ್ಟಿಗೆ ವಾಸಿಸುತ್ತಿದ್ದರು. ಈಗ ಇಬ್ಬರೂ ಮದುವೆಯಾಗಿದ್ದಾರೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement