ಅಕ್ರಮ ಹಣ ವರ್ಗಾವಣೆ ಪ್ರಕರಣ: ಮಹಾರಾಷ್ಟ್ರ ಸಚಿವ ಅನಿಲ್ ಪರಬ್ ಮನೆ ಸೇರಿ ಏಳು ಸ್ಥಳಗಳ ಮೇಲೆ ಮೇಲೆ ಇಡಿ ದಾಳಿ

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಹಾರಾಷ್ಟ್ರ ಸಾರಿಗೆ ಸಚಿವ ಮತ್ತು ಶಿವಸೇನೆ ನಾಯಕ ಅನಿಲ್ ಪರಬ್ ಅವರ ಏಳು ಸ್ಥಳಗಳ ಮೇಲೆ ಗುರುವಾರ, ಮೇ 26 ರಂದು ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದೆ.
ಇಡಿ ಅಧಿಕಾರಿಗಳು ಇಂದು, ಗುರುವಾರ ಬೆಳಿಗ್ಗೆ ಮುಂಬೈನಲ್ಲಿರುವ ಅನಿಲ್ ಪರಬ್ ಅವರ ಕುಟುಂಬ ಮತ್ತು ಅಧಿಕೃತ ನಿವಾಸಕ್ಕೆ ಆಗಮಿಸಿದ್ದಾರೆ. ಪುಣೆಯಲ್ಲಿರುವ ಮಹಾರಾಷ್ಟ್ರ ಸಚಿವರ ಮನೆ ಮತ್ತು ದಾಪೋಲಿಯಲ್ಲಿರುವ ಅವರ ರೆಸಾರ್ಟ್‌ಗಳಲ್ಲೂ ಶೋಧ ನಡೆಸುತ್ತಿದ್ದಾರೆ.
ಫೆಡರಲ್ ಏಜೆನ್ಸಿ ಅನಿಲ್ ಪರಬ್ ವಿರುದ್ಧ ಮನಿ ಲಾಂಡರಿಂಗ್ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಹೊಸ ಪ್ರಕರಣವನ್ನು ದಾಖಲಿಸಿದೆ. ಇಡಿ ಕ್ರಮವು 2017 ರಲ್ಲಿ ಪರಬ್‌ ಅವರು ದಾಪೋಲಿಯಲ್ಲಿ ಭೂಮಿಯನ್ನು ಖರೀದಿಸಿದ ಆರೋಪಗಳಿಗೆ ಸಂಬಂಧಿಸಿದೆ.

ದಾಪೋಲಿ ರೆಸಾರ್ಟ್ ಪ್ರಕರಣ
ಮಾರ್ಚ್‌ನಲ್ಲಿ ನಡೆದ ದಾಳಿಯಲ್ಲಿ, ಅನಿಲ್ ಪರಬ್ ಅವರು 2017 ರಲ್ಲಿ ದಾಪೋಲಿಯಲ್ಲಿ 1 ಕೋಟಿ ರೂ.ಗಳಿಗೆ ಭೂಮಿ ಖರೀದಿಸಿದ್ದರು ಎಂದು ಐಟಿ ಇಲಾಖೆ ಪತ್ತೆ ಮಾಡಿದೆ. 2019 ರಲ್ಲಿ ನೋಂದಾಯಿಸಲಾದ ಈ ಭೂಮಿಯನ್ನು ತರುವಾಯ 2020 ರಲ್ಲಿ ಆ ಜಮೀನಿನಲ್ಲಿ ರೆಸಾರ್ಟ್ ನಿರ್ಮಿಸಿ ಸದಾನಂದ ಕದಮ್ ಅವರಿಗೆ 1.10 ಕೋಟಿ ರೂ.ಗಳಿಗೆ ಮಾರಾಟ ಮಾಡಲಾಗಿದೆ.

ಪ್ರಮುಖ ಸುದ್ದಿ :-   ಕೋಟಕ್‌ ಮಹೀಂದ್ರಾ ಬ್ಯಾಂಕಿಗೆ ಆರ್‌ಬಿಐ ನಿರ್ಬಂಧ : ಹೊಸ ಗ್ರಾಹಕರ ಆನ್‌ಲೈನ್‌ ಸೇರ್ಪಡೆ, ಹೊಸ ಕ್ರೆಡಿಟ್‌ ಕಾರ್ಡ್‌ ವಿತರಣೆಗೆ ಬ್ರೇಕ್‌

ತಂಗುದಾಣ ನಿರ್ಮಾಣದ ಬಗ್ಗೆ ಸಂಬಂಧಪಟ್ಟವರು ಅಧಿಕಾರಿಗಳಿಗೆ ವರದಿ ನೀಡದೆ, 2019ರಲ್ಲಿ ಒಮ್ಮೆ ಹಾಗೂ 2020ರಲ್ಲಿ ಜಮೀನಿನ ನೋಂದಣಿಗೆ ಮಾತ್ರ ಮುದ್ರಾಂಕ ಶುಲ್ಕ ಪಾವತಿಸಿದ್ದಾರೆ ಎಂದು ಪ್ರಕರಣದ ಪರಿಚಯವಿರುವ ಅಧಿಕಾರಿಗಳು ತಿಳಿಸಿದ್ದಾರೆ. ಐಟಿ ಇಲಾಖೆ ದಾಪೋಲಿಯಲ್ಲಿ ರೆಸಾರ್ಟ್ ನಿರ್ಮಾಣಕ್ಕೆ ಸುಮಾರು 6 ಕೋಟಿ ರೂ.ಖರ್ಚು ಮಾಡಲಾಗಿದೆ ಎಂದು ಊಹಿಸಿದೆ. ಆದರೆ, ನಿರ್ಮಾಣದ ವೆಚ್ಚವನ್ನು ಅನಿಲ್ ಪರಬ್ ಅಥವಾ ಸದಾನಂದ್ ಕದಂ ಅವರ ಖಾತೆ ಪುಸ್ತಕಗಳಲ್ಲಿ ಲೆಕ್ಕ ಇಟ್ಟಿಲ್ಲ ಎಂದು ಹೇಳಲಾಗಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement