ಚಲಿಸುವ ರೈಲಿನಿಂದ ಇಳಿಯುವಾಗ ಆಯತಪ್ಪಿದ ವ್ಯಕ್ತಿಯನ್ನು ಎಳೆದೊಯ್ದ ರೈಲು, ತಕ್ಷಣವೇ ರಕ್ಷಿಸಿದ ಪೊಲೀಸರು | ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಉಡುಪಿ: ರೈಲಿನಿಂದ ಇಳಿಯುತ್ತಿದ್ದ ಸಂದರ್ಭ ಆಯತಪ್ಪಿ ಬಿದ್ದು ರೈಲಿನೊಂದಿಗೆ ಎಳೆದುಕೊಂಡ ಹೋದ 70 ವರ್ಷದ ವ್ಯಕ್ತಿಯೊಬ್ಬನ ಪ್ರಾಣವನ್ನು ರೈಲ್ವೇ ರಕ್ಷಣಾ ಪಡೆ (ಆರ್‌ಪಿಎಫ್) ಸಿಬ್ಬಂದಿ ಬುಧವಾರ ರಕ್ಷಿಸಿದ್ದಾರೆ.

ವ್ಯಕ್ತಿ ರೈಲಿನಲ್ಲಿ ಬಿದ್ದು ಸಿಕ್ಕಿಹಾಕಿಕೊಂಡಿರುವುದನ್ನು ನೋಡಿದ ಕಾನ್‌ಸ್ಟೆಬಲ್ ಸಜೀರ್ ತಕ್ಷಣ ಧಾವಿಸಿ ರೈಲು ನಿಲ್ದಾಣದಿಂದ ಹೊರಡುವ ಮೊದಲು ರಕ್ಷಿಸಿದ್ದಾರೆ. ವ್ಯಕ್ತಿಯನ್ನು ಉಡುಪಿ ಜಿಲ್ಲೆಯ ಪೆರ್ಡೂರು ನಿವಾಸಿ ಕುತ್ತಿ ಕುಂದನ್ ಎಂದು ಗುರುತಿಸಲಾಗಿದೆ.

ಈ ಸಂಪೂರ್ಣ ಘಟನೆ ರೈಲ್ವೆ ನಿಲ್ದಾಣದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ.
ರಕ್ಷಿಸಲ್ಪಟ್ಟ ವ್ಯಕ್ತಿಯನ್ನು ಪೆರ್ಡೂರು‌ ಮೂಲದ ಕುತಿ ಕುಂದನ್ ಎಂದು ಗುರುತಿಸಲಾಗಿದೆ. ಕುತಿ ಕುಂದನ್ ಅವರು ತಮ್ಮ ಮಗಳನ್ನು ಟ್ರೈನ್ ಹತ್ತಿಸುವ ಸಲುವಾಗಿ ಉಡುಪಿ ರೈಲ್ವೇ ನಿಲ್ದಾಣಕ್ಕೆ ಆಗಮಿಸಿದ್ದರು. ಮಗಳನ್ನು ರೈಲಿನಲ್ಲಿ ಕುಳ್ಳಿರಿಸಿ ಚಲಿಸುವ ರೈಲಿನಿಂದ ಇಳಿಯುವ ವೇಳೆ ಆಯತಪ್ಪಿ ಬಿದ್ದಿದ್ದು ರೈಲಿನ ಬಾಗಿಲಿನ ಹ್ಯಾಂಡಲ್ ಅನ್ನು ಗಟ್ಟಿಯಾಗಿ ಹಿಡಿದುಕೊಂಡ ಅವರನ್ನು ರೈಲು ಅವರನ್ನು ಎಳೆದುಕೊಂಡು ಹೋಗಿದೆ. ರೈಲ್ವೆ ಪೋಲಿಸ್ ಸಿಬ್ಬಂದಿ ಸಜೀರ್ ತಕ್ಷಣವೇ ಬಂದು ಅವರನ್ನು ಅಲ್ಲಿಂದ ಪಾರು ಮಾಡಿ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ನಂತರ ಕುಂದನ್‌ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರಮುಖ ಸುದ್ದಿ :-   ಮತಗಟ್ಟೆ ಬಳಿ ಮಹಿಳೆಗೆ ಹೃದಯಾಘಾತ ; ತಕ್ಷಣವೇ ಸಿಪಿಆರ್‌ ಮಾಡಿ ಜೀವ ಉಳಿಸಿದ ಮತದಾನ ಮಾಡಲು ಬಂದಿದ್ದ ವೈದ್ಯ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement