ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಬಿಜೆಪಿಯ ಈರೇಶ ಅಂಚಟಗೇರಿ ನೂತನ ಮೇಯರ್‌, ಉಮಾ ಮುಕುಂದ ಉಪಮೇಯರ್‌

posted in: ರಾಜ್ಯ | 0

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮೇಯರ್ ಪಟ್ಟ ಬಿಜೆಪಿಗೆ ಒಲಿದಿದೆ.ಬಿಜೆಪಿಯ ಪಾಲಿಕೆ ಸದಸ್ಯ ಈರೇಶ ಅಂಚಟಗೇರಿ ಮೇಯರ್​ ಆಗಿ ಆಯ್ಕೆಯಾದರೆ ಉಪ‌ ಮೇಯರ್ ಆಗಿ ಉಮಾ ಮುಕುಂದ ಆಯ್ಕೆಯಾಗಿದ್ದಾರೆ.

advertisement
ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
ಅಡ್ಮಿಶನ್ ಗಾಗಿ ಇಂದೇ ಕರೆ ಮಾಡಿ
9535127775 / 9901837775 / 6364528715 / 08362775155 / https://icsmpucollege.com/

ಮೇಯರ್‌ ಹಾಗೂ ಉಪಮೇಯರ್‌ ಸ್ಥಾನಕ್ಕೆ ಬಿಜೆಪಿಯಿಂದ ಕ್ರಮವಾಗಿ ಈರೇಶ ಅಂಚಟಗೇರಿ ಹಾಗೂ ಉಮಾ ಮುಕುಂದ ನಾಮಪತ್ರ ಸಲ್ಲಿಸಿದರೆ ಕಾಂಗ್ರೆಸ್‌ನಿಂದ ಕ್ರಮವಾಗಿ ಮಯೂರ ಮೋರೆ ಹಾಗೂ ದೀಪಾ ನೀರಲಕಟ್ಟಿ ನಾಮಪತ್ರ ಸಲ್ಲಿಸಿದರು.
ಶನಿವಾರ ಬೆಳಗ್ಗೆ ಮೇಯರ್​-ಉಪಮೇಯರ್​ ಸ್ಥಾನಕ್ಕೆ ಚುನಾವಣಾ ಪ್ರಕ್ರಿಯೆ ನಡೆಯಿತು. 88 ಮತಗಳ ಪೈಕಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ 50 ಮತಗಳು ಚಲಾವಣೆಯಾದವು. ಈರೇಶ ಅಂಚಿಟಗೇರಿ ಮೇಯರ್‌ ಆಗಿ ಹಾಗೂ ಮತ್ತು ಉಮಾ ಮುಕುಂದ ಉಪಮೇಯರ್‌ ಆಗಿ ಜಯಗಳಿಸಿದರು. ಕಾಂಗ್ರೆಸ್‌ನ ಮಯೂರ್‌ ಮೋರೆ ಹಾಗೂ ದೀಪಾ ನೀರಲಕಟ್ಟಿ ಅವರಿಗೆ 35 ಮತಗಳು ಬಂದವು.

ಧಾರವಾಡದ ವಾರ್ಡ್ ನಂ.4ರಿಂದ ಎರಡು ಬಾರಿ ಪಾಲಿಕೆ ಸದಸ್ಯರಾಗಿ ಈರೇಶ ಅಂಚಟಗೇರಿ ಆಯ್ಕೆಯಾಗಿರುವ ಈರೇಶ ಅಂಚಗೇರಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ನಿಕಟವರ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಹುಬ್ಬಳ್ಳಿಯ ವಾರ್ಡ್ ನಂ.44ರಿಂದ ಮೊದಲ ಬಾರಿಗೆ ಪಾಲಿಕೆ ಸದಸ್ಯೆ ಆಗಿ ಆಯ್ಕೆಯಾದ ಉಮಾ ಮುಕುಂದಗೆ ಉಪಮೇಯರ್​ ಪಟ್ಟ ಒಲಿದಿದೆ. ಬೆಳಗಾವಿ ‌ಪ್ರಾದೇಶಿಕ‌ ಆಯುಕ್ತ ಆಮ್ಲಾನ್ ಬಿಸ್ವಾಸ್ ಚುನಾವಣಾ ಅಧಿಕಾರಿಯಾಗಿದ್ದರು.

advertisement

ಕ್ಷಣ ಕ್ಷಣದ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
ಓದಿರಿ :-   ಕರ್ನಾಟಕದ ಸಿನಿ ಶೆಟ್ಟಿಗೆ ಮಿಸ್ ಇಂಡಿಯಾ-2022 ಕಿರೀಟ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

/ 5. ಒಟ್ಟು ವೋಟುಗಳು

advertisement

ನಿಮ್ಮ ಕಾಮೆಂಟ್ ಬರೆಯಿರಿ