ಕೆಜಿಎಫ್‌-2 ಸಿನೆಮಾ ಮೂರು ಸಲ ನೋಡಿದ ನಂತರ ಪೂರ್ಣ ಪ್ಯಾಕ್ ಸಿಗರೇಟ್ ಸೇದಿ ಆಸ್ಪತ್ರೆಗೆ ದಾಖಲಾದ ಬಾಲಕ..!

ಹೈದರಾಬಾದ್‌: ಜನಪ್ರಿಯ ಚಲನಚಿತ್ರ ಕೆಜಿಎಫ್-2 ಸಿನೆಮಾವನ್ನು ಎರಡು ದಿನಗಳಲ್ಲಿ ಮೂರು ಬಾರಿ ವೀಕ್ಷಿಸಿದ ನಂತರ, ಹೈದರಾಬಾದ್‌ನಲ್ಲಿ 15 ವರ್ಷದ ಹುಡುಗನೊಬ್ಬ ಮುಖ್ಯ ಪಾತ್ರ ರಾಕಿ ಭಾಯ್‌ನಿಂದ ಸ್ಫೂರ್ತಿ ಪಡೆದು ಪೂರ್ಣ ಪ್ಯಾಕ್ ಸಿಗರೇಟ್ ಸೇದಿದ್ದಾನೆ. ಇದರಿಂದ ತೀವ್ರ ಗಂಟಲು ನೋವು ಮತ್ತು ಕೆಮ್ಮು ಕಾಣಿಸಿಕೊಂಡು ಚಿಕಿತ್ಸೆಗಾಗಿ ಹುಡುಗನನ್ನು ನಂತರ ಆಸ್ಪತ್ರೆಗೆ ದಾಖಲಿಸಬೇಕಾಯಿತು.
ಶನಿವಾರ, ಹೈದರಾಬಾದ್‌ನ ಸೆಂಚುರಿ ಆಸ್ಪತ್ರೆಯ ವೈದ್ಯರು ಹದಿಹರೆಯದ ಈ ಹುಡುಗನಿಗೆ ಕೌನ್ಸೆಲಿಂಗ್ ಮಾಡುವುದರ ಹೊರತಾಗಿ ಯಶಸ್ವಿಯಾಗಿ ಚಿಕಿತ್ಸೆ ನೀಡಿದ್ದಾರೆ ಎಂದು ಹೇಳಿದ್ದಾರೆ.

ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಶ್ವಾಸಕೋಶಶಾಸ್ತ್ರಜ್ಞ ಡಾ ರೋಹಿತ್ ರೆಡ್ಡಿ ಪಥೂರಿ, “ಹದಿಹರೆಯದವರು ಇಂತಹ ಪಾತ್ರಗಳಿಂದ ಸುಲಭವಾಗಿ ಪ್ರಭಾವಿತರಾಗುತ್ತಾರೆ. ಈ ವೇಳೆ ಈ ಬಾಲಕ ಸಿಗರೇಟ್‌ ತುಂಬಿದ ಪ್ಯಾಕೆಟ್‌ ಸೇವಿಸಿ ತೀವ್ರ ಅಸ್ವಸ್ಥನಾಗಿದ್ದ. ಚಲನಚಿತ್ರಗಳು ನಮ್ಮ ಸಮಾಜದಲ್ಲಿ ಹೆಚ್ಚು ಪ್ರಭಾವ ಬೀರುವ ಅಂಶವಾಗಿದೆ. ಚಲನಚಿತ್ರ ನಿರ್ಮಾಪಕರು ಮತ್ತು ನಟರು ಸಿಗರೇಟ್ ಸೇದುವುದು ಅಥವಾ ತಂಬಾಕು ಜಗಿಯುವುದು ಅಥವಾ ಆಲ್ಕೋಹಾಲ್ ಸೇವನೆಯಂತಹ ಕಾರ್ಯಗಳನ್ನು ಗ್ಲಾಮರ್ ಮಾಡದಿರುವ ನೈತಿಕ ಜವಾಬ್ದಾರಿ ಹೊಂದಿರುತ್ತಾರೆ. ‘ರಾಕಿ ಭಾಯ್’ ನಂತಹ ಪಾತ್ರಗಳು ಆರಾಧನಾ-ಅನುಸರಣೆಯನ್ನು ಹೊಂದಿವೆ. ಹದಿಹರೆಯದವರ ಪಾಲಕರು ತಮ್ಮ ಮಕ್ಕಳು ಏನು ಮಾಡುತ್ತಿದ್ದಾರೆ ಮತ್ತು ಅವರ ಮಗುವಿನ ಸಿನೆಮಾದಲ್ಲಿ ಬರುವ ಯಾವ ಅಂಶಗಳು ಪ್ರಭಾವ ಬೀರುತ್ತಿವೆ ಎಂಬುದರ ಮೇಲೆ ನಿಗಾ ಇಡುವುದನ್ನು ಖಚಿತಪಡಿಸಿಕೊಳ್ಳಬೇಕು. ನಂತರ ಪಶ್ಚಾತ್ತಾಪ ಪಡುವ ಬದಲು, ತಂಬಾಕು ಸೇವನೆ ಮತ್ತು ಮದ್ಯಪಾನದಂತಹ ಕೃತ್ಯಗಳ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಪೋಷಕರು ಪ್ರಮುಖ ಪಾತ್ರ ವಹಿಸುತ್ತಾರೆ” ಎಂದು ಡಾ ರೋಹಿತ್ ರೆಡ್ಡಿ ಹೇಳಿದರು.
ಕೆಜಿಎಫ್-2 ಅನ್ನು ಪ್ರಶಾಂತ್ ನೀಲ್ ಬರೆದು ನಿರ್ದೇಶಿಸಿದ್ದಾರೆ. ಹೊಂಬಾಳೆ ಫಿಲಂಸ್‌ನ ವಿಜಯ್ ಕಿರಗಂದೂರು ಈ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಿಸಿದ್ದಾರೆ. ಚಿತ್ರದಲ್ಲಿ ಯಶ್, ಸಂಜಯ್ ದತ್, ರವೀನಾ ಟಂಡನ್ ಮತ್ತು ಶ್ರೀನಿಧಿ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಪ್ರಮುಖ ಸುದ್ದಿ :-   ರೇವಣ್ಣ, ಪ್ರಜ್ವಲ್ ಎಸ್‌ಐಟಿ ವಿಚಾರಣೆಗೆ ಹಾಜರಾಗದಿದ್ದರೆ ಕಾನೂನು ಪ್ರಕಾರ ಬಂಧನ: ಗೃಹ ಸಚಿವ ಪರಮೇಶ್ವರ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement