ಮುಖ್ಯಮಂತ್ರಿ ಕನ್ಯಾದಾನ ಯೋಜನೆ ಲಾಭ ಪಡೆಯಲು ಮರುಮದುವೆಗೆ ಯತ್ನಿಸಿ ಸಿಕ್ಕಿಬಿದ್ದ ಯೂತ್ ಕಾಂಗ್ರೆಸ್ ಮುಖಂಡ…!

ಸಾಗರ (ಮಧ್ಯಪ್ರದೇಶ): ಅಸಹಜ ಪ್ರಕರಣವೊಂದರಲ್ಲಿ, ಮಧ್ಯಪ್ರದೇಶದ ಸಾಗರ ಜಿಲ್ಲೆಯ ಬಾಲಾಜಿ ದೇವಸ್ಥಾನದ ಆವರಣದಲ್ಲಿ ಸಾಮೂಹಿಕ ವಿವಾಹ ಸಮಾವೇಶಕ್ಕೆ ಆಗಮಿಸಿದ್ದ ವೇಳೆ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ (ಎನ್‌ಎಸ್‌ಯುಐ) ಸಂಯೋಜಕ ನೈತಿಕ್ ಚೌಧರಿ ಮಧ್ಯಪ್ರದೇಶ ಪೊಲೀಸರ ಬಲೆಗೆ ಬಿದ್ದಿದ್ದಾರೆ.
15 ದಿನಗಳ ಹಿಂದಷ್ಟೇ ನೈತಿಕ ಚೌಧರಿಗೆ ಮದುವೆಯಾಗಿತ್ತು..! ವರದಿಗಳ ಪ್ರಕಾರ, ಮುಖ್ಯಮಂತ್ರಿ ಕನ್ಯಾದಾನ ಯೋಜನೆಯ ಪ್ರಯೋಜನಗಳನ್ನು ಪಡೆಯಲು ನೈತಿಕ ಚೌಧರಿ ಅವರು ಸಮಾರಂಭದಲ್ಲಿ ತಮ್ಮ ಪತ್ನಿಯನ್ನು ಮರುಮದುವೆ ಮಾಡಿಕೊಳ್ಳಲು ಪ್ರಯತ್ನಿಸಿದರು.

ಆದರೆ ಅವನ ಯೋಜನೆ ವಿಫಲವಾಯಿತು..! ಮದುವೆ ಸ್ಥಳದಲ್ಲಿ ಕಾಯುತ್ತಾ ಮದುವೆಯಾಗಲು ಕುಳಿತಿದ್ದಾಗ ಆಯೋಜಕರು ಅವರನ್ನು ಗಮನಿಸಿದರು ಮತ್ತು ನಂತರ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಸ್ಥಳಕ್ಕೆ ತಲುಪಿ ನೈತಿಕ್‌ ಅವರನ್ನು ಬಂಧಿಸಿದರು. ವರದಿಗಳ ಪ್ರಕಾರ ಅವರನ್ನು ನಂತರ ಬಿಡುಗಡೆ ಮಾಡಲಾಯಿತು. ಬಾಲಾಜಿ ದೇವಾಲಯದ ಸಂಕೀರ್ಣವು ಸಾಗರ್ ಜಿಲ್ಲೆಯ ಧರ್ಮಶ್ರೀದಲ್ಲಿದೆ.
ಎನ್‌ಎಸ್‌ಯುಐ ಕಾಂಗ್ರೆಸ್‌ನ ವಿದ್ಯಾರ್ಥಿ ಘಟಕವಾಗಿದೆ. ಶೀಘ್ರವೇ ಬಿಜೆಪಿ ರಾಜ್ಯ ಮಾಧ್ಯಮ ಉಸ್ತುವಾರಿ ಲೋಕೇಂದ್ರ ಪರಾಶರ್ ಅವರು ಟ್ವಿಟರ್‌ನಲ್ಲಿ ಈ ವಿಷಯವನ್ನು ಪೋಸ್ಟ್ ಮಾಡಿದ ನಂತರ ಈ ವಿಷಯ ರಾಜಕೀಯ ವಾಗ್ಯುದ್ಧಕ್ಕೆ ಕಾರಣವಾಯಿತು.ಬಿಜೆಪಿ ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿತು.

ಪ್ರಮುಖ ಸುದ್ದಿ :-   ಇದೆಂಥ ಪವಾಡ...| ಒಂದೇ ಗೋಡೆ, 4 ಲೀಟರ್ ಬಣ್ಣ ಬಳಿಯಲು 233 ಕೆಲಸಗಾರರ ಬಳಕೆ...! ಶಾಲೆಯ ಗುತ್ತಿಗೆದಾರನ ಬಿಲ್ ವೈರಲ್‌

ಅವರ ಟ್ವೀಟ್   “ಈ ಇವರು NSUI ನ ರಾಷ್ಟ್ರೀಯ ಸಂಯೋಜಕರಾಗಿದ್ದಾರೆ. ಮುಖ್ಯಮಂತ್ರಿಗಳ ಕನ್ಯಾದಾನ ಯೋಜನೆಯ ಲಾಭ ಪಡೆಯಲು, ಅವರು ಎರಡನೇ ಬಾರಿಗೆ ಮದುವೆಯಾಗಲು ಹೋಗಿದ್ದಾರೆ. ಈತನನ್ನು ಪೊಲೀಸರು ಹಿಡಿದಿದ್ದಾರೆ ಎಂದು ವರದಿಯಾಗಿದೆ. ನೀವು ಏನು ಮಾಡುತ್ತೀರಿ? ಕಮಲ್ ನಾಥ್ ಜೀ ಹೇಳಿ! ಎಂದು ಪರಾಶರ್‌ ಅವರು ಹಿಂದಿಯಲ್ಲಿ ಟ್ವೀಟ್‌ ಮಾಡಿದ್ದಾರೆ.
ಎಬಿಪಿ ನ್ಯೂಸ್ ವರದಿ ಪ್ರಕಾರ, ಬಿಜೆಪಿ ಶಾಸಕ ಶೈಲೇಂದ್ರ ಜೈನ್ ಅವರು ಮುಖ್ಯಮಂತ್ರಿ ಕನ್ಯಾದಾನ ಯೋಜನೆಯಡಿ ಸಾಗರದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸಿದ್ದರು. ಈ ಸಂದರ್ಭದಲ್ಲಿ ಸುಮಾರು 135 ಜೋಡಿಗಳ ವಿವಾಹಗಳು ನಡೆದವು. ಜನರು ಯೋಜನೆಯನ್ನು ದುರುಪಯೋಗಪಡಿಸಿಕೊಳ್ಳಬಾರದು ಎಂದು ಜೈನ್ ಹೇಳಿದರು ಮತ್ತು ಆ ಕಾರಣಕ್ಕಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದೇನೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಪ್ರಮುಖ ಸುದ್ದಿ :-   ಕುಟುಂಬದಲ್ಲಿ ದುರಂತ ; ಪಾಪ ಪ್ರಜ್ಞೆಯಿಂದ ನರಳಿ ಪೊಲೀಸ್‌ ಠಾಣೆಗೆ ಬಂದು 39 ವರ್ಷಗಳ ಹಿಂದೆ ಕೊಲೆ ಮಾಡಿದ್ದನ್ನು ಒಪ್ಪಿಕೊಂಡ ವ್ಯಕ್ತಿ....!

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement