ನವದೆಹಲಿ: ಆಧಾರ್ ಫೋಟೋಕಾಪಿಯನ್ನು ಯಾರೊಂದಿಗೂ ಹಂಚಿಕೊಳ್ಳಬಾರದು ಎಂದು ಯುನಿಕ್ ಐಡೆಂಟಿಫಿಕೇಷನ್ ಆಥಾರಿಟಿ ಆಫ್ ಇಂಡಿಯಾ (ಯುಐಡಿಎಐ) ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡ ಬೆನ್ನಿಗೇ ಆ ವಿಷಯ ಸಾಕಷ್ಟು ಚರ್ಚೆಗೆ ಒಳಗಾಗಿದ್ದು, ಈಗ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಅದಕ್ಕೆ ಸ್ಪಷ್ಟನೆ ನೀಡಿದೆ.
ದುರುಪಯೋಗದ ಅಪಾಯಗಳ ಕುರಿತು ಆಧಾರ್‌ನ ನಕಲು ಪ್ರತಿಗಳನ್ನು ಹಂಚಿಕೊಳ್ಳದಂತೆ ಜನರನ್ನು ಕೇಳಿದ್ದ ಹೇಳಿಕೆಯನ್ನು “ತಕ್ಷಣದಿಂದ ಜಾರಿಗೆ ಬರುವಂತೆ” ಸರ್ಕಾರ ಹಿಂಪಡೆಯಲಾಗಿದೆ ಎಂದು ಹೇಳಿದೆ. ಪತ್ರಿಕಾ ಪ್ರಕಟಣೆಯನ್ನು ತಪ್ಪಾಗಿ ಅರ್ಥೈಸುವ ಸಾಧ್ಯತೆ ಇರುವ ದೃಷ್ಟಿಯಿಂದ ಹೇಳಿಕೆಯನ್ನು ಹಿಂತೆಗೆದುಕೊಳ್ಳಲಾಗಿದೆ ಎಂದು ಭಾನುವಾರ ತಿಳಿಸಿದೆ.
ಎಲ್ಲದಕ್ಕೂ ಆಧಾರ್ ಸಂಖ್ಯೆಯನ್ನು ಕೇಳುವ ಸರ್ಕಾರವೇ ಇದೀಗ ಆಧಾರ್ ಸಂಖ್ಯೆಯನ್ನು ಪೂರ್ತಿಯಾಗಿ ಹಂಚಿಕೊಳ್ಳಬಾರದು ಎಂದು ಹೇಳುತ್ತಿದೆ ಎಂಬುದಾಗಿ ಹಲವರು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೆ ಈ ಕುರಿತ ಪ್ರಕಟಣೆ ಸಾರ್ವಜನಿಕರಲ್ಲಿ ಗೊಂದಲ ಉಂಟು ಮಾಡಲು ಆರಂಭಿಸಿದೆ ಎಂಬುದನ್ನು ಅರಿತು ಸ್ಪಷ್ಟೀಕರಣ ಕೂಡ ನೀಡಲಾಗಿದೆ ಎಂದು ಯುಐಡಿಎಐ ಹೇಳಿದೆ.
ಈ ಮೊದಲು ಯುನಿಕ್ ಐಡೆಂಟಿಫಿಕೇಷನ್ ಆಥಾರಿಟಿ ಆಫ್ ಇಂಡಿಯಾ (ಯುಐಡಿಎಐ) ದುರುಪಯೋಗ ತಡೆಗಟ್ಟಲು ತಮ್ಮ ಆಧಾರ್ ಕಾರ್ಡ್‌ಗಳ ಮಾಸ್ಕ್ ಮಾಡಿದ ಪ್ರತಿಗಳನ್ನು ಮಾತ್ರ ಹಂಚಿಕೊಳ್ಳಲು ನಾಗರಿಕರಿಗೆ ಸೂಚಿಸಿತ್ತು. ನಿಮ್ಮ ಆಧಾರ್‌ನ ಫೋಟೊಕಾಪಿಯನ್ನು ಯಾವುದೇ ಸಂಸ್ಥೆಯೊಂದಿಗೆ ಹಂಚಿಕೊಳ್ಳಬೇಡಿ ಏಕೆಂದರೆ ಅದು ದುರುಪಯೋಗವಾಗಬಹುದು. ಪರ್ಯಾಯವಾಗಿ, ದಯವಿಟ್ಟು ನಿಮ್ಮ ಆಧಾರ್ ಸಂಖ್ಯೆಯ ಕೊನೆಯ ನಾಲ್ಕು ಅಂಕೆಗಳನ್ನು ಪ್ರದರ್ಶಿಸುವ ಮಾಸ್ಕ್ ಆಧಾರ್ ಅನ್ನು ಬಳಸಿ ಎಂದು ಸೂಚಿಸಿತ್ತು.
ಆದರೆ ಆಧಾರ್ ಪ್ರಾಧಿಕಾರದ ಹೇಳಿಕೆಯು ಸಾಮಾಜಿಕ ಮಾಧ್ಯಮದಲ್ಲಿ ಗೌಪ್ಯತೆ ತಜ್ಞರು ಮತ್ತು ಕಾರ್ಯಕರ್ತರಿಂದ ಟೀಕೆಗೆ ಒಳಗಾಯಿತು, ಯುಐಡಿಎಐ ಈ ಅಪಾಯವನ್ನು ಬಹಳ ಹಿಂದೆಯೇ ನೋಡಿಕೊಳ್ಳಬೇಕಿತ್ತು ಮತ್ತು ಸಾರ್ವಜನಿಕರಿಗೆ ತಿಳಿಸಬೇಕಿತ್ತು ಎಂದು ಅನೇಕರು ಹೇಳಿದರು.
ಎಲ್ಲದಕ್ಕೂ ಆಧಾರ್ ಸಂಖ್ಯೆಯನ್ನು ಕೇಳುವ ಸರ್ಕಾರವೇ ಇದೀಗ ಆಧಾರ್ ಸಂಖ್ಯೆಯನ್ನು ಪೂರ್ತಿಯಾಗಿ ಹಂಚಿಕೊಳ್ಳಬಾರದು ಎಂದು ಹೇಳುತ್ತಿದೆ ಎಂಬುದಾಗಿ ಹಲವರು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು. ನಂತರ ಈ ಕುರಿತ ಪ್ರಕಟಣೆ ಸಾರ್ವಜನಿಕರಲ್ಲಿ ಗೊಂದಲ ಉಂಟು ಮಾಡಲು ಆರಂಭಿಸಿದೆ ಎಂಬುದನ್ನು ಅರಿತು ಸ್ಪಷ್ಟೀಕರಣ ಕೂಡ ನೀಡಲಾಗಿದೆ ಎಂದು ಯುನಿಕ್ ಐಡೆಂಟಿಫಿಕೇಷನ್ ಆಥಾರಿಟಿ ಆಫ್ ಇಂಡಿಯಾ (ಯುಐಡಿಎಐ) ಈಗ ಹೇಳಿದೆ.
ಆದಾಗ್ಯೂ, ಇತ್ತೀಚಿನ ಸರ್ಕಾರದ ಹೇಳಿಕೆಯು, ಜನರು “ತಮ್ಮ ಆಧಾರ್ ಸಂಖ್ಯೆಯನ್ನು ಬಳಸುವಲ್ಲಿ ಮತ್ತು ಹಂಚಿಕೊಳ್ಳುವಲ್ಲಿ ಸಾಮಾನ್ಯ ವಿವೇಕವನ್ನು ಉಪಯೋಗಿಸಲು ಸಲಹೆ ನೀಡಿರುವುದಾಗಿ UIDAI ಹೇಳಿದೆ.
ಫೋಟೋ ಕಾಪಿ ಮಾಡಿದ ಆಧಾರ್ ಕಾರ್ಡ್ ಅನ್ನು ದುರುಪಯೋಗಪಡಿಸಿಕೊಳ್ಳುವ ಪ್ರಯತ್ನದ ಸಂದರ್ಭದಲ್ಲಿ ಅವರು ಇದನ್ನು (ಹಿಂದಿನ ಯುಐಡಿಎಐ ಹೇಳಿಕೆ) ಹೊರಡಿಸಿದ್ದಾರೆ ಎಂದು ತಿಳಿದುಬಂದಿದೆ.
ನಿಮ್ಮ ಕಾಮೆಂಟ್ ಬರೆಯಿರಿ