ಸರ್ಕಾರ ಭದ್ರತೆ ಹಿಂಪಡೆದ ಮರುದಿನವೇ ಪಂಜಾಬಿ ಗಾಯಕ ಸಿಧು ಮೂಸ್ ವಾಲಾರನ್ನು ಗುಂಡಿಕ್ಕಿ ಕೊಂದ ದುರ್ಷರ್ಮಿಗಳು

ಮಾನಸಾ (ಪಂಜಾಬ್): ಮೇ 29 ರಂದು‌, ಭಾನುವಾರ ಮಾನ್ಸಾ ಜಿಲ್ಲೆಯ ಜವಾಹರ್ಕೆ ಗ್ರಾಮದಲ್ಲಿ ಪಂಜಾಬಿ ಗಾಯಕ ಸಿಧು ಮೂಸ್ ವಾಲಾ ಅವರನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ.
ಪಂಜಾಬಿ ಗಾಯಕ ಸಿಧು ಮೂಸ್ ವಾಲಾ ಸೇರಿದಂತೆ 424 ಜನರ ಭದ್ರತೆಯನ್ನು ಪಂಜಾಬ್ ಪೊಲೀಸರು ಹಿಂಪಡೆದ ಒಂದು ದಿನದ ನಂತರ ಈ ಘಟನೆ ನಡೆದಿದೆ. ಸಿಧು ಮೂಸ್ ವಾಲಾ ಈ ವರ್ಷದ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಮಾನಸಾದಿಂದ ಕಾಂಗ್ರೆಸ್ ಟಿಕೆಟ್‌ನಲ್ಲಿ ಸ್ಪರ್ಧಿಸಿದ್ದರು ಮತ್ತು ಎಎಪಿ ಅಭ್ಯರ್ಥಿ ವಿಜಯ್ ಸಿಂಗ್ಲಾ ವಿರುದ್ಧ 63,000 ಮತಗಳ ಭಾರೀ ಅಂತರದಿಂದ ಪರಾಭವಗೊಂಡಿದ್ದರು. ಭ್ರಷ್ಟಾಚಾರದ ಆರೋಪದ ಮೇಲೆ ವಿಜಯ್ ಸಿಂಗ್ಲಾ ಅವರನ್ನು ಇತ್ತೀಚೆಗೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಸಂಪುಟದಿಂದ ವಜಾಗೊಳಿಸಿದ್ದರು.
ಕಳೆದ ತಿಂಗಳು, ಸಿಧು ಮೂಸ್ ವಾಲಾ ಅವರು ತಮ್ಮ ‘ಸ್ಕೇಪ್‌ಗೋಟ್‌ (Scapegoat) ಹಾಡಿನಲ್ಲಿ ಆಮ್ ಆದ್ಮಿ ಪಕ್ಷ ಮತ್ತು ಅದರ ಬೆಂಬಲಿಗರನ್ನು ಗುರಿಯಾಗಿಸಿ ನಂತರ ಅದು ಗದ್ದಲಕ್ಕೆ ಕಾರಣವಾಗಿತ್ತು. ಗಾಯಕ ತನ್ನ ಹಾಡಿನಲ್ಲಿ ಎಎಪಿ ಬೆಂಬಲಿಗರನ್ನು ‘ಗದ್ದರ್’ (ದೇಶದ್ರೋಹಿ) ಎಂದು ಕರೆದಿದ್ದರು.

ಪಂಜಾಬಿ ಗಾಯಕನ ಸಾವಿಗೆ ಸಂತಾಪ ಸೂಚಿಸಿರುವ ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಟ್ವೀಟ್ ಮಾಡಿ, “ಸಿಧು ಮೂಸ್ ವಾಲಾ ಅವರ ಹತ್ಯೆಯಿಂದ ತೀವ್ರ ಆಘಾತವಾಗಿದೆ. ಪ್ರಪಂಚದಾದ್ಯಂತದ ಪಂಜಾಬ್ ಜನರ ನಾಡಿಮಿಡಿತವನ್ನು ಅನುಭವಿಸುವ ಸಾಮೂಹಿಕ ಸಂಪರ್ಕವನ್ನು ಹೊಂದಿರುವ ಪ್ರತಿಭಾವಂತ ಕಲಾವಿದನನ್ನು ಕಳೆದುಕೊಂಡಿದ್ದೇವೆ. ಪ್ರಪಂಚದಾದ್ಯಂತದ ಅವರ ಪ್ರೀತಿಪಾತ್ರರಿಗೆ ಮತ್ತು ಅಭಿಮಾನಿಗಳಿಗೆ ನನ್ನ ಹೃತ್ಪೂರ್ವಕ ಸಂತಾಪಗಳು ಎಂದು ಹೇಳಿದ್ದಾರೆ.
ಘಟನೆಯ ನಂತರ, ಬಿಜೆಪಿ ನಾಯಕ ಮಂಜಿಂದರ್ ಸಿಂಗ್ ಸಿರ್ಸಾ ಅವರು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ವಿರುದ್ಧ “ಮುಖ್ಯಮಂತ್ರಿ ಕರ್ತವ್ಯಗಳ ನಿರ್ಲಕ್ಷ್ಯ” ಕುರಿತು ಅವರ ವಿರುದ್ಧ ಎಫ್‌ಐಆರ್‌ ದಾಖಲಿಸಲು ಒತ್ತಾಯಿಸಿದರು.
“ನಾವು ಪಂಜಾಬ್‌ನ ಪರಿಸ್ಥಿತಿಯ ಬಗ್ಗೆ ಗಮನ ಹರಿಸುವಂತೆ ಪಂಜಾಬ್ ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತಿದ್ದೇವೆ. ಸಿದ್ದು ಮೂಸೆವಾಲಾ ಅವರ ಪ್ರಾಣಕ್ಕೆ ಕುತ್ತು ತಂದಿರುವ ಮುಖ್ಯಮಂತ್ರಿ ಕರ್ತವ್ಯದ ನಿರ್ಲಕ್ಷ್ಯಕ್ಕಾಗಿ ಭಗವಂತ್ ಮಾನ್ ವಿರುದ್ಧ ಎಫ್‌ಐಆರ್ ದಾಖಲಿಸಬೇಕೆಂದು ನಾನು ಒತ್ತಾಯಿಸುತ್ತೇನೆ. ಅರವಿಂದ್ ಕೇಜ್ರಿವಾಲ್ ಜೊತೆಗೆ ಭಗವಂತ್ ಮಾನ್ ಅವರನ್ನು ಬಂಧಿಸಬೇಕು ಎಂದು ಮಂಜಿಂದರ್ ಸಿಂಗ್ ಸಿರ್ಸಾ ಹೇಳಿದ್ದಾರೆ.

ಪ್ರಮುಖ ಸುದ್ದಿ :-   25 ಖಾಸಗಿ ವಲಯದ ತಜ್ಞರನ್ನು ಪ್ರಮುಖ ಹುದ್ದೆಗಳಿಗೆ ನೇಮಿಸಲು ಯೋಜಿಸಿದ ಮೋದಿ ಸರ್ಕಾರ

ಸಿದ್ದು ಮೂಸ್ ವಾಲಾ ಯಾರು?
ಜೂನ್ 17, 1993 ರಂದು ಜನಿಸಿದ ಶುಭದೀಪ್ ಸಿಂಗ್ ಸಿಧು ಅಕಾ ಸಿಧು ಮೂಸ್ ವಾಲಾ ಮಾನಸಾ ಜಿಲ್ಲೆಯ ಮೂಸ್ ವಾಲಾ ಗ್ರಾಮಕ್ಕೆ ಸೇರಿದವರು. ಮೂಸ್ ವಾಲಾ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದರು ಮತ್ತು ಅವರ ರಾಪ್‌ಗಾಗಿ ಜನಪ್ರಿಯರಾಗಿದ್ದರು. ಮೂಸ್ ವಾಲಾ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಪದವಿ ಪಡೆದಿದ್ದರು. ಕಾಲೇಜು ದಿನಗಳಲ್ಲಿ ಸಂಗೀತ ಕಲಿತಿದ್ದ ಅವರು ನಂತರ ಕೆನಡಾಕ್ಕೆ ತೆರಳಿದ್ದರು.
ಸಿಧು ಮೂಸ್ ವಾಲಾ ಅವರು ಅತ್ಯಂತ ವಿವಾದಾತ್ಮಕ ಪಂಜಾಬಿ ಗಾಯಕರಲ್ಲಿ ಒಬ್ಬರಾಗಿದ್ದಾರೆ, ಗನ್ ಸಂಸ್ಕೃತಿಯನ್ನು ಬಹಿರಂಗವಾಗಿ ಪ್ರಚಾರ ಮಾಡುತ್ತಾರೆ, ಪ್ರಚೋದನಕಾರಿ ಹಾಡುಗಳಲ್ಲಿ ದರೋಡೆಕೋರರನ್ನು ವೈಭವೀಕರಿಸುತ್ತಾರೆ. ಸೆಪ್ಟೆಂಬರ್ 2019 ರಲ್ಲಿ ಬಿಡುಗಡೆಯಾದ ಅವರ ಹಾಡು ‘ಜಟ್ಟಿ ಜೆನಾಯ್ ಮೊರ್ಹ್ ದಿ ಬಂದೂಕ್ ವಾರ್ಗಿ’, 18 ನೇ ಶತಮಾನದ ಸಿಖ್ ಯೋಧ ಮೈ ಭಾಗೋ ಅವರ ಉಲ್ಲೇಖದ ಬಗ್ಗೆ ವಿವಾದಕ್ಕೆ ಕಾರಣವಾಗಿತ್ತು. ಈ ಸಿಖ್ ಯೋಧನನ್ನು ಕೆಟ್ಟದ್ದಾಗಿ ತೋರಿಸಿದ್ದಾರೆ ಎಂದು ಆರೋಪಿಸಲಾಗಿದೆ. ಮೂಸ್ ವಾಲಾ ನಂತರ ಕ್ಷಮೆ ಯಾಚಿಸಿದ್ದರು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement