ಚೀನಾ ಹಿಂದಕ್ಕಿ ಭಾರತದ ಅತಿದೊಡ್ಡ ವ್ಯಾಪಾರ ಪಾಲುದಾರನಾದ ಅಮೆರಿಕ

ನವದೆಹಲಿ: ಅಮೆರಿಕ (ಯುಎಸ್‌ಎ) 2021-22ರಲ್ಲಿ ಚೀನಾವನ್ನು ಹಿಂದಿಕ್ಕಿ ಭಾರತದ ಅಗ್ರ ವ್ಯಾಪಾರ ಪಾಲುದಾರನಾಗಿ ಹೊರಹೊಮ್ಮಿದೆ, ಇದು ಉಭಯ ದೇಶಗಳ ನಡುವಿನ ಆರ್ಥಿಕ ಸಂಬಂಧಗಳನ್ನು ಬಲಪಡಿಸಿದೆ ಎಂಬುದನ್ನು ಸೂಚಿಸುತ್ತದೆ.
ವಾಣಿಜ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ, 2021-22 ರಲ್ಲಿ, ಅಮೆರಿಕ ಮತ್ತು ಭಾರತದ ನಡುವಿನ ದ್ವಿಪಕ್ಷೀಯ ವ್ಯಾಪಾರವು 119.42 ಶತಕೋಟಿ ಅಮೆರಿಕನ್‌ ಡಾಲರ್‌ ಆಗಿದೆ. 2020-21 ರಲ್ಲಿ $ 80.51 ಶತಕೋಟಿಯಷ್ಟಿತ್ತು.
ಅಮೆರಿಕಕ್ಕೆ ಭಾರತದ ರಫ್ತು 2021-22 ರಲ್ಲಿ $76.11 ಶತಕೋಟಿಗೆ ಏರಿಕೆಯಾಗಿದೆ ಹಿಂದಿನ ಹಣಕಾಸು ವರ್ಷದಲ್ಲಿ $51.62 ಶತಕೋಟಿಯಿತ್ತು. ಆಮದುಗಳು $43.31 ಶತಕೋಟಿಗೆ ಏರಿಕೆಯಾಗಿದ್ದು, 2020-21 ರಲ್ಲಿ $29 ಶತಕೋಟಿ ಇತ್ತು.

2021-22ರ ಅವಧಿಯಲ್ಲಿ, ಚೀನಾದೊಂದಿಗಿನ ಭಾರತದ ದ್ವಿಮುಖ ವಾಣಿಜ್ಯವು $115.42 ಶತಕೋಟಿಯಾಗಿದೆ ಎಂದು ಡೇಟಾ ತೋರಿಸಿದೆ.2020-21ರಲ್ಲಿ $86.4 ಶತಕೋಟಿಯಷ್ಟಿತ್ತು.
ಚೀನಾಕ್ಕೆ ರಫ್ತುಗಳು 2020-21ರಲ್ಲಿ $21.18 ಶತಕೋಟಿಯಿಂದ ಕಳೆದ ಆರ್ಥಿಕ ವರ್ಷದಲ್ಲಿ $21.25 ಶತಕೋಟಿಗೆ ಏರಿಕೆಯಾಗಿದೆ, ಆದರೆ ಆಮದುಗಳು 2020-21ರಲ್ಲಿ $65.21 ಶತಕೋಟಿಯಿಂದ 2021-22ರ ಅವಧಿಯಲ್ಲಿ $94.16 ಶತಕೋಟಿಗೆ ಏರಿದೆ.
ನವದೆಹಲಿ ಮತ್ತು ವಾಷಿಂಗ್ಟನ್ ಆರ್ಥಿಕ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವಲ್ಲಿ ತೊಡಗಿರುವ ಕಾರಣ ಮುಂಬರುವ ವರ್ಷಗಳಲ್ಲಿಯೂ ಅಮೆರಿಕ ಜೊತೆಗಿನ ದ್ವಿಪಕ್ಷೀಯ ವ್ಯಾಪಾರವನ್ನು ಹೆಚ್ಚಿಸುವ ಪ್ರವೃತ್ತಿಯು ಮುಂದುವರಿಯುತ್ತದೆ ಎಂದು ವ್ಯಾಪಾರ ತಜ್ಞರು ನಂಬಿದ್ದಾರೆ.

ಪ್ರಮುಖ ಸುದ್ದಿ :-   ಶಿಂಧೆ ಬಣದ ಶಿವಸೇನೆ ಸೇರಿದ ಬಾಲಿವುಡ್‌ ನಟ ಗೋವಿಂದ : 14 ವರ್ಷಗಳ ವನವಾಸದ ನಂತರ ರಾಜಕೀಯಕ್ಕೆ

ಭಾರತೀಯ ರಫ್ತು ಸಂಸ್ಥೆಗಳ ಒಕ್ಕೂಟದ ಉಪಾಧ್ಯಕ್ಷ ಖಾಲಿದ್ ಖಾನ್ ಮಾತನಾಡಿ, ಭಾರತವು ವಿಶ್ವಾಸಾರ್ಹ ವ್ಯಾಪಾರ ಪಾಲುದಾರನಾಗಿ ಹೊರಹೊಮ್ಮುತ್ತಿದೆ ಮತ್ತು ಜಾಗತಿಕ ಸಂಸ್ಥೆಗಳು ತಮ್ಮ ಸರಬರಾಜುಗಳಿಗಾಗಿ ಚೀನಾದ ಮೇಲೆ ಮಾತ್ರ ಅವಲಂಬಿಸುವುದನ್ನು ಕಡಿಮೆ ಮಾಡುತ್ತಿವೆ ಮತ್ತು ಭಾರತದಂತಹ ಇತರ ದೇಶಗಳಿಗೆ ವ್ಯಾಪಾರವನ್ನು ವೈವಿಧ್ಯಗೊಳಿಸುತ್ತಿವೆ ಎಂದು ಹೇಳಿದ್ದಾರೆ.
“ಮುಂಬರುವ ವರ್ಷಗಳಲ್ಲಿ, ಭಾರತ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ವ್ಯಾಪಾರದ ಬೆಳವಣಿಗೆ ಮುಂದುವರಿಯುತ್ತದೆ. ಇಂಡೋ-ಪೆಸಿಫಿಕ್ ಆರ್ಥಿಕ ಚೌಕಟ್ಟನ್ನು (ಐಪಿಇಎಫ್) ಸ್ಥಾಪಿಸಲು ಭಾರತವು ಅಮೆರಿಕ ನೇತೃತ್ವದ ಉಪಕ್ರಮ ಕ್ವಾಡ್‌ನಲ್ಲಿ ಸೇರಿಕೊಂಡಿದೆ ಮತ್ತು ಈ ಕ್ರಮವು ಆರ್ಥಿಕ ಸಂಬಂಧಗಳನ್ನು ಮತ್ತಷ್ಟು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಖಾನ್ ಹೇಳಿದ್ದಾರೆ.

ಭಾರತದೊಂದಿಗೆ ವ್ಯಾಪಾರ ಹೆಚ್ಚುವರಿ ಹೊಂದಿರುವ ಕೆಲವೇ ದೇಶಗಳಲ್ಲಿ ಅಮೆರಿಕವೂ ಒಂದು.
2021-22 ರಲ್ಲಿ, ಭಾರತವು ಅಮೆರಿಕದೊಂದಿಗೆ $ 32.8 ಶತಕೋಟಿ ವ್ಯಾಪಾರದ ಹೆಚ್ಚುವರಿ ಹೊಂದಿತ್ತು. 2013-14 ರಿಂದ 2017-18 ರವರೆಗೆ ಮತ್ತು 2020-21 ರಲ್ಲಿ ಚೀನಾ ಭಾರತದ ಅಗ್ರ ವ್ಯಾಪಾರ ಪಾಲುದಾರ ಎಂದು ಡೇಟಾ ತೋರಿಸಿದೆ. ಚೀನಾಕ್ಕಿಂತ ಮೊದಲು, ಯುಎಇ ದೇಶದ ಅತಿದೊಡ್ಡ ವ್ಯಾಪಾರ ಪಾಲುದಾರ ಆಗಿತ್ತು.
2021-22 ರಲ್ಲಿ, ಯುಎಇ $72.9 ಶತಕೋಟಿಯೊಂದಿಗೆ ಭಾರತದ ಮೂರನೇ ಅತಿದೊಡ್ಡ ವ್ಯಾಪಾರ ಪಾಲುದಾರ ಆಗಿತ್ತು. ಅದರ ನಂತರ ಸೌದಿ ಅರೇಬಿಯಾ ($42.85 ಶತಕೋಟಿ), ಇರಾಕ್ ($34.33 ಶತಕೋಟಿ) ಮತ್ತು ಸಿಂಗಾಪುರ ($30 ಶತಕೋಟಿ) ಡಾಲರ್ಗಳಷ್ಟು ದ್ವಿಪಕ್ಷೀಯ ವ್ಯಾಪಾರ ನಡೆಸಿವೆ.

ಪ್ರಮುಖ ಸುದ್ದಿ :-   ನಿಮ್ಮವನಾಗಿದ್ದೆ...ಯಾವಾಗಲೂ ನಿಮ್ಮವನಾಗಿಯೇ ಇರ್ತೇನೆ..: ಬಿಜೆಪಿ ಟಿಕೆಟ್ ನಿರಾಕರಣೆ ನಂತ್ರ ಪಿಲಿಭಿತ್‌ ಜನತೆಗೆ ʼಹೃದಯಸ್ಪರ್ಶಿʼ ಪತ್ರ ಬರೆದ ವರುಣ ಗಾಂಧಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement