ಕರ್ನಾಟಕದಿಂದ ರಾಜ್ಯಸಭೆಗೆ ಸ್ಪರ್ಧೆ: ಕುಪೇಂದ್ರ ರೆಡ್ಡಿ ಶ್ರೀಮಂತ ಅಭ್ಯರ್ಥಿ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಕಡಿಮೆ ಆಸ್ತಿ ಇರುವ ಅಭ್ಯರ್ಥಿ

ಬೆಂಗಳೂರು: ಬಿಜೆಪಿಯಿಂದ ಮೂವರು, ಕಾಂಗ್ರೆಸ್‌ನಿಂ ಇಬ್ಬರು, ಜೆಡಿಎಸ್​ನಿಂದ ಒಬ್ಬರು ಮಂಗಳವಾರ ನಾಮಪತ್ರ ಸಲ್ಲಿಸಿದ್ದಾರೆ. ಅವರು ತಮ್ಮ ಆಸ್ತಿ ವಿವರವನ್ನೂ ಘೋಷಿಸಿಕೊಂಡಿದ್ದಾರೆ.
ಕರ್ನಾಟಕದ ರಾಜ್ಯಸಭಾ ಅಭ್ಯರ್ಥಿಗಳಲ್ಲಿ ಜೆಡಿಎಸ್‌ನ ಕುಪೇಂದ್ರ ರೆಡ್ಡಿ ಅತಿ ಶ್ರೀಮಂತ ಅಭ್ಯರ್ಥಿಯಾಗಿದ್ದಾರೆ. ಎರಡನೇ ಶ್ರೀಮಂತ ಅಭ್ಯರ್ಥಿಗ ಕಾಂಗ್ರೆಸ್‌ನ ಮನ್ಸೂರ್‌ ಆಗಿದ್ದಾರೆ. ಉಳಿದಂತೆ ನವರಸ ನಾಯಕ ಜಗ್ಗೇಶ ನಂತರದ ಸ್ಥಾನದಲ್ಲಿದ್ದಾರೆ. ಅತಿ ಕಡಿಮೆ ಆಸ್ತಿ ಹೊಂದಿರುವವರೆಂದರೆ ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್‌ ಅವರು. ರಾಜ್ಯ ಸಭೆಗೆ ಸ್ಪರ್ಧಿಸಿರುವ ಎಲ್ಲ ಅಭ್ಯರ್ಥಿಗಳು ಘೋಷಿಸಕೊಂಡ ಆಸ್ತಿ ವಿವರಗಳನ್ನು ನೀಡಲಾಗಿದೆ.

ನಿರ್ಮಲಾ ಸೀತಾರಾಮನ್‌ ಆಸ್ತಿ ವಿವರ…
ನಿರ್ಮಲಾ ಸೀತಾರಾಮನ್‌ ಅವರ ಒಟ್ಟು ಆಸ್ತಿ ಮೌಲ್ಯ 2,50,99,396 ರೂ.ಗಳಾಗಿವೆ. ಅದರಲ್ಲಿ ಸ್ಥಿರಾಸ್ತಿ 1,87,60,200, ಚರಾಸ್ತಿ 63,39,196 ರೂ.
ಅಲ್ಲದೆ ಅವರ ಬಳಿ 315 ಗ್ರಾಂ ಚಿನ್ನ, 2 ಕೆಜಿ ಬೆಳ್ಳಿ ಇದೆ. ಹಾಗೂ ಅವರ ಕೈಯಲ್ಲಿರುವ ಹಣ 17,200 ರೂಪಾಯಿಗಳು. ಬ್ಯಾಂಕಿನಲ್ಲಿ 45,04,479 ರೂಪಾಯಿ ಎಫ್ಡಿ ಇದೆ. ನಿರ್ಮಲಾ ಬಳಿ 1 ಸ್ಕೂಟರ್ ಇದೆ. ಇವರು 30,44,838 ರೂ. ಸಾಲ ಪಡೆದಿದ್ದಾರೆ. ಕುಟುಂಬಸ್ಥರಿಗೆ ನೀಡಿದ ಸಾಲ 3,50,000 ರೂ. ಆಂಧ್ರಪ್ರದೇಶದ ರಂಗಾರೆಡ್ಡಿ ಜಿಲ್ಲೆಯ ಕುಂಟನೂರು ಗ್ರಾಮದಲ್ಲಿ 4806 ಚದರ ಅಡಿ ಜಮೀನು ಖರೀದಿಸಿದ್ದಾರೆ ಎಂದು ನಿರ್ಮಲಾ ಸೀತಾರಾಮನ್ ತಮ್ಮ ಆಸ್ತಿವಿವರ ಘೋಷಿಸಿಕೊಂಡಿದ್ದಾರೆ.

ಬಿಜೆಪಿ ಅಭ್ಯರ್ಥಿ ಜಗ್ಗೇಶ್ ಆಸ್ತಿ ವಿವರ…
ಜಗ್ಗೇಶ್ ಬಳಿ ಒಟ್ಟು 17,64,23,378 ರೂ ಆಸ್ತಿ ಇದೆ. ಸ್ಥಿರಾಸ್ತಿ: 13,25,00,000 ರೂ.ಗಳು ಮತ್ತು ಚರಾಸ್ತಿ- 4,39,23,378 ರೂ.ಗಳನ್ನು ಹೊಂದಿದ್ದಾರೆ. ಕೈಯಲ್ಲಿರುವ ಹಣ: 2,00,000 ರೂ.ಗಳು ಪತ್ನಿ ಬಳಿ ಇರುವ ಹಣ 1,60,000 ರೂ.ಗಳು. ಇದಲ್ಲದೆ, ಅವರ ಬಳಿ 500 ಗ್ರಾಂ ಚಿನ್ನ, 1 ಕೆಜಿ ಬೆಳ್ಳಿ ಇದೆ. ಹಾಗೂ ಅವರ ಪತ್ನಿ ಬಳಿ 500 ಗ್ರಾಂ. ಚಿನ್ನ, 3 ಕೆಜಿ ಬೆಳ್ಳಿ ಇದೆ. ಕೃಷಿ ಭೂಮಿ- 6,75,00,000 ರೂ. ಮನೆ -6,50,00,000 ರೂ. ಪತ್ನಿ ಹೆಸರಲ್ಲಿರುವ ಮನೆ- 4,50,00,000 ರೂ. 2 ಬಿಎಂಡಬ್ಲ್ಯು, 1 ಇನ್ನೋವಾ, ರಾಯಲ್ ಎನ್‌ಫೀಲ್ಡ್ ಬೈಕ್, ಎಕ್ಸೆಸ್ ಯು.ಝಡ್ ಸ್ಕೂಟಿ ಇಟ್ಟುಕೊಂಡಿದ್ದಾರೆ. ಜಗ್ಗೇಶ್ ಹೆಸರಲ್ಲಿ 2,91,24,140 ರೂ ಸಾಲ ಇದ್ದು ಅವರ ಪತ್ನಿ ಹೆಸರಲ್ಲಿ 4,00,000 ರೂ ಸಾಲ ಇದೆ ಎಂದು ಅವರು ಘೋಷಿಸಿಕೊಂಡಿದ್ದಾರೆ.

ಪ್ರಮುಖ ಸುದ್ದಿ :-   ಕುಣಿಗಲ್ : ರಾಮನವಮಿ ಪಾನಕ ಸೇವಿಸಿದ 42 ಮಂದಿ ಅಸ್ವಸ್ಥ

ಜೆಡಿಎಸ್‌ನ ಕುಪೇಂದ್ರ ರೆಡ್ಡಿ ಅತಿ ಹೆಚ್ಚು ಶ್ರೀಮಂತ ಅಭ್ಯರ್ಥಿ
ಜೆಡಿಎಸ್​ನಿಂದ ಸ್ಪರ್ಧಿಸಿರುವ ಕುಪೇಂದ್ರ ರೆಡ್ಡಿ ನಾಮಪತ್ರದ ಜೊತೆಗೆ ಆಸ್ತಿ ವಿವರ ನೀಡಿದ್ದು, ಒಟ್ಟು 353.42 ಕೋಟಿ ರೂ. ಮೌಲ್ಯದ ಚರಾಸ್ತಿ ಹಾಗೂ 222,47,60,624 ರೂ. ಮೌಲ್ಯದ ಸ್ತಿರಾಸ್ತಿ ಸೇರಿ 575,89,75,550 ರೂ. ಒಡೆಯರಾಗಿದ್ದಾರೆ. ಅವರು 21,12,381 ರೂ. ನಗದು ಹೊಂದಿದ್ದರೆ, ಅವರ ಪತ್ನಿ ಆರ್.ಪುಷ್ಪಾವತಿ 43,41,108 ರೂ. ಹೊಂದಿದ್ದಾರೆ. ಅವಿಭಕ್ತ ಕುಟುಂಬದಲ್ಲಿ 9,32,408 ರೂ. ನಗದು ಇದೆ.
ಬಾಂಡ್, ಷೇರು, ಮ್ಯೂಚುವಲ್ ಫಂಡ್​ಗಳಲ್ಲಿ 88.44 ಕೋಟಿ ರೂ. ಹೂಡಿಕೆ ಮಾಡಿದ್ದರೆ, ಪತ್ನಿ ಹೆಸರಿನಲ್ಲಿ 9.06 ಲಕ್ಷ ರೂ. ಹೂಡಿಕೆ ಮಾಡಲಾಗಿದೆ. ವೈಯಕ್ತಿಕ ಸಾಲ, ಮುಂಗಡ ಸೇರಿ ಒಟ್ಟು 244.46 ಲಕ್ಷ ರೂ. ಮತ್ತು ಪತ್ನಿ ಹೆಸರಿನಲ್ಲಿ 242.18 ಲಕ್ಷ ರೂ. ಹಾಗೂ ಅವಿಭಕ್ತ ಕುಟುಂಬದ ಹೆಸರಿನಲ್ಲಿ 43.95 ಲಕ್ಷ ರೂ. ಇದೆ. 1 ಆಡಿ ಹಾಗೂ 2 ಟೊಯೋಟಾ ಫಾರ್ಚುನರ್ ಕಾರುಗಳನ್ನು ಹೊಂದಿದ್ದು, ಅವುಗಳ ಒಟ್ಟು ಮೌಲ್ಯ 1.35 ಕೋಟಿ ರೂ.ಗಳಾಗಿದೆ. ರೆಡ್ಡಿ ಬಳಿ 1.74 ಕೋಟಿ ರೂ. ಮೌಲ್ಯದ ಚಿನ್ನಾಭರಣವಿದ್ದರೆ, ಅವರ ಪತ್ನಿ ಹೆಸರಿನಲ್ಲಿ 3.51 ಕೋಟಿ ರೂ. ಬೆಲೆಯ ಚಿನ್ನಾಭರಣಗಳಿವೆ.

ಬಿಜೆಪಿ ಅಭ್ಯರ್ಥಿ ಲೆಹರ್ ಸಿಂಗ್ ಆಸ್ತಿ ವಿವರ
2016-17ರಲ್ಲಿ 71.37 ಲಕ್ಷ ರೂ. ಇದ್ದ ಲೆಹರ್‌ ಸಿಂಗ್‌ ಅವರ ವಾರ್ಷಿಕ ಆದಾಯ 2020-21ಕ್ಕೆ 2.11 ಕೋಟಿ ರೂ.ಗೆ ಏರಿಕೆಯಾಗಿದೆ.
ನಗದು, ಠೇವಣಿ, ವಿವಿಧ ಕಂಪನಿಗಳಲ್ಲಿ ಹೂಡಿಕೆ, ಶೇರು, ಬಂಗಾರ-ಬೆಳ್ಳಿ ಸೇರಿ ಒಟ್ಟು 16.15 ಕೋಟಿ ರೂ. ಮೌಲ್ಯದ ಚರಾಸ್ತಿಯಿದೆ.
ನಿವೇಶನ, ಮನೆಗಳು ಸೇರಿ 29.40 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿಯಿದ್ದು, 40.50 ಲಕ್ಷ ರೂ. ಸಾಲವಿದೆ.
ಪತ್ನಿ ಶಾಂತಾಬಾಯಿ ವಾರ್ಷಿಕ ಆದಾಯ 2020-21ರಲ್ಲಿ 41.76 ಲಕ್ಷ ರೂ.ಗಳಿದೆ. 6.94 ಕೋಟಿ ರೂ. ಮೊತ್ತದ ಚರಾಸ್ತಿ, 88 ಲಕ್ಷ ರೂ. ಸ್ಥಿರಾಸ್ತಿ, 52.50 ಲಕ್ಷ ರೂ. ಸಾಲವಿದೆ. ಅವಿಭಜಿತ ಕುಟುಂಬದ ಹೆಸರಿನಲ್ಲಿ 1.21 ಕೋಟಿ ರು. ಮೌಲ್ಯದ ಚರಾಸ್ತಿ, 6.50 ಲಕ್ಷ ರೂ. ಮೌಲ್ಯದ ಸ್ಥಿರಾಸ್ತಿಯಿದೆ.

ಪ್ರಮುಖ ಸುದ್ದಿ :-   ಗದಗ: ನಗರಸಭೆ ಅಧ್ಯಕ್ಷೆ ಪುತ್ರ ಸೇರಿ ನಾಲ್ವರ ಭೀಕರ ಹತ್ಯೆ

ಕಾಂಗ್ರೆಸ್‌ ಅಭ್ಯರ್ಥಿ ಜೈರಾಂ ರಮೇಶ ಆಸ್ತಿ ವಿವರ
ಮೂಲತಃ ಕರ್ನಾಟಕದ ಚಿಕ್ಕಮಗಳೂರಿನವರಾದ ಕಾಂಗ್ರೆಸ್ ಅಭ್ಯರ್ಥಿ ಜೈರಾಮ್ ರಮೇಶ್ ಚಿಕ್ಕಮಗಳೂರಿನಲ್ಲಿ ಬ್ಯಾಂಕ್ ಖಾತೆ ಹೊಂದಿದ್ದಾರೆ. ಒಟ್ಟಾರೆ ಅವರ ಬಳಿ 6 ಖಾತೆಗಳಲ್ಲಿ 90.59 ಲಕ್ಷ ರೂ ಠೇವಣಿ ಇದ್ದು, 45 ಲಕ್ಷ ರೂ.ನ ಚಿನ್ನ, 4.5 ಲಕ್ಷ ಮೌಲ್ಯದ ವಜ್ರ, 1.2 ಲಕ್ಷ ರೂ.ನ ಬೆಳ್ಳಿ ಸಾಮಗ್ರಿಗಳಿವೆ. ಚೆನ್ನೈನಲ್ಲಿ 2 ಮನೆ ಹೊಂದಿದ್ದು, ಅದರ ಮಾರುಕಟ್ಟೆ ದರ 2.84 ಕೋಟಿ ರೂ., 35.47 ಲಕ್ಷ ರೂ. ಸಾಲ ಹೊಂದಿದ್ದಾರೆ.

ಕಾಂಗ್ರೆಸ್‌ ಅಭ್ಯರ್ಥಿ ಮನ್ಸೂರ್ ಬಳಿ 44 ಕೋಟಿ ರೂ. ಸ್ಥಿರಾಸ್ತಿ
ಮನ್ಸೂರ್ ಆಲಿಖಾನ್ ಬಳಿ 8.39 ಕೋಟಿ ರೂ, ಪತ್ನಿ ಬಳಿ 4.41 ಕೋಟಿ ರೂ. ಮತ್ತು ಇಬ್ಬರ ಅವಲಂಬಿತರ ಬಳಿ 36 ಲಕ್ಷದಷ್ಟು ಚರಾಸ್ತಿ ಇದೆ. 10 ಕಡೆ ಕೃಷಿ ಭೂಮಿ, 9 ಕಡೆ ಕೃಷಿಯೇತರ ಭೂಮಿ, ಐದು ವಸತಿ ಕಟ್ಟಡಗಳು ಸೇರಿ 44 ಕೋಟಿಯಷ್ಟು (ಪತಿ- ಪತ್ನಿ ಸೇರಿ) ಮೌಲ್ಯದ ಸ್ಥಿರಾಸ್ತಿ ಇದೆ. ಮನ್ಸೂರ್ 1.92 ಲಕ್ಷ ಸಾಲಗಾರರಾಗಿದ್ದಾರೆ. ಮನ್ಸೂರ್ ಪತ್ನಿ ಹೆಸರಲ್ಲಿ 2 ಕೋಟಿ ರೂ. ಸಾಲವಿದೆ, ಅವರ ಬಳಿ 48 ಲಕ್ಷ ರೂ. ಮಿನಿ ಕೂಪರ್ ಹಾಗೂ ಪತ್ನಿ ಬಳಿ 1.09 ಕೋಟಿ ಮೌಲ್ಯದ ಬಿಎಂಡಬ್ಲ್ಯು ಮತ್ತು 17.5 ಲಕ್ಷದ ಹುಂಡೈ ಕ್ರೆಟಾ ಕಾರಿದೆ.

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement