ಪ್ರಯಾಣಿಕರ ಸುರಕ್ಷತೆ ನಿಯಮ ಉಲ್ಲಂಘನೆ: ಏರ್​ ವಿಸ್ತಾರಾಗೆ 10 ಲಕ್ಷ ರೂ. ದಂಡ ವಿಧಿಸಿದ ಡಿಜಿಸಿಎ

ನವದೆಹಲಿ : ಪ್ರಯಾಣಿಕರ ಸುರಕ್ಷತೆ ಕುರಿತು ನಿಯಮ ಉಲ್ಲಂಘನೆ ಮಾಡಿದ ಏರ್‌ ವಿಸ್ತಾರಾಗೆ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯವು (ಡಿಜಿಸಿಎ) 10 ಲಕ್ಷ ರೂ.ಗಳ ದಂಡ ಹಾಕಿದೆ.
ಮಧ್ಯಪ್ರದೇಶದ ಇಂದೂರ್‌ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿದ್ದ ವಿಮಾನವನ್ನು ತರಬೇತಿಯಿಲ್ಲದೆ ಪೈಲಟ್‌ನಿಂದ ಲ್ಯಾಂಡಿಂಗ್‌ ಮಾಡಿಸಿದ್ದಕ್ಕಾಗಿ ದಂಡ ಹಾಕಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಾಹಿತಿಗಳ ಪ್ರಕಾರ ಸಿಮ್ಯುಲೇಟರ್​​ನಲ್ಲಿ ಅಗತ್ಯ ತರಬೇತಿ ಪಡೆಯದ ಪೈಲಟ್​​ ವಿಮಾನ ಲ್ಯಾಂಡ್ ಮಾಡಿದ್ದು, ಫರ್ಸ್ಟ್ ಆಫೀಸರ್ ವಿಮಾನವನ್ನು ಲ್ಯಾಂಡ್ ಮಾಡುವುದಕ್ಕೂ ಮುನ್ನ ಅವರು ಸಿಮ್ಯುಲೇಟರ್​​ನಲ್ಲಿ ತರಬೇತಿ ಪಡೆದಿರಬೇಕು. ಈ ರೀತಿ ತರಬೇತಿ ಪಡೆದವರನ್ನು ಮಾತ್ರ ವಿಮಾನ ಲ್ಯಾಂಡ್ ಮಾಡುವುದಕ್ಕೆ ಅನುಮತಿಸುವ ಕ್ಯಾಪ್ಟನ್ ಸಹ ತರಬೇತಿ ಪಡೆದಿರಬೇಕು ಎಂದು ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

0 / 5. 0

ಶೇರ್ ಮಾಡಿ :
ಪ್ರಮುಖ ಸುದ್ದಿ :-   "ನನ್ನ 90 ಸೆಕೆಂಡುಗಳ ಭಾಷಣವು ಕಾಂಗ್ರೆಸ್, ಇಂಡಿಯಾ ಮೈತ್ರಿಕೂಟದಲ್ಲಿ ತಲ್ಲಣ ಮೂಡಿಸಿದೆ" : ಪ್ರಧಾನಿ ಮೋದಿ

ನಿಮ್ಮ ಕಾಮೆಂಟ್ ಬರೆಯಿರಿ

advertisement