ಮೊದಲು ಹಿಜಾಬ್‌ ಸಮಸ್ಯೆ ಇರಲಿಲ್ಲ. ಇದು ಈಗ ಒಮ್ಮೆಲೇ ಆರಂಭವಾಗಿದೆ: ಹಿಜಾಬ್‌ ವಿದ್ಯಾರ್ಥಿನಿಯರು

ಮಂಗಳೂರು: ಈ ಹಿಂದೆ ಕಾಲೇಜಿನಲ್ಲಿ ಹಿಜಾಬ್‌ ಕುರಿತು ಯಾವುದೇ ಸಮಸ್ಯೆ ಇರಲಿಲ್ಲ. ಎಬಿವಿಪಿ ಒತ್ತಡದಿಂದ ಪ್ರಾಂಶುಪಾಲರು ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.
ಮಂಗಳೂರು ನಗರದ ಹಂಪನಕಟ್ಟಾದಲ್ಲಿರುವ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಹಿಜಾಬ್‌ ಧರಿಸಿ ಬರುವುದನ್ನು ಈಗಾಗಲೇ ಕಾಲೇಜು ಪ್ರವೇಶ ನಿರಾಕರಿಸಲಾಗಿದೆ. ಆದರೆ, ವಿದ್ಯಾರ್ಥಿನಿಯರು ಹಿಜಾಬ್‌ ಧರಿಸಲು ಅವಕಾಶ ನೀಡುವಂತೆ ಈಗಾಗಲೇ ಜಿಲ್ಲಾಧಿಕಾರಿಯನ್ನೂ ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.
ಈಗ ಮಂಗಳೂರು ವಿಶ್ವ ವಿದ್ಯಾಲಯ ವಿದ್ಯಾರ್ಥಿ ಸಮನ್ವಯ ಸಮಿತಿಯಡಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಈ ಹಿಂದಿನ ಪ್ರಾಸ್ಪೆಕ್ಟಸ್‌ನಲ್ಲಿರುವ ನಿಯಮಗಳನ್ನು ಒಪ್ಪಿ ಕಾಲೇಜಿಗೆ ಬಂದಿದ್ದೇವೆ. ಹಿಂದಿನಿಂದಲೂ ಸಮವಸ್ತ್ರದ ಶಾಲನ್ನು ಹಿಜಾಬ್ ರೀತಿ ಧರಿಸಿ ಕಾಲೇಜಿಗೆ ಬರುತ್ತೀದ್ದೇವೆ. ಈಗ ಹಿಜಾಬ್ ಧರಿಸದಂತೆ ಕಾಲೇಜು ಆದೇಶ ನೀಡಿದೆ. ಈ ಬಗ್ಗೆ ಹೈಕೋರ್ಟ್ ಆದೇಶ ಇಲ್ಲ. ಇದರ ಹಿಂದೆ ಎಬಿವಿಪಿ ಒತ್ತಡ ಇದೆ. ಈ ವರ್ಷ ಹಿಜಾಬ್‌ ಧರಿಸಿ ನಮಗೆ ಶಿಕ್ಷಣ ಪಡೆಯಲು ಅವಕಾಶ ಕಲ್ಪಿಸಬೇಕು ಬೇಡಿಕೆ ಮಂಡಿಸಿದ್ದಾರೆ.

ವಿದ್ಯಾರ್ಥಿನಿ ಗೌಸಿಯಾ, ಕಾಲೇಜು ಪ್ರಾಂಶುಪಾಲೆ ಡಾ.ಅನಸೂಯಾ ರೈ ಅವರು ವಿದ್ಯಾರ್ಥಿಗಳಿಗೆ ಹಿಜಾಬ್ ಧರಿಸಿ ತರಗತಿಗಳಿಗೆ ಹಾಜರಾಗಲು ಅವಕಾಶವಿಲ್ಲ ಎಂದು ವಾಟ್ಸಾಪ್‌ನಲ್ಲಿ ಸಂದೇಶ ಕಳುಹಿಸಿದ್ದರು. ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ, ಅವರು ಯಾವುದೇ ಅಧಿಕೃತ ಹೇಳಿಕೆಯನ್ನು ಸ್ವೀಕರಿಸದ ಕಾರಣ ಮತ್ತು ಅವರ ವಾಟ್ಸಾಪ್ ಸಂದೇಶವನ್ನು ಅನುಸರಿಸಲು ಸಾಧ್ಯವಿಲ್ಲ ಎಂದರು.

ಪ್ರಮುಖ ಸುದ್ದಿ :-   ಏಪ್ರಿಲ್‌ 28, 29 ರಂದು ಉತ್ತರ ಕರ್ನಾಟಕದಲ್ಲಿ ಪ್ರಧಾನಿ ಮೋದಿ ಭರ್ಜರಿ ಪ್ರಚಾರ : ಬೆಳಗಾವಿಯಲ್ಲಿ ತಂಗುವ ಸಾಧ್ಯತೆ

ಮತ್ತೊಬ್ಬ ವಿದ್ಯಾರ್ಥಿನಿ ಘೌಸಿಯಾ ಮಾತನಾಡಿ, ಹಿಜಾಬ್‌ ವಿಚಾರವಾಗಿ ಹೈಕೋರ್ಟ್‌ ಆದೇಶ ನೀಡಿ ಎರಡು ತಿಂಗಳಾದರೂ ಪ್ರತಿಭಟನೆ ನಡೆದಿರಲಿಲ್ಲ. ಈಗ ಎಬಿವಿಪಿ ಒತ್ತಡಕ್ಕೆ ಮಣಿದು ಬಲವಂತವಾಗಿ ಆದೇಶ ಹೊರಡಿಸಿದೆ. ನಾವು ನ್ಯಾಯಕ್ಕಾಗಿ ಹೋರಾಡುತ್ತೇವೆ ಮತ್ತು ಭರವಸೆ ಕಳೆದುಕೊಳ್ಳುವುದಿಲ್ಲ ಎಂದರು.
ರಿಯಾಜ್ ಮಾತನಾಡಿ, ಇದು ಹಿಜಾಬ್ ಸಮಸ್ಯೆಯಲ್ಲ, ಎಬಿವಿಪಿ ಮತ್ತು ಇತರ ವಿಷಯಗಳ ಮೂಲಕ ತೀವ್ರವಾದ ಒತ್ತಡ ಮತ್ತು ಪ್ರತಿಭಟನೆಗಳ ಮೂಲಕ ರಚಿಸಲಾದ ಸಮಸ್ಯೆಯಾಗಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ವಿದ್ಯಾರ್ಥಿನಿ ಶಾಜ್ಮಾ, ಮಶಿತಾ, ಸಂಚಾಲಕ ಆಶಾಮ್ ಮೊದಲಾದವರಿದ್ದರು.

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement