ಈ ಹಳ್ಳಿಗರು ನೀರಿಗಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟಿದ್ದಾರೆ | ವೀಕ್ಷಿಸಿ

ಬೇಸಿಗೆಯ ಕಾರಣ ಹಳ್ಳಿಗಳು ನೀರಿಗಾಗಿ ಪರದಾಡುವಾಗ ಮಧ್ಯಪ್ರದೇಶದ ಘುಸಿಯಾ ಗ್ರಾಮದ ನಿವಾಸಿಗಳು ನೀರಿಗಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟಿದ್ದಾರೆ…!
ವೀಡಿಯೊದಲ್ಲಿ, ಗ್ರಾಮದ ನಿವಾಸಿಗಳು ಕೇವಲ ನೀರಿಲ್ಲದ ಬಾವಿಯಿಂದ ಇರುವ ಅಲ್ಪಸ್ವಲ್ಪ ನೀರನ್ನು ತರಲು ಬಹಳ ದೂರ ನಡೆದುಕೊಂಡು ಹೋಗುತ್ತಿರುವುದನ್ನು ಕಾಣಬಹುದು.ಸೀರೆಯುಟ್ಟ ಮಹಿಳೆಯೊಬ್ಬರು ಆಳವಾದ ಬಾವಿಯ ಗೋಡೆಯನ್ನು ಹಗ್ಗ ಅಥವಾ ಇನ್ಯಾವುದೇ ಸರಂಜಾಮಿಲ್ಲದೆ ಏರುವುದನ್ನುಕಾಣಬಹುದು. ಹಳದಿ ಕುರ್ತಾದಲ್ಲಿ ಎರಡನೇ ಹುಡುಗಿ ಕೂಡ ಬಾವಿಯೊಳಗೆ ಇಳಿದು ನೀರು ತುಂಬುದು ಮತ್ತು ಆಳವಾದ ಬಾವಿ ಏರುವುದನ್ನು ಕಾಣಬಹುದು.

ಬಾವಿಯ ಕೆಳಭಾಗದಲ್ಲಿ ತಳಮಟ್ಟದಲ್ಲಿ ಸ್ವ್ಲಪವೇ ರಾಡಿ ನೀರು ಇದೆ. ನಿವಾಸಿಗಳು ಉಳಿದಿರುವ ನೀರಿನ್ನೇ ಸಣ್ಣ ಪಾತ್ರೆಗಳಿಂದ ಬಕೆಟ್‌ಗೆ ತುಂಬಿ ಮೇಲಕ್ಕೆ ಎತ್ತುತ್ತಾರೆ.
ಬುಡಕಟ್ಟು ಜನಾಂಗದವರೇ ಹೆಚ್ಚಾಗಿರುವ ದಿಂಡೋರಿ ಜಿಲ್ಲೆಯ ಜನರು ಕಳೆದ ಹಲವು ವರ್ಷಗಳಿಂದ ಎದುರಿಸುತ್ತಿರುವ ತೀವ್ರ ನೀರಿನ ಸಮಸ್ಯೆಯಿಂದ ಆಕ್ರೋಶಗೊಂಡ ಗ್ರಾಮಸ್ಥರು ಗ್ರಾಮದ ಪ್ರತಿ ಮನೆಗೂ ಸಂಪರ್ಕ ಸಿಗುವವರೆಗೆ ಗ್ರಾಮ ಪಂಚಾಯಿತಿ ಚುನಾವಣೆ ಬಹಿಷ್ಕರಿಸಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.

ಘುಸಿಯಾದ ಬರೋ ತೋಲಾ ಗ್ರಾಮಸ್ಥ ಕುಸುಮ ಅವರು, “ನಾವು ಬಹಳ ದಿನಗಳಿಂದ ನೀರಿನ ಸಮಸ್ಯೆ ಎದುರಿಸುತ್ತಿದ್ದೇವೆ, ಆಡಳಿತವು ನಮ್ಮ ಸಮಸ್ಯೆಗೆ ಗಮನ ಕೊಡುತ್ತಿಲ್ಲ, ಸರ್ಕಾರಿ ನೌಕರರು ಮತ್ತು ರಾಜಕೀಯ ಮುಖಂಡರು ಚುನಾವಣಾ ಸಮಯದಲ್ಲಿ ಮಾತ್ರ ಬರುತ್ತಾರೆ.ನಮಗೆ ಸರಿಯಾದ ನೀರು ಪೂರೈಕೆಯಾಗುವವರೆಗೆ ಮತ ನೀಡಬಾರದು ಎಂದು ನಾವು ಈ ಬಾರಿ ನಿರ್ಧರಿಸಿದ್ದೇವೆ. ಸರ್ಕಾರದಿಂದ ಗ್ರಾಮಕ್ಕೆ ನೀರು ಸರಬರಾಜು ಮಾಡಬೇಕೆಂಬುದು ನಮ್ಮ ಏಕೈಕ ಬೇಡಿಕೆ ಎಂದು ಹೇಳುತ್ತಾರೆ.

ಗ್ರಾಮದ ಮತ್ತೊಬ್ಬರಾದ ರೂಡಿಯಾ ಬಾಯಿ ಮಾತನಾಡಿ, ಗ್ರಾಮದಲ್ಲಿ ಬಹುತೇಕ ಬಾವಿಗಳು ಬತ್ತಿ ಹೋಗಿವೆ. ಹಗಲು ರಾತ್ರಿ ಎನ್ನದೆ ಬಾವಿಗೆ ಇಳಿದು ನೀರು ಸಂಗ್ರಹಿಸಬೇಕು. ಗ್ರಾಮದಲ್ಲಿ ಮೂರು ಬಾವಿಗಳಿದ್ದು ಎಲ್ಲವೂ ಬತ್ತಿ ಹೋಗಿವೆ, ಕೈಪಂಪುಗಳಲ್ಲಿ ನೀರಿಲ್ಲ. ಹನ್ನೆರಡು ತಿಂಗಳಿಂದ ಪರಿಸ್ಥಿತಿ ಹೀಗೆಯೇ ಇದೆ ಎಂದು ಹೇಳಿದ್ದಾರೆ.
ನಳಜಲ ಯೋಜನೆ ಇಲ್ಲಿ ಸಿಕ್ಕಿಲ್ಲ. ಮತ್ತು ಜನರು ಪ್ರತಿ ಹನಿ ನೀರಿಗಾಗಿ ಪರದಾಡುತ್ತಿದ್ದಾರೆ ಎಂದು ಘುಸಿಯಾ ಪಂಚಾಯತ್‌ನ ಗ್ರೌಂಡ್ ಝೀರೋ ವರದಿಗಳು ಬಹಿರಂಗಪಡಿಸುತ್ತವೆ. ನರ್ಮದಾ ನದಿಯು ಗ್ರಾಮದಿಂದ ಸುಮಾರು 3 ಕಿ.ಮೀ ದೂರದಲ್ಲಿದೆ. ಮಧ್ಯಪ್ರದೇಶದ 313 ಬ್ಲಾಕ್‌ಗಳಲ್ಲಿ 84 ಬ್ಲಾಕ್‌ಗಳು ತೀವ್ರ ನೀರಿನ ಕೊರತೆಯನ್ನು ಎದುರಿಸುತ್ತಿವೆ.

ಪ್ರಮುಖ ಸುದ್ದಿ :-   ನಾಳೆ ಫಿಲಿಪ್ಪೀನ್ಸ್‌ಗೆ ʼಬ್ರಹ್ಮೋಸ್ ಕ್ಷಿಪಣಿʼಗಳ ಮೊದಲ ಸೆಟ್ ನೀಡಲಿದೆ ಭಾರತ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement