ಪ್ರಬಲ ವಿರೋಧ ಪಕ್ಷ ಬೇಕು, ಬಲಿಷ್ಠ ಪ್ರಜಾಪ್ರಭುತ್ವಕ್ಕೆ ಸ್ವಜನಪಕ್ಷಪಾತ-ಕುಟುಂಬ ರಾಜಕಾರಣದಿಂದ ಪಕ್ಷಗಳು ಹೊರಬರಬೇಕು: ಪ್ರಧಾನಿ ಮೋದಿ

ಕಾನ್ಪುರ(ಉತ್ತರ ಪ್ರದೇಶ): ರಾಜಕೀಯದಲ್ಲಿ ಪರಿವಾರ ಅಥವಾ ವಂಶವಾದವನ್ನು ಗುರಿಯಾಗಿಸಿಕೊಂಡು ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ನಿರ್ದಿಷ್ಟ ವ್ಯಕ್ತಿ ಅಥವಾ ರಾಜಕೀಯ ಪಕ್ಷದ ವಿರುದ್ಧ ಯಾವುದೇ ವೈಯಕ್ತಿಕ ಅಸಮಾಧಾನವನ್ನು ಹೊಂದಿಲ್ಲ ಎಂದು ಶುಕ್ರವಾರ ಹೇಳಿದ್ದಾರೆ ಮತ್ತು ದೇಶದಲ್ಲಿ ಪ್ರಬಲ ಪ್ರತಿಪಕ್ಷವನ್ನು ಬಯಸುವುದಾಗಿ ಪ್ರತಿಪಾದಿಸಿದ್ದಾರೆ.
ಕುಟುಂಬ ರಾಜಕಾರಣವನ್ನೇ ನೆಚ್ಚಿರುವ ಪಕ್ಷಗಳು ನನ್ನ ವಿರುದ್ಧ ಗುಡುಗುತ್ತಿವೆ. ನನಗೆ ವೈಯಕ್ತಿಕವಾಗಿ ಯಾರೊಂದಿಗೂ ಸಮಸ್ಯೆ ಇಲ್ಲ. ದೇಶದಲ್ಲಿ ಪ್ರಬಲ ಪ್ರತಿಪಕ್ಷ ಬೇಕು ಎಂದು ಹೇಳಬಯಸುತ್ತೇನೆ. ಸ್ವಜನಪಕ್ಷಪಾತದ ಸುಳಿಯಲ್ಲಿ ಸಿಲುಕಿರುವ ಈ ಪಕ್ಷಗಳು, ಪ್ರಜಾಪ್ರಭುತ್ವವನ್ನು ಬಲಪಡಿಸಲು ಮೇಲಕ್ಕೆ ಬರಬೇಕೇ ಹೊತರು ಕುಟುಂಬ ರಾಜಕಾರಣದಲ್ಲಿ ಮುಳುಗುವುದಲ್ಲ ಎಂದು ಕಾಂಗ್ರೆಸ್‌ ಮತ್ತು ಕೆಲ ಸ್ಥಳೀಯ ಪಕ್ಷಗಳಿಗೆ ಪ್ರಧಾನಿ ಮೋದಿ ಮೋದಿ ಟಾಂಗ್‌ ನೀಡಿದ್ದಾರೆ.

ಉತ್ತರ ಪ್ರದೇಶದ ಕಾನ್ಪುರ ದೇಹತ್‌ನಲ್ಲಿರುವ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಪೂರ್ವಜರ ಗ್ರಾಮವಾದ ಪರೌಂಖ್‌ನಲ್ಲಿ ಇಂದು ಮೋದಿ ಮಾತನಾಡಿದ್ದಾರೆ.
ದೇಶದಲ್ಲಿ ಇನ್ನು ಮುಂದೆ ಪ್ರಬಲ ಪ್ರತಿಪಕ್ಷ ಬರಬೇಕಾದರೆ ಸ್ವಜನಪಕ್ಷಪಾತದಲ್ಲಿ ಸಿಲುಕಿರುವ ಪಕ್ಷಗಳು ಅದನ್ನು ಮೀರಿ ಮೇಲೇರಬೇಕು. ಆಗ ಮಾತ್ರ ಪ್ರಜಾಪ್ರಭುತ್ವವನ್ನು ಬಲಪಡಿಸಲು ಸಾಧ್ಯ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಸ್ವಜನಪಕ್ಷಪಾತದಲ್ಲಿ ಸಿಲುಕಿರುವ ಪಕ್ಷಗಳು ಅದರಿಂದ ಹೊರಬರಬೇಕು. ಆಗ ಮಾತ್ರ ದೇಶದ ಪ್ರಜಾಪ್ರಭುತ್ವವು ಬಲಗೊಳ್ಳುತ್ತದೆ. ಆಗ ಮಾತ್ರ ದೇಶದ ಯುವಕರು ರಾಜಕೀಯಕ್ಕೆ ಬರಲು ಹೆಚ್ಚು ಹೆಚ್ಚು ಅವಕಾಶಗಳನ್ನು ಪಡೆಯುತ್ತಾರೆ ಎಂದ ಅವರು, ಸ್ವಜನಪಕ್ಷಪಾತ ರಾಜಕೀಯದಲ್ಲಿ ಮಾತ್ರವಲ್ಲದೆ ಪ್ರತಿಯೊಂದು ಕ್ಷೇತ್ರದಲ್ಲೂ ಬೇರೂರಿದೆ. ಇದು ಜನರ ಪ್ರಗತಿಯನ್ನು ತಡೆಯುತ್ತದೆ ಎಂದು ಪ್ರತಿಪಾದಿಸಿದರು.

ಪ್ರಮುಖ ಸುದ್ದಿ :-   ವೀಡಿಯೊ..| ಅಯೋಧ್ಯೆಯಲ್ಲಿ ರಾಮನವಮಿ ದಿನ ಬಾಲರಾಮನ ಹಣೆಗೆ ʼಸೂರ್ಯ ರಶ್ಮಿಯ ತಿಲಕ ʼ ; ಅದ್ಭುತ ದೃಶ್ಯ ಕಣ್ತುಂಬಿಕೊಂಡ ಭಕ್ತ ಸಾಗರ

ದೇಶದ ಮೂಲೆ ಮೂಲೆಗಳಲ್ಲಿ, ಈ ಕುಟುಂಬ ರಾಜಕಾರಣ ಮಾಡುವವರು ನನ್ನ ವಿರುದ್ಧ ಒಂದಾಗುತ್ತಿದ್ದಾರೆ. ಸ್ವಜನಪಕ್ಷಪಾತದಂತಹ ಕೆಟ್ಟ ಅಭ್ಯಾಸ ದೇಶದಲ್ಲಿ ಬೆಳೆಯದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಮೋದಿ ಮಾರ್ಮಿಕವಾಗಿ ಹೇಳಿದರು.
ಹಳ್ಳಿಗಳಲ್ಲಿ ವಾಸಿಸುವ ಬಡವರ ಮಕ್ಕಳು ಮತ್ತು ಹೆಣ್ಣುಮಕ್ಕಳು ಪ್ರಧಾನಿ ಮತ್ತು ರಾಷ್ಟ್ರಪತಿ ಸ್ಥಾನಕ್ಕೆ ಏರುವ ಅವಕಾಶವನ್ನು ಪಡೆಯಬೇಕು. ಆದ್ದರಿಂದ ಪಕ್ಷಗಳು ಸ್ವಜನಪಕ್ಷಪಾತ ಮಾಡುವುದನ್ನು ತಡೆಯುವುದು ಬಹಳ ಮುಖ್ಯ ಎಂದು ಪ್ರಧಾನಿ ಹೇಳಿದರು.
ಭಾರತದ ಹಳ್ಳಿಗಳು ಹೆಚ್ಚು ಸಾಮರ್ಥ್ಯ ಮತ್ತು ಕಾರ್ಮಿಕ ಶಕ್ತಿಯನ್ನು ಹೊಂದಿದೆ. ಇಂದು ನಮ್ಮ ದೇಶವು ಹಳ್ಳಿಗಳು, ಬಡವರು, ರೈತರು ಮತ್ತು ಕಾರ್ಮಿಕರ ಸುಧಾರಣೆಗಾಗಿ ಶ್ರಮಿಸುತ್ತಿದೆ. ಇಂದು ಹಳ್ಳಿ ಹಳ್ಳಿಗಳಲ್ಲೂ ಆಪ್ಟಿಕಲ್ ಫೈಬರ್ ಅಳವಡಿಕೆ, ರಸ್ತೆ ನಿರ್ಮಾಣ, ಮನೆಗಳ ನಿರ್ಮಾಣ ಕ್ಷಿಪ್ರಗತಿಯಲ್ಲಿ ನಡೆಯುತ್ತಿದೆ. ನಗರಗಳಂತೆ ದೇಶದ ಹಳ್ಳಿಗಳೂ ಕೂಡ ಅದೇ ವೇಗದಲ್ಲಿ ಅಭಿವೃದ್ಧಿ ಹೊಂದಬೇಕು ಎಂಬುದು ನಮ್ಮ ಭಾರತದ ಪರಿಕಲ್ಪನೆಯಾಗಿದೆ ಎಂದರು.

 

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ : ಬಿಜೆಪಿ ಮೈತ್ರಿಕೂಟ Vs ಕಾಂಗ್ರೆಸ್‌ ಮೈತ್ರಿಕೂಟದ ಜಿದ್ದಾಜಿದ್ದಿ ಸ್ಪರ್ಧೆಯಲ್ಲಿ ಯಾರಿಗೆ ಎಷ್ಟು ಸ್ಥಾನಗಳು..? ಎಬಿಪಿ-ಸಿವೋಟರ್ ಸಮೀಕ್ಷೆ ಏನು ಹೇಳುತ್ತದೆ..?

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement