ವೀಸಾ ಹಗರಣದಲ್ಲಿ ಕಾಂಗ್ರೆಸ್‌ ಸಂಸದ ಕಾರ್ತಿ ಚಿದಂಬರಂಗೆ ಬಂಧನ ಪೂರ್ವ ಜಾಮೀನು ನಿರಾಕರಿಸಿದ ಕೋರ್ಟ್‌

ನವದೆಹಲಿ: ವೀಸಾ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಅವರು ನಿರೀಕ್ಷಣಾ ಜಾಮೀನು ಕೋರಿಕೆಯನ್ನು ಸಿಬಿಐ ನ್ಯಾಯಾಲಯ ಶುಕ್ರವಾರ ತಿರಸ್ಕರಿಸಿದೆ.
ಕಳೆದ ವಾರ ವಾದ ಆಲಿಸಿದ ನ್ಯಾಯಾಲಯ ತನ್ನ ಆದೇಶವನ್ನು ಕಾಯ್ದಿರಿಸಿತ್ತು. ಕಾರ್ತಿ ಚಿದಂಬರಂ ಅವರ ತಂದೆ ಪಿ ಚಿದಂಬರಂ ಅವರು ಕೇಂದ್ರ ಗೃಹ ಸಚಿವರಾಗಿದ್ದಾಗ 2011ರಲ್ಲಿ 263 ಚೀನಾ ಪ್ರಜೆಗಳಿಗೆ ವೀಸಾ ನೀಡಿದ್ದ ಆರೋಪದ ಹಗರಣದಲ್ಲಿ ಕಾರ್ತಿ ಚಿದಂಬರಂ ಮತ್ತು ಇತರರ ವಿರುದ್ಧ ಜಾರಿ ನಿರ್ದೇಶನಾಲಯ (ED) ಇತ್ತೀಚೆಗೆ ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ದಾಖಲಿಸಿತ್ತು.
ಇದೇ ಪ್ರಕರಣದಲ್ಲಿ ಸಿಬಿಐನ ಇತ್ತೀಚಿನ ಪ್ರಥಮ ಮಾಹಿತಿ ವರದಿಯ ಆಧಾರದ ಮೇಲೆ ಕೇಂದ್ರ ಸಂಸ್ಥೆಯು ಅಕ್ರಮ ಹಣ ವರ್ಗಾವಣೆ-ವಿರೋಧಿ ಕಾನೂನಿನ ಅಡಿಯಲ್ಲಿ ತನ್ನ ಪ್ರಕರಣವನ್ನು ದಾಖಲಿಸಿದೆ. ಕಾರ್ತಿ ಚಿದಂಬರಂ ವಿರುದ್ಧ ಯಾವುದೇ ವಿಷಯ ಇಲ್ಲ ಎಂದು ಅವರ ಪರ ವಕೀಲರು ವಾದ ಮಂಡಿಸಿದ್ದರು.

ಹಿರಿಯ ವಕೀಲ ಕಪಿಲ್ ಸಿಬಲ್ ವಾದಿಸಿ, ಆಪಾದಿತ ವಹಿವಾಟು 2011 ರದ್ದಾಗಿದೆ ಮತ್ತು ಅವರು ಬಹಳ ವರ್ಷಗಳ ನಂತರ ಪ್ರಕರಣವನ್ನು ದಾಖಲಿಸಿದ್ದಾರೆ. ಈ ಪ್ರಕರಣದ ಬಗ್ಗೆ ಏಜೆನ್ಸಿಗಳ ಬಳಿ ಇ ಮೇಲ್‌ಗಳಿವೆ ಆದರೆ ವರ್ಷಗಳವರೆಗೆ ತನಿಖೆ ನಡೆಸಲಿಲ್ಲ ಎಂದು ಅವರು ಹೇಳಿದರು. ಆಪಾದಿತ ವಹಿವಾಟಿನ ಮೌಲ್ಯ ₹ 50 ಲಕ್ಷ ಆಗಿರುವುದರಿಂದ ಚಿದಂಬರಂ ಅವರಿಗೆ ಜಾಮೀನು ನೀಡಬೇಕು.
ಇಡಿ ಪರ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್‌ವಿ ರಾಜು,
“ಅವರು ಯಾಕೆ ಹಾಗೆ ಮಾಡಿದ್ದಾರೆ ಎಂದು ನಾವು ಪ್ರಕರಣವನ್ನು ತನಿಖೆ ಮಾಡುತ್ತೇವೆ. ಇನ್ನೂ, ಅವರಿಗೆ ಬಂಧನದ ಆತಂಕವಿದೆ ಎಂದು ಅವರು ಹೇಳಿದರು.

ಪ್ರಮುಖ ಸುದ್ದಿ :-   ಪಾಟ್ನಾ ರೈಲ್ವೆ ನಿಲ್ದಾಣದ ಸಮೀಪದ ಹೊಟೇಲ್‌ ನಲ್ಲಿ ಬೆಂಕಿ ಅವಘಡ : 6 ಮಂದಿ ಸಾವು

ಪಂಜಾಬ್‌ನಲ್ಲಿ ಪವರ್ ಪ್ರಾಜೆಕ್ಟ್ ಪೂರ್ಣಗೊಳಿಸಲು ಚೀನೀ ಪ್ರಜೆಗಳಿಗೆ ಅಕ್ರಮವಾಗಿ ವೀಸಾವನ್ನು ಕಲ್ಪಿಸಲು ಕಾರ್ತಿ ಚಿದಂಬರಂ ₹ 50 ಲಕ್ಷ ಮೌಲ್ಯದ ಕಿಕ್‌ಬ್ಯಾಕ್ ಪಡೆದಿದ್ದಾರೆ ಎಂದು ಸಿಬಿಐ ಆರೋಪಿಸಿದೆ.
ಅವರು 2011 ರಲ್ಲಿ ಗೃಹ ಸಚಿವಾಲಯದಲ್ಲಿ “ತಮ್ಮ ಪ್ರಭಾವವನ್ನು ದುರುಪಯೋಗಪಡಿಸಿಕೊಂಡರು” ಮತ್ತು ಸಚಿವಾಲಯವು ವಿಧಿಸಿದ ಕೆಲಸದ ಪರವಾನಗಿಗಳ ಮೇಲೆ “ಸೀಲಿಂಗ್‌ನ ಉದ್ದೇಶ ಬಿಟ್ಟು ಹಿಂಬಾಗಿಲ ಮಾರ್ಗ ಕಂಡುಕೊಳ್ಳಲು “ಸಂಚು” ಮಾಡಿದ್ದಾರೆ ಎಂದು ಸಿಬಿಐ ಆರೋಪಿಸಿದೆ.
ಚಿದಂಬರ ಅವರ ತಂದೆ, ಹಿರಿಯ ಕಾಂಗ್ರೆಸ್ ನಾಯಕ ಪಿ ಚಿದಂಬರಂ ಅವರು 2011 ರಲ್ಲಿ ಗೃಹ ಸಚಿವರಾಗಿದ್ದರು, ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದಾರೆ ಮತ್ತು ಇದು ರಾಜಕೀಯ ಸೇಡಿನ ಆರೋಪ ಎಂದು ಹೇಳಿದ್ದಾರೆ. ಕಾರ್ತಿ ಚಿದಂಬರಂ ಅಲ್ಲದೆ, ಸಿಬಿಐನಿಂದ ಮೇ 17 ರಂದು ಬಂಧಿಸಲ್ಪಟ್ಟಿದ್ದ ಅವರ ಅಕೌಂಟೆಂಟ್ ಎಸ್ ಭಾಸ್ಕರರಾಮನ್ ಸೇರಿದಂತೆ ಇತರ ನಾಲ್ವರನ್ನು ಸಿಬಿಐ ಹೆಸರಿಸಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement