ವಾರಾಂತ್ಯದಲ್ಲಿ ವೈರಲ್ ಆದ ವೀಡಿಯೊದಲ್ಲಿ ಇದು ಕರಡಿ ಮರಿ ಹುಚ್ಚನಂತೆ ನೃತ್ಯ ಮಾಡುವುದನ್ನು ನೋಡಬಹುದು.
ರೋಮಾಂಚನಗೊಂಡ ಕರಡಿ ಮರಿಯೊಂದು ತನ್ನ ಹಿಂಗಾಲುಗಳ ಮೇಲೆ ನಿಂತು ಮನುಷ್ಯರಂತೆ ಕುಣಿಯುವುದನ್ನು ವೀಡಿಯೊದಲ್ಲಿ ನೋಡಬಹುದು.
ನಂತರ ಸುತ್ತಲೂ ಹಾರುತ್ತದೆ. 13 ಸೆಕೆಂಡ್ಗಳ ಕ್ಲಿಪ್ನಲ್ಲಿ ಅವರು ಯಾರೂ ನೋಡದ ಹಾಗೆ ಕರಡಿ ಮರಿ ಡ್ಯಾನ್ಸ್ ಮಾಡುತ್ತದೆ. ತನ್ನ ಎರಡು ಕಾಲುಗಳಿಂದ ಮೇಲಿನಿಂದ ಕೆಳಗೆ ಜಿಗಿದು, ಕುಣಿದಿರುವ ಈ ಪುಟ್ಟ ಮರಿಯ ಡ್ಯಾನ್ಸ್ ನಿಜಕ್ಕೂ ಅಚ್ಚರಿಯಾಗುತ್ತದೆ.
ಕೆನಡಾದ ವ್ಯಕ್ತಿಯೊಬ್ಬರು ಕರಡಿ ಮರಿ ಕುಣಿಯುತ್ತಿರುವ ಈ ವಿಡಿಯೋವನ್ನು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದು, ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿಕೊಂಡಿದ್ದರು.
ಕೆಲವೇ ಕ್ಷಣಗಳಲ್ಲಿ ಭಾರೀ ಮೆಚ್ಚುಗೆ ಪಡೆದಿರುವ ಈ ವಿಡಿಯೋವನ್ನು ಈವರೆಗೆ 2.5 ಮಿಲಿಯನ್ ಜನರು ವೀಕ್ಷಿಸಿದ್ದಾರೆ. ಕರಡಿ ಮರಿಯ ಈ ಡ್ಯಾನ್ಸ್ ಬಹುಶಃ ಹಿಂದೆಂದೂ ನೋಡಿರಲೂ ಸಾಧ್ಯವಿಲ್ಲ ಎಂದು ಟ್ವಿಟಿಗರು ಹಾಡಿಹೊಗಳಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ