ಕೊಚ್ಚಿ: ಇಬ್ಬರು ಮಕ್ಕಳನ್ನು ನದಿಗೆ ಎಸೆದು ಸಾಯಿಸಿ ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡ ತಂದೆ

ಕೊಚ್ಚಿ: ತಂದೆಯೊಬ್ಬರು ಶನಿವಾರ ಸಂಜೆ ತನ್ನ ಇಬ್ಬರು ಮಕ್ಕಳನ್ನು ಪೆರಿಯಾರ್ ನದಿಗೆ ಎಸೆದು ಕೊಂದು ಅದೇ ನದಿಗೆ ತಾನೂ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ಸಂಜೆ ವರದಿಯಾಗಿದೆ.
ಶನಿವಾರ ಸಂಜೆ 4:30 ರ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ತಂದೆ ಮೊದಲು ತನ್ನ ಮಗನನ್ನು ಹಾಗೂ ನಂತರ ಮಗಳನ್ನು ನದಿಗೆ ಎಸೆದಿದ್ದಾನೆ.
ಘಟನೆಯನ್ನು ನೋಡಿದ ಕೆಲವು ವೀಕ್ಷಕರು ರಕ್ಷಣಾ ಕಾರ್ಯಾಚರಣೆ ನಡೆಸಿ ಇಬ್ಬರು ಮಕ್ಕಳನ್ನು ಮೊದಲು ನದಿಯಿಂದ ಹೊರಕ್ಕೆ ತಂದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಇವರಿಬ್ಬರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರೂ ಅವರನ್ನು ಮೃತರೆಂದು ಘೋಷಿಸಲಾಯಿತು. ನಂತರ ಅಗ್ನಿಶಾಮಕ ಮತ್ತು ರಕ್ಷಣಾ ತಂಡ ಸ್ಥಳೀಯರ ನೆರವಿನೊಂದಿಗೆ ತಂದೆಯ ಶವವನ್ನು ಪತ್ತೆ ಮಾಡಿದೆ. ತಂದೆಯನ್ನು ಪಲರಿವಟ್ಟಂನ ಉಲ್ಲಾಸ್ ಹರಿಹರನ್ ಎಂದು ಗುರುತಿಸಲಾಗಿದೆ.

ಏಕನಾಥ ಎಂದು ಗುರುತಿಸಲಾದ ಹುಡುಗನಿಗೆ ಸುಮಾರು 13 ವರ್ಷ ಎಂದು ಪೊಲೀಸರು ತಿಳಿಸಿದ್ದಾರೆ ಮತ್ತು ಕೃಷ್ಣಪ್ರಿಯಾ ಎಂಬ ಹುಡುಗಿಗೆ ಸುಮಾರು 17 ವರ್ಷ ಎಂದು ಹೇಳಲಾಗಿದೆ. ಅವರ ಬಗ್ಗೆ ಹೆಚ್ಚಿನ ವಿವರಗಳನ್ನು ಸಂಗ್ರಹಿಸಲು ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ತಂದೆ ಇಂತಹ ಕೃತ್ಯ ಎಸಗಲು ಕಾರಣವೇನೆಂದು ಪೊಲೀಸರು ಇನ್ನೂ ಪತ್ತೆ ಹಚ್ಚಿಲ್ಲ.

ಪ್ರಮುಖ ಸುದ್ದಿ :-   ವೀಡಿಯೊಗಳು...| ಪಾಕಿಸ್ತಾನದ 4 ವಾಯುನೆಲೆಗಳ ಭಾರತದ ದಾಳಿ, ಡ್ರೋನ್ ಉಡಾವಣಾ ಪ್ಯಾಡ್‌ ನಾಶ, ಪಾಕ್‌ 2 ಫೈಟರ್ ಜೆಟ್ ಹೊಡೆದುರುಳಿಸಿದ ಸೇನೆ

ನಾವು ಹೆಚ್ಚಿನ ವಿವರಗಳನ್ನು ಸಂಗ್ರಹಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಏತನ್ಮಧ್ಯೆ, ಕೆಲವು ಸ್ಥಳೀಯ ನಿವಾಸಿಗಳು ವ್ಯಕ್ತಿ ಮದ್ಯವ್ಯಸನಿಯಾಗಿದ್ದು, ಕುಟುಂಬದಲ್ಲಿ ಈ ಕಾರಣದಿಂದ ಸಮಸ್ಯೆಗಳಿದ್ದವು ಎಂದು ಹೇಳಿದ್ದಾರೆ.
ತಂದೆ ಮತ್ತು ಇಬ್ಬರು ಮಕ್ಕಳು ಸೇತುವೆಯ ಮೇಲೆ ಸ್ವಲ್ಪ ಸಮಯ ಅಡ್ಡಾಡುತ್ತಿರುವುದನ್ನು ಆ ಪ್ರದೇಶದ ಕೆಲವರು ಗಮನಿಸಿದ್ದರು, ಆದರೆ ಆತ ಅಂತಹ ಕೃತ್ಯ ಎಸಗುತ್ತಾನೆಂದು ಯಾರೂ ನಿರೀಕ್ಷಿಸಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement