ಗೋ ಶಾಲೆಯಲ್ಲಿ ಒಂದು ತಿಂಗಳ ಕಾಲ ಸೇವೆ ಮಾಡಬೇಕು, 1 ಲಕ್ಷ ರೂ. ಗೋ ಶಾಗೆ ಠೇವಣಿ ಮಾಡಬೇಕು”: ಗೋಹತ್ಯೆ ಆರೋಪಿಗೆ ಷರತ್ತು ವಿಧಿಸಿ ಜಾಮೀನು ನೀಡಿದ ಅಲಹಾಬಾದ್ ಹೈಕೋರ್ಟ್

ಲಕ್ನೋ: ಉತ್ತರ ಪ್ರದೇಶ ಗೋಹತ್ಯೆ ತಡೆ ಕಾಯಿದೆ, 1955 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ವ್ಯಕ್ತಿಯೊಬ್ಬನಿಗೆ ಅಲಹಾಬಾದ್ ಹೈಕೋರ್ಟ್ ಜಾಮೀನು ಮಂಜೂರು ಮಾಡಿದ್ದು, ಜೈಲಿನಿಂದ ಬಿಡುಗಡೆಯಾದ ನಂತರ ಗೋಶಾಲೆಯಲ್ಲಿ ಒಂದು ತಿಂಗಳ ಕಾಲ ಗೋವುಗಳಿಗೆ ಸೇವೆ ಮಾಡಬೇಕು ಎಂದು ಸೂಚಿಸಿದೆ.
ನ್ಯಾಯಮೂರ್ತಿ ಶೇಖರಕುಮಾರ ಯಾದವ್ ಅವರ ಪೀಠವು ಗೋಹತ್ಯೆ ಸೆಕ್ಷನ್ 3/8 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾದ ಸಲೀಂ ಅಲಿಯಾಸ್ ಕಾಲಿಯಾ ಎಂಬಾತನಿಗೆ ಜಾಮೀನು ನೀಡುವಾಗ ಈ ಆದೇಶವನ್ನು ಹೊರಡಿಸಿತು ಎಂದು ಲೈವ್‌ ಲಾ ವರದಿ ಮಾಡಿದೆ.
ಗೋ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿದ್ದ ಆರೋಪಿಗೆ ಜಾಮೀನು ನೀಡುವಾಗ ಗೋ ಶಾಲೆಯಲ್ಲಿ ಒಂದು ತಿಂಗಳು ಗೋವುಗಳ ಸೇವೆ ಮಾಡುವಂತೆ ಷರತ್ತು ವಿಧಿಸಿದೆ.

ಸಲೀಂ ಗೋ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿದ್ದ. ಆ ಬಳಿಕ ಜಾಮೀನು ಕೋರಿ ಅಲಹಾಬಾದ್ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದ. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶೇಖರಕುಮಾರ್ ಯಾದವ್, ಆರೋಪಿ ಒಂದು ತಿಂಗಳ ಕಾಲ ಗೋವುಗಳ ಸೇವೆ ಮಾಡಬೇಕು ಮತ್ತು ನೋಂದಾಯಿತ ಗೋಶಾಲೆಗೆ 1 ಲಕ್ಷ ರೂ. ದಂಡ ಕಟ್ಟಬೇಕು ಎಂದು ಷರತ್ತು ವಿಧಿಸಿ ಜಾಮೀನು ಮಂಜೂರು ಮಾಡಿದ್ದಾರೆ.
ಗಮನಾರ್ಹವಾಗಿ, ನ್ಯಾಯಮೂರ್ತಿ ಶೇಖರಕುಮಾರ ಯಾದವ್ ಅವರ ಪೀಠವು ಹಿಂದಿಯಲ್ಲಿ ಬರೆದ ಜಾಮೀನು ಆದೇಶದಲ್ಲಿ ಆದೇಶದಲ್ಲಿ, ಮೂಲಭೂತ ಹಕ್ಕುಗಳು ಕೇವಲ ಗೋಮಾಂಸ ತಿನ್ನುವವರಿಗೆ ಮಾತ್ರ ವಿಶೇಷವಲ್ಲ, ಬದಲಿಗೆ, ಗೋವನ್ನು ಪೂಜಿಸುವ ಮತ್ತು ಗೋವಿನ ಮೇಲೆ ಆರ್ಥಿಕವಾಗಿ ಅವಲಂಬಿತರಾದವರಿಗೂ ಅರ್ಥಪೂರ್ಣ ಜೀವನ ನಡೆಸಲು ಮೂಲಭೂತ ಹಕ್ಕುಗಳಿವೆ ಎಂದು ಗಮನಿಸಿದೆ.

ಪ್ರಮುಖ ಸುದ್ದಿ :-   ಸರಿಯಾಗಿ ಅಡುಗೆ ಮಾಡಲಿಲ್ಲ ಎಂಬ ಕಾರಣಕ್ಕೆ ಅಜ್ಜಿಗೆ ಬರ್ಬರವಾಗಿ ಥಳಿಸಿದ ಮೊಮ್ಮಗ-ಆತನ ಪತ್ನಿ : ವೀಡಿಯೊ ವೈರಲ್‌, ಇಬ್ಬರ ಬಂಧನ

ಆ ಬಳಿಕ ಕೋರ್ಟ್ ಈ ಬಗ್ಗೆ ಅರ್ಜಿದಾರನಿಂದ ವೈಯಕ್ತಿಕ ಬಾಂಡ್ ಹಾಗೂ ಎರಡು ಶ್ಯೂರಿಟಿ ಪಡೆದುಕೊಂಡು ಜಾಮೀನು ಮಂಜೂರು ಮಾಡಿದೆ. ಗೋ ಶಾಲೆಯಲ್ಲಿ ಕೆಲಸ ಮಾಡಿದ ಮತ್ತು ಕಟ್ಟಿರುವ ಹಣದ ಬಗ್ಗೆ ದಾಖಲೆ ಕೋರ್ಟ್‍ಗೆ ಸಲ್ಲಿಸುವಂತೆ ಆದೇಶಿಸಿದೆ.
ಸಲೀಂ ವಿರುದ್ಧ ಐಪಿಸಿ ಸೆಕ್ಷನ್ 379 ಕಳ್ಳತನ ಮತ್ತು ಉತ್ತರ ಪ್ರದೇಶ ಗೋ ಹತ್ಯೆ ತಡೆ ಕಾಯ್ದೆಯಡಿ ಬರೈಲಿ ಜಿಲ್ಲೆಯ ಬೊಜಿಪುರ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಲಾಗಿತ್ತು.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement