ಅಭಿಮಾನಿಗಳ ಹರ್ಷೋದ್ಘಾರದ ನಡುವೆ ಪುನೀತ ರಾಜಕುಮಾರ ಕಂಚಿನ ಪ್ರತಿಮೆ ಅನಾವರಣ

ಹೊಸಪೇಟೆ : ಹೊಸಪೇಟೆ ನಗರದಲ್ಲಿ ಭಾನುವಾರ ಸಂಜೆ ಅಭಿಮಾನಿಗಳ ಹರ್ಷೋದ್ಘಾರದ ಮಧ್ಯೆ ಹೊಸಪೇಟೆಯ ಹೃದಯ ಭಾಗದಲ್ಲಿರುವ ಪುನೀತ್ ವೃತ್ತದಲ್ಲಿ ಏಳೂವರೆ ಅಡಿ ಎತ್ತರದ ನಟ ಪುನೀತ್ ರಾಜಕುಮಾರ ಅವರ ಪುತ್ಥಳಿಯನ್ನು ನಟ ರಾಘವೇಂದ್ರ ರಾಜಕುಮಾ ಅನಾವರಣ ಮಾಡಿದರು.
ನಂತರ ಮಾತನಾಡಿದ ಅವರು, ಅಪ್ಪು ಅಭಿಮಾನಿಗಳ ಸಂಭ್ರಮ ಎಷ್ಟ ಎಂಬುವುದನ್ನು ಅಪ್ಪು ಬಾಯಿಂದ ಅನೇಕ ಬಾರಿ ಕೇಳಿದ್ದೆ. ಇಂದು ಕಣ್ಣಾರೆ ಕಂಡೆ ಎಂದು ಹೇಳುತ್ತ ಭಾವುಕರಾದರು. ಅಪ್ಪು ಏನು ಮಾಡಬೇಕು ಅದನ್ನೆಲ್ಲ ಮಾಡಿದ್ದಾನೆ.‌ ಮುಂದೆ ನಾವೇನು ಮಾಡಬೇಖು ಎಂಬುದನ್ನು ಅಭಿಮಾನಿಗಳಾದ ನೀವು ಹೇಳಬೇಕು ಎಂದರು.

ಸಾವಿರಾರು ಅಭಿಮಾನಿಗಳ ಮಧ್ಯೆ ರಾಜಕುಮಾರ ಚಿತ್ರದ ಹಾಡಿನೊಂದಿಗೆ, ಪಟಾಕಿ, ಹೂವಿನ ಮಳೆಯ ನಡುವೆ ಪುತ್ಥಳಿ ಅನಾವರಣಗೊಂಡಿತು.
ಅನಾವರಣ ವೇಳೆ ಪುಟ್ಟ ಪುಟ್ಟ ಮಕ್ಕಳಿಂದ ಬೊಂಬೆ ಹೇಳುತೈತೆ ಎಂಬ ಹಾಡಿನ ನಮನ ಸಲ್ಲಿಸಲಾಯಿತು.
ಸಚಿನ ಆನಂದಸಿಂಗ್, ನಟ ಅಜಯ ರಾವ್, ನಿರ್ದೇಶಕ ಸಂತೋಷ ಆನಂದರಾಮ್, ನಗರಸಭೆಯ ಅಧ್ಯಕ್ಷೆ ಸುಂಕಮ್ಮ ಮೊದಲಾದವರು ಇದ್ದರು.
ಅಭಿಮಾನಿಗಳ ಮಹಾಪೂರವೇ ಹರಿದ ಬಂದ ಹಿನ್ನೆಲೆಯಲ್ಲಿ ಪಟ್ಟ ವೃತ್ತದಲ್ಲಿ ಆಯೋಜಕರ ಎಲ್ಲಾ ಅಡೆ ತಡೆಗಳನ್ನು ಭೇದಿಸಿ ಮುಂದೆಬರಲು ಪ್ರಯತ್ನಿಸಿದರು ಈ ಹಂತದಲ್ಲಿ ನುಕೂನುಗ್ಗಲು ಆರಂಭವಾಯಿತು. ಬ್ಯಾರಿಕೇಡ್ ಭೇದಿಸಿ ಒಳನುಗ್ಗಿದಾಗ ಕುಳಿತವರ ಮೇಲೆ ಬಿದ್ದು ಕ್ಷಣಕಾಲ ಆತಂಕಕ್ಕೆ ಕಾರಣವಾಯಿತು.
,

ಪ್ರಮುಖ ಸುದ್ದಿ :-   ಎಐಸಿಸಿ ಒಬಿಸಿ ಸಲಹಾ ಮಂಡಳಿಯ ಅಧ್ಯಕ್ಷರಾಗಿ ಸಿದ್ದರಾಮಯ್ಯ ನೇಮಕವಾಗಿಲ್ಲ : ಸಿಎಂ ಕಚೇರಿ ಸ್ಪಷ್ಟನೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement