ಉದ್ದೇಶಪೂರ್ವಕವಾಗಿ ಕಾರಿನಿಂದ ಬೈಕ್‌ಗೆ ಡಿಕ್ಕಿ ಹೊಡೆಸಿದ ಚಾಲಕ; ಕೊಲೆ ಯತ್ನ ಕೇಸ್‌ ದಾಖಲು-ದೃಶ್ಯ ಮೊಬೈಲ್‌ನಲ್ಲಿ ಸೆರೆ

ನವದೆಹಲಿ: ಬೈಕ್‌ಗೆ ಮಹೀಂದ್ರಾ ಸ್ಕಾರ್ಪಿಯೊ ಕಾರು ಡಿಕ್ಕಿ ಹೊಡೆದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಈ ಘಟನೆ ನಿನ್ನೆ ನಡೆದಿದ್ದು, ಬೈಕ್‌ ಸವಾರ ಕೆಳಗೆ ಬಿದ್ದು ಗಾಯಗೊಂಡಿದ್ದಾನೆ. ಇದೇಘಟನೆ ಸಂಬಂಧ ಇಂದು. ಸೋಮವಾರ ಪ್ರಕರಣ ದಾಖಲಾಗಿದೆ.
ರಾಷ್ಟ್ರ ರಾಜಧಾನಿಯ ಅರ್ಜನ್ ಗಢ್ ಮೆಟ್ರೋ ನಿಲ್ದಾಣದಲ್ಲಿ ಬಳಿ, ಭಾನುವಾರ ನಡೆದ ಘಟನೆಯ ಈ ವಿಡಿಯೋವನ್ನು, ಗಾಯಗೊಂಡ ಬೈಕ್‌ ಸವಾರನ ಸ್ನೇಹಿತ ಚಿತ್ರೀಕರಣ ಮಾಡಿದ್ದಾನೆ. ವೀಡಿಯೊ ವೈರಲ್ ಆದ ಬಳಿಕ ದೆಹಲಿ ಪೊಲೀಸರು, ಲಿಖಿತ ದೂರು ದಾಖಲಿಸುವಂತೆ ಗಾಯಗೊಂಡ ಬೈಕ್‌ ಸವಾರನ ಬಳಿ ಕೇಳಿಕೊಂಡಿದ್ದರು. ಇಂದು ಆರೋಪಿ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಾಗಿದೆ.

advertisement
ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
ಅಡ್ಮಿಶನ್ ಗಾಗಿ ಇಂದೇ ಕರೆ ಮಾಡಿ
9535127775 / 9901837775 / 6364528715 / 08362775155 / https://icsmpucollege.com/

ನಿನ್ನೆ ಕೆಲ ಯುವಕರು ಬೈಕ್‌ಗಳ ಮೂಲಕ ದೆಹಲಿಗೆ ಬರುತ್ತಿದ್ದರು. ಗಾಯಗೊಂಡ ಬೈಕ್‌ ಸವಾರನ ಸ್ನೇಹಿತ ಮತ್ತೊಂದು ಬೈಕ್‌ನಲ್ಲಿದ್ದುಕೊಂಡು ಮಾಡಿರುವ ವೀಡಿಯೊ ಪ್ರಕಾರ, ಬೈಕ್ ಸವಾರರು ಮಹೀಂದ್ರಾ ಸ್ಕಾರ್ಪಿಯೋ ಚಾಲಕನೊಂದಿಗೆ ವಾಗ್ವಾದ ನಡೆಸುತ್ತಿರುವುದನ್ನು ಕಾಣಬಹುದು. ಇದಾದ ನಂತರ ಕಾರು ಮತ್ತು ಬೈಕ್‌ ಸವಾರರು ವೇಗವಾಗಿ ಹೋಗುವ ವೇಳೆ ಕಾರು ಚಾಲಕ ವೇಗವಾಗಿ ಬಂದು ಬೈಕ್‌ಗೆ ಡಿಕ್ಕಿ ಹೊಡೆದು ಮತ್ತಷ್ಟು ವೇಗವಾಗಿ ಹೋಗಿದ್ದಾನೆ. ಡಿಕ್ಕಿ ರಭಸಕ್ಕೆ ಬೈಕ್‌ ಸವಾರ ಬೈಕ್‌ನಿಂದ ಎಸೆಯಲ್ಪಟ್ಟು ಕೆಳಗೆ ಬಿದ್ದಿದ್ದು, ಸಣ್ಣ ಪುಟ್ಟ ಗಾಯಗಳಾಗಿವೆ.

ಓದಿರಿ :-   ರಿಲಯನ್ಸ್ ಜಿಯೋ ನಿರ್ದೇಶಕ ಸ್ಥಾನಕ್ಕೆ ಮುಖೇಶ್ ಅಂಬಾನಿ ರಾಜೀನಾಮೆ, ಅಧ್ಯಕ್ಷರಾಗಿ ಮಗ ಆಕಾಶ್ ನೇಮಕ

ಈ ಬಗ್ಗೆ ಗಾಯಗೊಂಡ ಬೈಕ್‌ ಸವಾರ ಶ್ರೆಯಾಂಶ್‌ ಎಂಬವರು ಮಾತನಾಡಿ, ನಾನು ಮತ್ತು ನನ್ನ ಕೆಲ ಸ್ನೇಹಿತರು ಗುರುಗ್ರಾಮ್‌ನಿಂದ ದೆಹಲಿಗೆ ಹಿಂತಿರುಗುತ್ತಿದ್ದೆವು. ಈ ವೇಳೆ ಕಾರು ಚಾಲಕ ನಮ್ಮೊಂದಿಗೆ ರಾಶ್ ಡ್ರೈವಿಂಗ್ ಪ್ರಾರಂಭಿಸಿದ್ದಾನೆ. ಆತ ನನ್ನ ಸ್ನೇಹಿತನಿಗೆ ಬೆದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ನನ್ನ ಸ್ನೇಹಿತರು ಅವರ ಬೈಕ್‌ ಸ್ವಲ್ಪ ನಿಧಾನಗೊಳಿಸಿದ್ದಾರೆ. ಆದರೆ ನಾನು ಮುಂದೆ ವೇಗವಾಗಿ ರೈಡ್‌ ಮಾಡಿದೆ. ಈ ವೇಳೆ ಆ ವ್ಯಕ್ತಿ ವೇಗವಾಗಿ ಬಂದು ನನ್ನ ಬೈಕ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದಾನೆ ತಿಳಿಸಿದ್ದಾರೆ. ದೆಹಲಿ ಪೊಲೀಸರು ಆತನಿಗೆ ಶೋಧ ನಡೆಸಿದ್ದಾರೆ.

advertisement

ಕ್ಷಣ ಕ್ಷಣದ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
ಓದಿರಿ :-   ಸಂಜಯ್ ರಾವತ್‌ಗೆ ಹಾಜರಾಗಲು ಜುಲೈ 1ಕ್ಕೆ ಹೊಸ ಸಮನ್ಸ್ ನೀಡಿದ ಇಡಿ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

advertisement

ನಿಮ್ಮ ಕಾಮೆಂಟ್ ಬರೆಯಿರಿ