ಗಂಡ-ಹೆಂಡತಿಯನ್ನು ಕೊಂದು ದೇಹವನ್ನು ತುಂಡು-ತುಂಡು ಮಾಡಿ ಐದು ತಾಸು ತಿಂದ ಕರಡಿ..!

ಪನ್ನಾ: ಆಘಾತಕರ ಘಟನೆಯೊಂದರಲ್ಲಿ ಮಧ್ಯಪ್ರದೇಶದ ಪನ್ನಾ ಜಿಲ್ಲೆಯಲ್ಲಿ ಭಾನುವಾರ ಬೆಳಿಗ್ಗೆ ಕರಡಿಯೊಂದು ದಾಳಿ ನಡೆಸಿ ದಂಪತಿಯನ್ನು ಕೊಂದು ಹಾಕಿದ್ದಲ್ಲದೆ ಐದು ಗಂಟೆಗಳಿಗೂ ಹೆಚ್ಚು ಕಾಲ ಶವಗಳನ್ನು ತಿಂದು ಹಾಕಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದೇಹದ ಭಾಗಗಳನ್ನು ತಿನ್ನುತ್ತಿದ್ದಾಗ ಅದನ್ನು ಓಡಿಸುವ ಪ್ರಯತ್ನಗಳು ವ್ಯರ್ಥವಾಯಿತು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಅದನ್ನು ಶಾಂತಗೊಳಿಸುವಲ್ಲಿ ಯಶಸ್ವಿಯಾದ ನಂತರವೇ ಕರಡಿಯನ್ನು ಸೆರೆ ಹಿಡಿಯಲಾಯಿತು ಎಂದು ಅಧಿಕಾರಿ ಹೇಳಿದರು.

ಈ ಘಟನೆಯು ಜಿಲ್ಲಾ ಕೇಂದ್ರದಿಂದ ಒಂದೂವರೆ ಕಿಲೋಮೀಟರ್ ದೂರದಲ್ಲಿರುವ ಖರ್ಮೈ ಪ್ರದೇಶದಲ್ಲಿ ಬೆಳಿಗ್ಗೆ 6:30 ರ ಸುಮಾರಿಗೆ ಸಂಭವಿಸಿದೆ. ಇಲ್ಲಿನ ರಾಣಿಗಂಜ್ ಪ್ರದೇಶದ ಮುಖೇಶ ಠಾಕೂರ್ (50) ಮತ್ತು ಇಂದಿರಾ ಠಾಕೂರ್ (45) ಎಂದು ಗುರುತಿಸಲಾದ ದಂಪತಿ ದೇವಸ್ಥಾನಕ್ಕೆ ಬೆಳಿಗ್ಗೆ ಪ್ರಾರ್ಥನೆ ಸಲ್ಲಿಸಲು ಹೋಗಿದ್ದರು. ಆಗ ಕರಡಿ ಇವರ ಮೇಲೆ ದಾಳಿ ಮಾಡಿದೆ. ಸ್ಥಳಕ್ಕಾಗಮಿಸಿದ ಸಿಬ್ಬಂದಿಗೆ ಕರಡಿ ಶವಗಳನ್ನು ತುಂಡು ತುಂಡು ಮಾಡಿ ತಿಂದು ಹಾಕುತ್ತಿರುವುದು ಕಂಡು ಬಂದಿದೆ ಎಂದು ವಿಭಾಗೀಯ ಅರಣ್ಯಾಧಿಕಾರಿ (ಡಿಎಫ್‌ಒ) ಗೌರವ್ ಶರ್ಮಾ ತಿಳಿಸಿದ್ದಾರೆ.
ನಾವು ಪನ್ನಾ ಟೈಗರ್ ರಿಸರ್ವ್ ತಂಡಗಳಿಗೂ ಮಾಹಿತಿ ನೀಡಿದ್ದೇವೆ. ಕರಡಿಯನ್ನು ಶಾಂತಗೊಳಿಸಿದ ನಂತರ ಅದನ್ನು ಸೆರೆ ಹಿಡಿಯಲಾಗಿದ್ದು, ದಂಪತಿ ಮೃತದೇಹಗಳನ್ನು ಹೊರತೆಗೆಯಲಾಗಿದೆ. ಪ್ರಾಣಿಯನ್ನು ಕಾಡಿನಲ್ಲಿ ಬಿಡಲಾಗುವುದಿಲ್ಲ ಮತ್ತು ನಾವು ಅದನ್ನು ಬೇರೆ ನಗರದ ಯಾವುದಾದರೂ ಮೃಗಾಲಯಕ್ಕೆ ಕಳುಹಿಸಲು ಯೋಜಿಸಿದ್ದೇವೆ ಎಂದು ಅವರು ಹೇಳಿದರು. ಮೃತರ ಕುಟುಂಬಕ್ಕೆ ತಲಾ 4 ಲಕ್ಷ ರೂಪಾಯಿ ಆರ್ಥಿಕ ನೆರವು ನೀಡಲಾಗುವುದು ಎಂದು ಅವರು ಹೇಳಿದರು.

ಪ್ರಮುಖ ಸುದ್ದಿ :-   ಈ ಹಳ್ಳಿಯಲ್ಲಿರುವ ಮತದಾನ ಕೇಂದ್ರದ ಒಬ್ಬರೇ ಒಬ್ಬರು ಮತದಾರರಿಗಾಗಿ 40 ಕಿಮೀ ನಡೆದುಕೊಂಡು ಹೋದ ಚುನಾವಣಾ ಸಿಬ್ಬಂದಿ...!

ದಂಪತಿ ಕರಡಿಯೊಂದಿಗೆ ಹೋರಾಡುವಾಗ ಸಾವಿಗೀಡಾಗಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಸ್ಥಳೀಯರ ಪ್ರಕಾರ, ಕರಡಿ ಶವಗಳನ್ನು ತಿನ್ನುವ ಮೊದಲು ಅವುಗಳ ದೇಹವನ್ನು ತುಂಡು ಮಾಡಿದೆ. ಘಟನೆ ನಡೆದು ಐದು ಗಂಟೆಗಳ ಬಳಿಕ ಕರಡಿಯನ್ನು ಸೆರೆ ಹಿಡಿಯಲಾಯಿತು ಎಂದು ಸ್ಥಳೀಯರು ತಿಳಿಸಿದ್ದಾರೆ.
ಘಟನೆ ನಡೆದ ಎರಡರಿಂದ ಮೂರು ಗಂಟೆಗಳ ನಂತರ ಪೊಲೀಸರು ಮತ್ತು ಅರಣ್ಯ ತಂಡಗಳು ಸ್ಥಳಕ್ಕೆ ಆಗಮಿಸಿವೆ ಎಂದು ಮೃತರ ಸಂಬಂಧಿಕರು ಹೇಳಿದ್ದಾರೆ.
ಮಾಹಿತಿ ತಿಳಿದ ಕೂಡಲೇ ಜನ ಜಮಾಯಿಸಿದರು. ಬಳಿಕ ಮಾಹಿತಿ ನೀಡಿದ ಅರಣ್ಯ ಸಿಬ್ಬಂದಿ ಕೆಲ ಗಂಟೆಗಳ ನಂತರ ಸ್ಥಳಕ್ಕೆ ಆಗಮಿಸಿದರು. ಅವರು ಕರಡಿಯನ್ನು ಶಾಂತಗೊಳಿಸಲು ಮತ್ತು ರಕ್ಷಿಸಲು ಇನ್ನೂ ಎರಡು ಗಂಟೆಗಳನ್ನು ತೆಗೆದುಕೊಂಡರು. ನೊಂದ ಕುಟುಂಬದ ಸದಸ್ಯರಿಗೆ ಉದ್ಯೋಗ ನೀಡಬೇಕು ಎಂದು ಒತ್ತಾಯಿಸಿ ಸ್ಥಳೀಯರು ಗಲಾಟೆ ನಡೆಸಿದರು.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement