ಪ್ರವಾದಿ ಮಹಮ್ಮದ್‌ ಕುರಿತ ವಿವಾದಾತ್ಮಕ ಹೇಳಿಕೆಗಳಿಗೆ ಅರಬ್ ರಾಷ್ಟ್ರಗಳ ಆಕ್ಷೇಪ, ಬಿಜೆಪಿ ವಕ್ತಾರರ ಅಮಾನತು ಕ್ರಮಕ್ಕೆ ಸ್ವಾಗತ

ನವದೆಹಲಿ: ಅಮಾನತುಗೊಂಡಿರುವ ಇಬ್ಬರು ಬಿಜೆಪಿ ನಾಯಕರು ಪ್ರವಾದಿ ಮುಹಮ್ಮದ್ ಕುರಿತು ಮಾಡಿದ ಹೇಳಿಕೆಯನ್ನು ಸೌದಿ ಅರೇಬಿಯಾ ಸೇರಿದಂತೆ ಗಲ್ಫ್ ರಾಷ್ಟ್ರಗಳು ಖಂಡಿಸಿವೆ. ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ಕತಾರ್ ಪ್ರವಾಸದ ನಡುವೆಯೇ ಈ ವಿವಾದ ಭುಗಿಲೆದ್ದಿದೆ.
ಸೌದಿ ಅರೇಬಿಯಾವು ಬಿಜೆಪಿ ವಕ್ತಾರರಾದ ನೂಪುರ್ ಶರ್ಮಾ ಅವರ ಕಾಮೆಂಟ್‌ಗಳನ್ನು “ಅವಮಾನಕರ” ಎಂದು ಬಣ್ಣಿಸಿದೆ ಮತ್ತು “ನಂಬಿಕೆಗಳು ಮತ್ತು ಧರ್ಮಗಳಿಗೆ ಗೌರವ” ನೀಡಿ ಎಂದು ಕರೆ ನೀಡಿದೆ ಎಂದು ವಿದೇಶಾಂಗ ಸಚಿವಾಲಯದ ಹೇಳಿಕೆ ತಿಳಿಸಿದೆ.
ರಿಯಾದ್ ಇತ್ತೀಚಿನ ಹೇಳಿಕೆಗಳನ್ನು ಖಂಡಿಸಿದೆ. ಗಲ್ಫ್‌ನಲ್ಲಿ ಭಾರತೀಯ ಸರಕುಗಳನ್ನು ಬಹಿಷ್ಕರಿಸುವಂತೆ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾದ ಕರೆಗಳ ಮಧ್ಯೆ ಕತಾರ್, ಕುವೈತ್ ಮತ್ತು ಇರಾನ್ ಭಾನುವಾರ ಭಾರತೀಯ ರಾಯಭಾರಿಯನ್ನು ಕರೆದು ಹೇಳಿಕೆಗಳಿಗೆ ತಮ್ಮ ಆಕ್ಷೇಪ ವ್ಯಕ್ತಪಡಿಸಿದೆ.

ದೋಹಾದಲ್ಲಿರುವ ಭಾರತೀಯ ರಾಯಭಾರಿಯನ್ನು ಕತಾರ್‌ ವಿದೇಶಾಂಗ ಸಚಿವಾಲಯಕ್ಕೆ ಕರೆಸಲಾಯಿತು ಮತ್ತು ಅಧಿಕೃತ ಪ್ರತಿಭಟನಾ ಪತ್ರವನ್ನು ಹಸ್ತಾಂತರಿಸಲಾಯಿತು, ಅದರಲ್ಲಿ “ಕತಾರ್ ಸಾರ್ವಜನಿಕ ಕ್ಷಮೆಯಾಚನೆಯನ್ನು ನಿರೀಕ್ಷಿಸುತ್ತಿದೆ ಮತ್ತು ಭಾರತ ಸರ್ಕಾರವು ಈ ಟೀಕೆಗಳನ್ನು ತಕ್ಷಣವೇ ಖಂಡಿಸುವುದನ್ನು ನಿರೀಕ್ಷಿಸುತ್ತದೆ ಎಂದು ಹೇಳಿದೆ. ವ್ಯಾಪಾರವನ್ನು ಉತ್ತೇಜಿಸಲು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಭಾರತೀಯ ಉದ್ಯಮಿಗಳ ಜೊತೆಗೆ ಶ್ರೀಮಂತ ಗಲ್ಫ್ ರಾಜ್ಯಕ್ಕೆ ಉನ್ನತ ಮಟ್ಟದ ಪ್ರವಾಸದ ನಡುವೆ ಕತಾರ್‌ನ ಖಂಡನೆ ಬಂದಿದೆ.
ಕುವೈತ್ ಸಹ ಭಾರತದ ರಾಯಭಾರಿಯನ್ನು ಕರೆಸಿತು ಮತ್ತು “ಈ ಪ್ರತಿಕೂಲ ಹೇಳಿಕೆಗಳಿಗೆ ಸಾರ್ವಜನಿಕ ಕ್ಷಮೆಯಾಚಿಸುವಂತೆ ಒತ್ತಾಯಿಸಿತು.ಇರಾನ್‌ನ ಸುದ್ದಿ ವಾಹಿನಿಯೊಂದು ಟೆಹ್ರಾನ್ “ಭಾರತೀಯ ಟಿವಿ ಶೋನಲ್ಲಿ ಇಸ್ಲಾಂ ಪ್ರವಾದಿ ವಿರುದ್ಧ ಅವಮಾನ” ಎಂದು ಕರೆದಿದೆ ಎಂದು ವರದಿ ಮಾಡಿದೆ. ಸೌದಿ ನಗರದ ಜೆಡ್ಡಾದಲ್ಲಿ ನೆಲೆಗೊಂಡಿರುವ ಇಸ್ಲಾಮಿಕ್ ಸಹಕಾರ ಸಂಘಟನೆ (ಒಐಸಿ) ಕೂಡ ಟೀಕೆಗಳನ್ನು ಖಂಡಿಸಿದೆ.

ಪ್ರಮುಖ ಸುದ್ದಿ :-   ಶಿಂಧೆ ಬಣದ ಶಿವಸೇನೆ ಸೇರಿದ ಬಾಲಿವುಡ್‌ ನಟ ಗೋವಿಂದ : 14 ವರ್ಷಗಳ ವನವಾಸದ ನಂತರ ರಾಜಕೀಯಕ್ಕೆ

ಟೀಕೆಗಳು “ಫ್ರಿಂಜ್ ಅಂಶಗಳ ದೃಷ್ಟಿಕೋನ” ಮತ್ತು ಇದು ಭಾರತ ಸರ್ಕಾರದ ಅಭಿಪ್ರಾಯವನ್ನು ಪ್ರತಿಬಿಂಬಿಸುವುದಿಲ್ಲ ಎಂದು ಭಾರತ ಹೇಳಿದೆ. ಆಡಳಿತಾರೂಢ ಬಿಜೆಪಿ ನಾಯಕರ ವಿರುದ್ಧ ಕ್ರಮ ಕೈಗೊಂಡಿದೆ ಎಂದು ಸರ್ಕಾರ ಹೈಲೈಟ್ ಮಾಡಿದೆ – ಅವರಲ್ಲಿ ಒಬ್ಬರು ಪಕ್ಷದ ರಾಷ್ಟ್ರೀಯ ವಕ್ತಾರರು ಮತ್ತು ಇನ್ನೊಬ್ಬರು ಅದರ ಮಾಧ್ಯಮ ಮುಖ್ಯಸ್ಥರು. ಈ ನಿರ್ಧಾರವನ್ನು ಸೌದಿ ಅರೇಬಿಯಾ ಮತ್ತು ಬಹ್ರೇನ್ ದೇಶಗಳು ಸ್ವಾಗತಿಸಿದೆ.

ದೇಶಾದ್ಯಂತ ಸರಣಿ ಕೋಮು ಘಟನೆಗಳ ಹಿನ್ನೆಲೆಯಲ್ಲಿ ಕಳೆದ ವಾರ ಟಿವಿ ಚರ್ಚೆಯ ಸಂದರ್ಭದಲ್ಲಿ ನೂಪುರ್ ಶರ್ಮಾ ಅವರು ಈ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಬಿಜೆಪಿ ಮಾಧ್ಯಮ ಮುಖ್ಯಸ್ಥ ನವೀನ್ ಜಿಂದಾಲ್ ಪ್ರವಾದಿ ಕುರಿತು ಟ್ವೀಟ್ ಮಾಡಿದ್ದು, ನಂತರ ಅದನ್ನು ಡಿಲೀಟ್ ಮಾಡಿದ್ದಾರೆ.
ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶದಲ್ಲಿ ಸಮಸ್ಯೆ ಉಲ್ಬಣಿಸಿದೆ. ಶುಕ್ರವಾರದ ಪ್ರಾರ್ಥನೆಯ ನಂತರ ಎರಡು ಗುಂಪುಗಳ ಘರ್ಷಣೆಯಲ್ಲಿ ಕಾನ್ಪುರದಲ್ಲಿ 40 ಜನರು ಗಾಯಗೊಂಡಿದ್ದಾರೆ.
ಭಾನುವಾರ ಹೇಳಿಕೆಯೊಂದರಲ್ಲಿ, ಬಿಜೆಪಿಯು “ಯಾವುದೇ ಪಂಥ ಅಥವಾ ಧರ್ಮವನ್ನು ಅವಮಾನಿಸುವ ಅಥವಾ ಕೀಳಾಗಿಸುವ ಯಾವುದೇ ಸಿದ್ಧಾಂತದ ವಿರುದ್ಧ ಹೇಳಿಕೆಗಳನ್ನು ಉತ್ತೇಜಿಸುವುದಿಲ್ಲ” ಎಂದು ಹೇಳಿದೆ.

ಪ್ರಮುಖ ಸುದ್ದಿ :-   ರೈಲು ನಿಲ್ದಾಣದಲ್ಲಿ ವ್ಯಕ್ತಿಯ ಸಾವಿನ ರಹಸ್ಯ ಭೇದಿಸಿದ ರೈಲು ಪ್ರಯಾಣಿಕನ ಮೊಬೈಲ್‌ ಸೆಲ್ಫಿ...!

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement