ಬ್ಯಾಂಕ್ ನೋಟುಗಳಲ್ಲಿ ಮಹಾತ್ಮ ಗಾಂಧಿಯವರ ಚಿತ್ರ ಬದಲಿಸುವ ಬಗ್ಗೆ ಮಾಧ್ಯಮ ವರದಿಗಳನ್ನು ತಳ್ಳಿಹಾಕಿದ ಆರ್‌ಬಿಐ

ಅಸ್ತಿತ್ವದಲ್ಲಿರುವ ಯಾವುದೇ ಕರೆನ್ಸಿ ಮತ್ತು ಬ್ಯಾಂಕ್ ನೋಟುಗಳನ್ನು ಬದಲಾವಣೆ ಮಾಡುವ ಬಗ್ಗೆ ಕೇಂದ್ರೀಯ ಬ್ಯಾಂಕ್‌ನೊಂದಿಗೆ ಯಾವುದೇ ಪ್ರಸ್ತಾಪವಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಸೋಮವಾರ ಸ್ಪಷ್ಟಪಡಿಸಿದೆ.
ಆರ್‌ಬಿಐ ಮತ್ತು ಕೇಂದ್ರ ಸರ್ಕಾರವು ನೋಟುಗಳ ಮೇಲೆ ಮಹಾತ್ಮಾ ಗಾಂಧಿಯವರ ಮುಖದ ಬದಲಾಗಿ ಎಪಿಜೆ ಅಬ್ದುಲ್ ಕಲಾಂ ಮತ್ತು ರವೀಂದ್ರನಾಥ ಟ್ಯಾಗೋರ್ ಅವರಂತಹ ಇತರರ ವ್ಯಕ್ತಿಗಳ ಮುಖದ ನೋಟುಗಳನ್ನು ತರಲು ಪರಿಗಣಿಸುತ್ತಿದೆ ಎಂದು ಕೆಲವು ಮಾಧ್ಯಮ ವರದಿಗಳು ಹೇಳಿಕೊಂಡ ಒಂದು ದಿನದ ನಂತರ ಆರ್‌ಬಿಐನಿಂದ ಈ ಸ್ಪಷ್ಟೀಕರಣವು ಬಂದಿದೆ. ಮತ್ತು ಅಂಥಹ ಸುದ್ದಿಗಳನ್ನು ಅದು ಸ್ಪಷ್ಟವಾಗಿ ತಳ್ಳಿಹಾಕಿದೆ. ಹಾಗೂ ರಿಸರ್ವ್ ಬ್ಯಾಂಕ್‌ ಮುಂದೆ ಅಂತಹ ಯಾವುದೇ ಪ್ರಸ್ತಾಪವಿಲ್ಲ ಎಂದು ಆರ್‌ಬಿಐ ಸೋಮವಾರ ಸ್ಪಷ್ಟೀಕರಣದಲ್ಲಿ ತಿಳಿಸಿದೆ.

ಕೆಲ ಮಾಧ್ಯಮಗಳ ವರದಿಯ ಪ್ರಕಾರ, ಹೆಸರಿಸದ ಮೂಲಗಳನ್ನು ಉಲ್ಲೇಖಿಸಿ, ಆರ್‌ಬಿಐ ಮತ್ತು ಹಣಕಾಸು ಸಚಿವಾಲಯದ ಅಡಿಯಲ್ಲಿ ಸೆಕ್ಯುರಿಟಿ ಪ್ರಿಂಟಿಂಗ್ ಮತ್ತು ಮಿಂಟಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ (SPMCIL), ನೋಟುಗಳ ಮೇಲೆ ಖ್ಯಾತ ಲೇಖಕ ಮತ್ತು ನೊಬೆಲ್ ಪ್ರಶಸ್ತಿ ಪುರಸ್ಕೃತ ರವೀಂದ್ರನಾಥ ಟ್ಯಾಗೋರ್ ಮತ್ತು ಭಾರತದ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರ ವಾಟರ್‌ ಮಾರ್ಕ್‌ಗಳನ್ನು ಬಳಸಲು ಪರಿಗಣಿಸುತ್ತಿದೆ. ಕೆಲವು ಬ್ಯಾಂಕ್ ನೋಟುಗಳ ಮೇಲೆ . ಮಾದರಿಗಳ ವಿನ್ಯಾಸಕ್ಕೆ ‘ಅಧಿಕೃತ ಅನುಮತಿ’ ಇದೆ ಎಂದು ವರದಿಯು ಹೇಳಿಕೊಂಡಿದೆ, ಆದರೆ ಅದರ ಬಗ್ಗೆ ಇನ್ನೂ ಯಾವುದೇ ದೃಢ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಎಂದು ವರದಿ ಹೇಳಿತ್ತು.

ಪ್ರಮುಖ ಸುದ್ದಿ :-   ಹೈದರಾಬಾದ್ ಮಳೆ: ಗೋಡೆ ಕುಸಿದು 7 ಕಾರ್ಮಿಕರು ಸಾವು

ಎಲ್ಲಾ ಬ್ಯಾಂಕ್ ನೋಟುಗಳ ಮೇಲೆ ‘ರಾಷ್ಟ್ರಪಿತ’ ಮಹಾತ್ಮ ಗಾಂಧಿಯವರ ವಾಟರ್‌ಮಾರ್ಕ್ ಚಿತ್ರವನ್ನು ಮುದ್ರಿಸಲಾಗಿದೆ. ಈ ಪ್ರಾಕ್ಟೀಸ್‌ ಮೊದಲ ಬಾರಿಗೆ 1969 ರಲ್ಲಿ 1, 2 ಮತ್ತು 5 ರೂ ನೋಟುಗಳಲ್ಲಿ ಮುದ್ರಿಸಲಾಯಿತು. ಮಹಾತ್ಮ ಗಾಂಧಿಯವರ ಜನ್ಮಶತಮಾನೋತ್ಸವದ ಗೌರವಾರ್ಥ ವಿನ್ಯಾಸ ಸರಣಿಯನ್ನು 1960 ರ ದಶಕದಲ್ಲಿ ನೀಡಲಾಯಿತು, ಇದು ಸೇವಾಗ್ರಾಮ್ ಆಶ್ರಮವನ್ನು ಹಿನ್ನೆಲೆಯಾಗಿಟ್ಟುಕೊಂಡು ಕುಳಿತಿರುವ ಗಾಂಧಿಯನ್ನು ಚಿತ್ರಿಸುತ್ತದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement