ಗೋವಾದ ಬೀಚ್ ಬಳಿ ತನ್ನ ಸಂಗಾತಿ ಎದುರೇ ಬ್ರಿಟಿಷ್ ಮಹಿಳೆಯ ಅತ್ಯಾಚಾರ: ಆರೋಪಿ ಬಂಧನ

ಪಣಜಿ: ಗೋವಾದ ಅರಂಬೋಲ್ ಬೀಚ್ ಬಳಿ ಗೋವಾ ಪ್ರವಾಸದಲ್ಲಿರುವ ಮಧ್ಯವಯಸ್ಕ ಬ್ರಿಟನ್ ಮಹಿಳೆಯೊಬ್ಬರಿಗೆ ಮಸಾಜ್ ಮಾಡುವ ನೆಪದಲ್ಲಿ ಸ್ಥಳೀಯ ವ್ಯಕ್ತಿಯೊಬ್ಬರು ಆಕೆಯ ಸಂಗಾತಿಯ ಎದುರೇ ಅತ್ಯಾಚಾರವೆಸಗಿದ್ದಾನೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಆರೋಪಿ, ಸ್ಥಳೀಯ ನಿವಾಸಿ ವಿನ್ಸೆಂಟ್ ಡಿಸೋಜಾ (32) ಉತ್ತರ ಗೋವಾ ಜಿಲ್ಲೆಯ ಅರಂಬೋಲ್ ಬೀಚ್ ಬಳಿ ಅಕ್ರಮವಾಗಿ ಮಸಾಜ್ ಸೇವೆಗಳನ್ನು ನೀಡುವ ಗುಂಪಿನ ಭಾಗವಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.ಆತ ಈ ಹಿಂದೆ ಶಾಲಾ ಗ್ರಂಥಪಾಲಕರಾಗಿಯೂ ಕೆಲಸ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಸೋಮವಾರ ಪೆರ್ನೆಮ್ ಪೊಲೀಸರು ಆತನನ್ನು ಬಂಧಿಸಿದ್ದರು.

advertisement
ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
ಅಡ್ಮಿಶನ್ ಗಾಗಿ ಇಂದೇ ಕರೆ ಮಾಡಿ
9535127775 / 9901837775 / 6364528715 / 08362775155 / https://icsmpucollege.com/

ಪೊಲೀಸರ ದೂರಿನ ಪ್ರಕಾರ, ಆರೋಪಿಯು ಸಮುದ್ರತೀರಕ್ಕೆ ಸಮೀಪವಿರುವ ಸಿಹಿನೀರಿನ ಸರೋವರದ ಬಳಿ ಮಲಗಿದ್ದಾಗ ಮಸಾಜ್ ಮಾಡುವ ನೆಪದಲ್ಲಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಅಧಿಕಾರಿಯೊಬ್ಬರು ಹೇಳಿದರು.ಘಟನೆ ಜೂನ್ 2 ರಂದು ನಡೆದಿದೆ, ಆದರೆ ಮಹಿಳೆ ಬ್ರಿಟನ್ನಿನಲ್ಲಿನ ತನ್ನ ಕುಟುಂಬ ಸದಸ್ಯರನ್ನು ಸಂಪರ್ಕಿಸಿ ಮತ್ತು ಭಾರತದಲ್ಲಿನ ಬ್ರಿಟಿಷ್ ರಾಯಭಾರ ಕಚೇರಿಯಿಂದ ನೆರವು ಪಡೆದ ನಂತರ ಸೋಮವಾರ ಪೆರ್ನೆಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ಅವರು ಹೇಳಿದರು.

ಓದಿರಿ :-   ಬಹುಮತ ಪರೀಕ್ಷೆಗೆ ತಡೆ ನೀಡಲು ಸುಪ್ರೀಂಕೋರ್ಟ್‌ ನಿರಾಕರಿಸಿದ ಬೆನ್ನಲ್ಲೇ ಮಹಾರಾಷ್ಟ್ರ ಸಿಎಂ ಸ್ಥಾನಕ್ಕೆ ರಾಜೀನಾಮೆ ಪ್ರಕಟಿಸಿದ ಉದ್ಧವ್ ಠಾಕ್ರೆ

ದೂರು ಸ್ವೀಕರಿಸಿದ ಒಂದು ಗಂಟೆಯೊಳಗೆ ಪೆರ್ನೆಮ್ ಪೊಲೀಸರು, ಇನ್ಸ್‌ಪೆಕ್ಟರ್ ವಿಕ್ರಮ್ ನಾಯ್ಕ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದರು ಎಂದು ಅಧಿಕಾರಿ ತಿಳಿಸಿದ್ದಾರೆ.
ಸೋಮವಾರ ರಾತ್ರಿ ಆರೋಪಿ ಮತ್ತು ಸಂತ್ರಸ್ತೆಯನ್ನು ಪಣಜಿ ಸಮೀಪದ ಮಾಪುಸಾ ಪಟ್ಟಣದ ಜಿಲ್ಲಾಸ್ಪತ್ರೆಗೆ ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿತ್ತು.
ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 376 (ಅತ್ಯಾಚಾರ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಉಪ ಪೊಲೀಸ್ ವರಿಷ್ಠಾಧಿಕಾರಿ (ಪೆರ್ನೆಮ್) ಸಿದ್ಧಾಂತ್ ಶಿರೋಡ್ಕರ್ ಪ್ರಕರಣದ ತನಿಖೆಯನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ.

advertisement

ಕ್ಷಣ ಕ್ಷಣದ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 2

advertisement

ನಿಮ್ಮ ಕಾಮೆಂಟ್ ಬರೆಯಿರಿ