ಗ್ರಾಮದೊಳಗೆ ನುಗ್ಗಿ ನಾಯಿ ಮೇಲೆ ದಾಳಿ ಮಾಡಿದ ಚಿರತೆ …ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಮಹಾರಾಷ್ಟ್ರದ  ನಾಸಿಕದಲ್ಲಿ ಚಿರತೆಗಳು ಜನವಸತಿ ಪ್ರದೇಶಗಳಿಗೆ ನುಗ್ಗುತ್ತಿರುವ ಘಟನೆ ಪದೇಪದೇ ವರದಿಯಾಗುತ್ತಿದೆ. ಈಗ ಇಂಥದ್ದೇ ಘಟನೆಯೊಂದರಲ್ಲಿ ನಾಯಿ ಮೇಲೆ ಚಿರತೆ ನಡೆಸಿದ ದಾಳಿಯ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಅರಣ್ಯ ಸಂರಕ್ಷಣಾಧಿಕಾರಿ ಗ್ರಾಮದ ಜನರಿಗೆ ಎಚ್ಚರಿಕೆಯಿಂದ ಇರಲು ಸೂಚಿಸಿದ್ದಾರೆ.

advertisement

ನಾಸಿಕದ ಮುಂಗ್ಸಾರೆ ಗ್ರಾಮಕ್ಕೆ ಬಂದ ಚಿರತೆ ನಾಯಿ ಮೇಲೆ ದಾಳಿ ನಡೆಸಿದೆ. ವೀಡಿಯೊದಲ್ಲಿ ಕಂಡುಬಂದತೆ ಕಪ್ಪು ನಾಯಿಯು ಕಂಪೌಂಡ್‌ ಗೋಡೆಯ ಮೇಲೆ ಕುಳಿತುಕೊಂಡಿರುತ್ತದೆ. ಕೆಲವು ಸೆಕೆಂಡುಗಳ ನಂತರ ನಾಯಿಗೆ ಚಿರತೆ ಕಾಣಿಸಿಕೊಳ್ಳುತ್ತದೆ. ಆರಂಭದಲ್ಲಿ ಚಿರತೆಯ ದಾಳಿಯಿಂದ ನಾಯಿ ತಪ್ಪಿಸಿಕೊಳ್ಳಲು ಯತ್ನಿಸಿದೆ. ನಂತರ ಮತ್ತೆ ನಾಯಿ ಕಂಪೌಂಡ್‌ ಗೋಡೆ ಮೇಲೆ ಹಾರಿದಾಗ ನಿಯಂತ್ರಣ ತಪ್ಪಿ ಹೊರಗೆ ಬಿದ್ದಿದೆ. ಕೂಡಲೇ ಚಿರತೆ ನಾಯಿಯನ್ನು ಹಿಡಿದು ಕೊಂಡೊಯ್ದಿದೆ.

ನಾಸಿಕ್ ಉಪ ಅರಣ್ಯ ಸಂರಕ್ಷಣಾಧಿಕಾರಿ ಪಂಕಜ್ ಗಾರ್ಗ್, ‘ಚಿರತೆ ಚಟುವಟಿಕೆಯು ಮುಂಗ್ಸಾರೆ ಪ್ರದೇಶದಲ್ಲಿ ಹೆಚ್ಚಿರುವುದರಿಂದ ರಾತ್ರಿಯಲ್ಲಿ ಮನೆಯೊಳಗೆ ಇರುವಂತೆ ನಾವು ಗ್ರಾಮದ ಜನರಿಗೆ ಮನವಿ ಮಾಡುತ್ತೇವೆ. ಜನರು ಎಚ್ಚರದಿಂದಿರಬೇಕು’ ಎಂದು ಹೇಳಿದ್ದಾರೆ.

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ಟೆಲಿಗ್ರಾಮ್ ಚಾನೆಲ್ ಸೇರಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಓದಿರಿ :-   ಅಲಿಗಢ ಕಾಲೇಜಿನ ತಿರಂಗಾ ಸಮಾವೇಶದಲ್ಲಿ 'ಪಾಕಿಸ್ತಾನ್ ಜಿಂದಾಬಾದ್' ಘೋಷಣೆ: ವಿದ್ಯಾರ್ಥಿಗಳು, ಪ್ರಾಂಶುಪಾಲರ ವಿರುದ್ಧ ಪ್ರಕರಣ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ

advertisement