ಬಿಜೆಪಿಯಿಂದ ಚಡ್ಡಿ ಅಭಿಯಾನ; ಚಡ್ಡಿ ಹಿಡಿದು ಸಿದ್ದರಾಮಯ್ಯ ಮನೆಯತ್ತ ಬಂದ ಪರಿಷತ್‌ ಸದಸ್ಯ ಛಲವಾದಿ ನಾರಾಯಣಸ್ವಾಮಿ

posted in: ರಾಜ್ಯ | 0

ಬೆಂಗಳೂರು: ಆರ್‌ಎಸ್‌ಎಸ್‌ ಚಡ್ಡಿ ಸುಟ್ಟುಹಾಕುವ ಅಭಿಯಾನಕ್ಕೆ ಕಾಂಗ್ರೆಸ್ ಕರೆ ಕೊಟ್ಟಿರುವ ಬೆನ್ನಲ್ಲೇ ವಿಧಾನ ಪರಿಷತ್‌ ಸದಸ್ಯ ಬಿಜೆಪಿಯ ಛಲವಾದಿ ನಾರಾಯಣಸ್ವಾಮಿ ನೇತೃತ್ವದಲ್ಲಿ ಚಡ್ಡಿ ಚಳವಳಿ ನಡೆದಿದದ್ದು, ಚಡ್ಡಿ ಹಿಡಿದು ಸಿದ್ದರಾಮಯ್ಯ ಮನೆ ಕಡೆಗೆ ಬಿಜೆಪಿ ಕಾರ್ಯಕರ್ತರು ಆಗಮಿಸಿದ್ದಾರೆ.
ಈ ವೇಳೆ ಛಲವಾದಿ ನಾರಾಯಣಸ್ವಾಮಿ ಮಾತನಾಡಿ ಚಡ್ಡಿ ಸುಡಬೇಕೆಂದಿದ್ದರೆ ಕಾಂಗ್ರೆಸ್​ನವರ ಚಡ್ಡಿ ಸುಟ್ಟುಕೊಳ್ಳಲಿ. ಇಡೀ ದೇಶದಲ್ಲಿ ಜನರು ಕಾಂಗ್ರೆಸ್​ನವರ ಚಡ್ಡಿ ಸುಟ್ಟಿದ್ದಾರೆ. ಚಡ್ಡಿ ಸುಟ್ಟು ಬೆತ್ತಲೆ ಆಗಬೇಡಿ ಎಂದು ಹೇಳಿದರೂ ಕೇಳುತ್ತಿಲ್ಲ. ಅದಕ್ಕಾಗಿ ಕಾಂಗ್ರೆಸ್‌ನವರಿಗೆ ಚಡ್ಡಿ ಕೊಡಲು ಬಂದಿದ್ದೇವೆ. ಕಾಂಗ್ರೆಸ್ ಪಕ್ಷದವರು ಚಡ್ಡಿಗಳನ್ನು ಸುಡುತ್ತಲೇ ಇರಲಿ. ಅವರು ಎಷ್ಟು ಚಡ್ಡಿ ಸುಡ್ತಾರೋ ಅಷ್ಟು ಚಡ್ಡಿ ತಲುಪಿಸುತ್ತೇವೆ ಎಂದು ಹೇಳಿದ್ದಾರೆ.

advertisement
ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
ಅಡ್ಮಿಶನ್ ಗಾಗಿ ಇಂದೇ ಕರೆ ಮಾಡಿ
9535127775 / 9901837775 / 6364528715 / 08362775155 / https://icsmpucollege.com/

ಚಡ್ಡಿ ಹಾಕುವವರು ಮಿಲಿಟರಿಯಲ್ಲಿ, ಪೊಲೀಸ್ ವ್ಯವಸ್ಥೆಯಲ್ಲೂ ಹಿಂದೆ ಇದ್ದರು. ಕರ್ಮಚಾರಿಗಳು, ರೈತರೂ ಚಡ್ಡಿ ಧರಿಸುತ್ತಾರೆ. ಚಡ್ಡಿ ಹಾಕುವ ಎಲ್ಲರನ್ನೂ ಸಿದ್ದರಾಮಯ್ಯ ಅಪಮಾನ ಮಾಡಿದ್ದಾರೆ ಚಡ್ಡಿ ಮಾನವ ಕುಲವನ್ನು ಗೌರವದಿಂದ ಕಾಣುವ ಸಂಕೇತವಾಗಿದೆ. ಚಡ್ಡಿ ಹಾಕುವಂಥವರು ಮಿಲಿಟರಿ, ಪೊಲೀಸರು, ರೈತರು ಇದ್ದಾರೆ. ಆದರೆ ಸಿದ್ದರಾಮಯ್ಯ ಇವರೆಲ್ಲರನ್ನೂ ಅಪಮಾನ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಎಸ್‍ಸಿ ಮೋರ್ಚಾವು ರಾಜ್ಯದಾದ್ಯಂತ ಸಿದ್ದರಾಮಯ್ಯನವರ ಹೆಸರಿನಲ್ಲಿ ಚಡ್ಡಿಗಳನ್ನು ಸಂಗ್ರಹಿಸುತ್ತಿದೆ. ಸಾಂಕೇತಿಕವಾಗಿ ನಾವು ಇವತ್ತು ಚಡ್ಡಿಗಳನ್ನು ತಲುಪಿಸುತ್ತಿದ್ದೇವೆ ಎಂದು ತಿಳಿಸಿದರು.ನಂತರ ಪೊಲೀಸರು ಬಿಜೆಪಿ ಕಾರ್ಯಕರ್ತರು, ಚಡ್ಡಿಗಳನ್ನು ವಶಕ್ಕೆ ಪಡೆದಿದ್ದಾರೆ.

advertisement

ಕ್ಷಣ ಕ್ಷಣದ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
ಓದಿರಿ :-   ಸಹಾಯಧನ ನೀಡುವ ಕಾಶಿ ಯಾತ್ರೆಗೆ ಅಂತಿಮ ಮಾರ್ಗಸೂಚಿ ಪ್ರಕಟ: ಸರ್ಕಾರದ ಆದೇಶ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

/ 5. ಒಟ್ಟು ವೋಟುಗಳು

advertisement

ನಿಮ್ಮ ಕಾಮೆಂಟ್ ಬರೆಯಿರಿ