ಹಾವೇರಿ: ದಕ್ಷಿಣ ಭಾತದಲ್ಲಿಯೇ ದೊಡ್ಡ ಸ್ಫಟಿಕ ಲಿಂಗ ಎಂಬ ಖ್ಯಾತಿ ಪಡೆದಿದ್ದ ರಾಣೆಬೆನ್ನೂರ ತಾಲೂಕಿನ ಲಿಂಗದಹಳ್ಳಿಯ ಐತಿಹಾಸಿಕ ಪುರಾತನ ಸ್ಪಟಿಕಲಿಂಗ ಸೋಮವಾರ ರಾತ್ರಿ ಕಳ್ಳತನವಾಗಿದೆ.
ಲಿಂಗದಹಳ್ಳಿಯ ಹಿರೇಮಠದಲ್ಲಿ ಸ್ಫಟಿಕಲಿಂಗ ಇತ್ತು. ಮಠದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿಯವರು ಲಿಂಗದ ಪೂಜೆ ಮಾಡುತ್ತಿದ್ದರು.

ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
ಅಡ್ಮಿಶನ್ ಗಾಗಿ ಇಂದೇ ಕರೆ ಮಾಡಿ
9535127775 / 9901837775 / 6364528715 / 08362775155 / https://icsmpucollege.com/ಇದು 8ನೇ ಶತಮಾನದ ಬೆಲೆಕಟ್ಟಲಾಗದ ಸ್ಫಟಿಕಲಿಂಗವಾಗಿತ್ತು ಎಂದು ಹೇಳಲಾಗಿದೆ. ಮಠದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ನಿನ್ನೆ ಕೊಟ್ಟೂರಿಗೆ ಹೋಗಿದ್ದನ್ನು ಗಮನಿಸಿದ ಕಳ್ಳರು ಮಠದಲ್ಲಿದ್ದ ಸಿಸಿ ಕ್ಯಾಮರಾ ಬಂದ್ ಮಾಡಿ ಕಳ್ಳತನ ಮಾಡಿದ್ದಾರೆ.
ಮಂಗಳವಾರ ಬೆಳಗ್ಗೆ ಸ್ವಾಮೀಜಿ ಮಠಕ್ಕೆ ಬಂದು ನೋಡಿದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ಸ್ಪಟಿಕಲಿಂಗವು ಒಟ್ಟು 13 ಇಂಚು ಉದ್ದ ಮತ್ತು 13 ಇಂಚು ಸುತ್ತಳತೆ ಹೊಂದಿದ್ದು, ದಕ್ಷಿಣ ಭಾರತದಲ್ಲೇ ಅತ್ಯಂತ ದೊಡ್ಡ ಸ್ಫಟಿಕಲಿಂಗ ಎಂದು ಹೆಸರುವಾಸಿಯಾಗಿತ್ತು.ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಾಣೆಬೆನ್ನೂರ ತಾಲೂಕಿನ ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕ್ಷಣ ಕ್ಷಣದ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ | |
ಫೇಸ್ ಬುಕ್ ಫಾಲೋ ಮಾಡಿ | |
ಗೂಗಲ್ ನ್ಯೂಸ್ ನಲ್ಲಿ ಸೇರಿ | |
ಟ್ವಿಟರ್ ನಲ್ಲಿ ಫಾಲೋ ಮಾಡಿ |
ನಿಮ್ಮ ಕಾಮೆಂಟ್ ಬರೆಯಿರಿ