ಜ್ಞಾನವಾಪಿ ಸಮೀಕ್ಷೆಗೆ ಆದೇಶ ನೀಡಿದ ನ್ಯಾಯಾಧೀಶರಿಗೆ ಜೀವ ಬೆದರಿಕೆ

ವಾರಾಣಸಿ: ಜ್ಞಾನವಾಪಿ ಮಸೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮೀಕ್ಷೆಗಾಗಿ ಆಯೋಗವನ್ನು ರಚಿಸಲು ಆದೇಶಿಸಿದ್ದ ವಾರಣಾಸಿಯ ನ್ಯಾಯಾಧೀಶರಿಗೆ ಜೀವ ಬೆದರಿಕೆ ಪತ್ರಗಳು ಬಂದಿದೆ.
ವಿವಾದಿತ ಕಟ್ಟಡದೊಳಗೆ ಶಿವಲಿಂಗ ಪತ್ತೆಯಾದ ಸ್ಥಳವನ್ನು ಸೀಲಿಂಗ್ ಮಾಡಲು ಆದೇಶಿಸಿದ ವಾರಾಣಸಿ ನ್ಯಾಯಾಲಯದ ಸಿವಿಲ್ ನ್ಯಾಯಾಧೀಶ ರವಿಕುಮಾರ್ ದಿವಾಕರ್ ಅವರಿಗೆ ನೋಂದಾಯಿತ ಅಂಚೆ ಮೂಲಕ ಬೆದರಿಕೆಗಳು ಬಂದಿವೆ.
ಇಸ್ಲಾಮಿಕ್ ಆಘಾಜ್ ಮೂವ್‌ಮೆಂಟ್ ಈ ಪತ್ರವನ್ನು ಕಳುಹಿಸಿದ್ದು, ಭಾರತದಲ್ಲಿ ‘ದ್ವೇಷಪೂರಿತ ರಾಜಕೀಯ’ದ ಕಾಲದಲ್ಲಿ ನ್ಯಾಯಾಧೀಶರು ಕೂಡ ‘ಕೇಸರಿ’ಯಾಗುತ್ತಿದ್ದಾರೆ ಎಂದು ಅದು ಆರೋಪಿಸಿದೆ. ಅವರನ್ನು ‘ಕಾಫಿರ್’ ಮತ್ತು ‘ವಿಗ್ರಹಾರಾಧಕ’ ಎಂದು ಪತ್ರ ಹೇಳಿದೆ. ಪತ್ರದಲ್ಲಿ ಭಾರತದ ಪ್ರಧಾನ ಮಂತ್ರಿ ಮತ್ತು ಮಾಜಿ ಮುಖ್ಯ ನ್ಯಾಯಾಧೀಶರ ಬಗ್ಗೆ ಅವಹೇಳನಕಾರಿ ಹೇಳಿಕೆಗಳಿವೆ.
ನಂತರ ನ್ಯಾಯಾಧೀಶರ ಸುರಕ್ಷತೆ ಮತ್ತು ಭದ್ರತೆಗಾಗಿ 9 ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.

advertisement

ವಾರಾಣಸಿ ಪೊಲೀಸ್ ಕಮಿಷನರ್ ಎ.ಸತೀಶ್ ಗಣೇಶ್ ಅವರು, ‘ಹಲವು ಲಗತ್ತುಗಳನ್ನು ಹೊಂದಿರುವ ಪತ್ರದ ಬಗ್ಗೆ ಸಿವಿಲ್ ನ್ಯಾಯಾಧೀಶರು ಮಾಹಿತಿ ನೀಡಿದ ನಂತರ, ಈ ಬಗ್ಗೆ ತನಿಖೆ ನಡೆಸಲು ಪೊಲೀಸ್ ಉಪ ಕಮಿಷನರ್ (ವರುಣಾ ವಲಯ) ಅವರನ್ನು ನಿಯೋಜಿಸಲಾಗಿದೆ’ ಎಂದು ಹೇಳಿದರು.
ವಾರಾಣಸಿಯ ಸಿವಿಲ್ ನ್ಯಾಯಾಧೀಶರು ಮತ್ತು ಲಕ್ನೋದಲ್ಲಿರುವ ಅವರ ತಾಯಿಯ ಭದ್ರತೆಯನ್ನು ಸಹ ಪರಿಶೀಲಿಸಲಾಗುತ್ತಿದೆ ಎಂದು ಅವರು ಹೇಳಿದರು. ಜಿಲ್ಲಾ ನ್ಯಾಯಾಧೀಶರಿಗೂ ಸೂಕ್ತ ಭದ್ರತೆ ಒದಗಿಸಲಾಗಿದೆ ಎಂದು ತಿಳಿಸಿದರು.

ಓದಿರಿ :-   ಕೇರಳದ ಮಲಪ್ಪುರಂನಲ್ಲಿ ಪಬ್ಲಿಕ್ ಸರ್ವಿಸ್ ಕಮಿಷನ್ ಪರೀಕ್ಷೆಯಲ್ಲಿ ಒಟ್ಟಿಗೆ ತೇರ್ಗಡೆಯಾದ ತಾಯಿ-ಮಗ...!

ಜ್ಞಾನ್ವಾಪಿ ಮಸೀದಿ ಸರ್ವೆ ಆದೇಶ
ಸಿವಿಲ್ ನ್ಯಾಯಾಧೀಶ (ಹಿರಿಯ ವಿಭಾಗ) ದಿವಾಕರ ಅವರು ಈ ವರ್ಷ ಏಪ್ರಿಲ್ 26 ರಂದು ಜ್ಞಾನವಾಪಿ ಸಂಕೀರ್ಣದ ವಿಡಿಯೋಗ್ರಾಫಿ ಸಮೀಕ್ಷೆಗೆ ಆದೇಶಿಸಿದ್ದರು. ಸಮೀಕ್ಷೆಯ ವರದಿಯನ್ನು ಮೇ 19ರಂದು ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು.
ಕಳೆದ ತಿಂಗಳು ಜ್ಞಾನವಾಪಿ ಮಸೀದಿ-ಶ್ರಿಂಗಾರ್ ಗೌರಿ ಕಾಂಪ್ಲೆಕ್ಸ್‌ನ ವೀಡಿಯೋಗ್ರಫಿ ಸಮೀಕ್ಷೆಯಲ್ಲಿ ಶಿವಲಿಂಗ ಕಂಡುಬಂದಿದೆ ಎಂದು ಹಿಂದೂ ಕಡೆಯವರು ಹೇಳಿಕೊಂಡಿದ್ದಾರೆ.

ಕ್ಷಣ ಕ್ಷಣದ ಸುದ್ದಿಗಳು ಮತ್ತು ಮಾಹಿತಿಗಾಗಿ
ಟೆಲಿಗ್ರಾಮ್ ಚಾನೆಲ್ ಸೇರಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

/ 5. ಒಟ್ಟು ವೋಟುಗಳು

ನಿಮ್ಮ ಕಾಮೆಂಟ್ ಬರೆಯಿರಿ

advertisement