ಪಠ್ಯ ಪುಸ್ತಕಗಳು ಶೀಘ್ರವೇ ಲಭ್ಯ, ಆದಷ್ಟು ಬೇಗ ಪಠ್ಯ ಪುಸ್ತಕ ಪರಿಷ್ಕರಣೆ: ಶಿಕ್ಷಣ ಸಚಿವ ನಾಗೇಶ

posted in: ರಾಜ್ಯ | 0

ಧಾರವಾಡ: ಪಠ್ಯ ಪುಸ್ತಕಗಳಲ್ಲಾಗಿರುವ ಲೋಪ ದೋಷಗಳನ್ನು ಆದಷ್ಟು ಶೀಘ್ರ ಸರಿಪಡಿಸಲಾಗುವುದು. ಅದರಲ್ಲಾದ ತಪ್ಪುಗಳನ್ನು ನಾವು ಒಪ್ಪಿಕೊಳ್ಳುತ್ತೇವೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ ಹೇಳಿದರು.
ಮಾಧ್ಯಮದವರ ಜೊತೆ ಮಾತನಾಡಿದ ಅವರು, ಪಠ್ಯ, ಪುಸ್ತಕ ಪರಿಷ್ಕರಣೆ ಮಾಡುವಾಗ ದೊಡ್ಡ ತಪ್ಪು ಮಾಡಬಾರದು. ಈ ರೀತಿಯ ತಪ್ಪು ಆಗಿರುವುದ್ದನ್ನು ಗಮನಿಸಿ ಅದರ ಮರು ಪರಿಷ್ಕರಣೆಗೆ ನಾವು ಮುಂದಾಗಿದ್ದೇವೆ ಎಂದು ತಿಳಿಸಿದರು.

advertisement

ಬಸವಣ್ಣನ ಪಠ್ಯದಲ್ಲಿ ಹಲವಾರು ಹೊಸ ವಿಚಾರಗಳನ್ನು ಅಳವಡಿಸಲಾಗಿದೆ. ಈ ರೀತಿಯ ಲೋಪಗಳು ಆದಾಗ ಯಾರೇ ಅದನ್ನು ಕಂಡು ಹಿಡಿದು ಗಮನಕ್ಕೆ ತಂದರೂ ಸರಿಪಡಿಸುತ್ತೇವೆ. ನಾವು ತಪ್ಪನ್ನು ಮುಚ್ಚಿಡುವುದಿಲ್ಲ. ಸದ್ಯ ನಡೆಯುತ್ತಿರುವ ವಾದ, ವಿವಾದಗಳು ಮಕ್ಕಳ ಮೇಲೆ ಪರಿಣಾಮ ಬೀರುವುದು ಬೇಡ. ಹೀಗಾಗಿ ಪಠ್ಯದಲ್ಲಾದ ತಪ್ಪುಗಳನ್ನು ಸರಿಪಡಿಸುವ ಕೆಲಸ ಮಾಡುತ್ತಿದ್ದೇವೆ. ಯಾವುದೇ ತಪ್ಪುಗಳನ್ನು ತೋರಿಸಿದರೂ ಅದನ್ನು ಸರಿಮಾಡುತ್ತೇವೆ. ಅದರಲ್ಲೇನೂ ಪ್ರತಿಷ್ಠೆ ಇಲ್ಲ ಎಂದು ತಿಳಿಸಿದರು.

ಈಗಾಗಲೇ ಶೇ.84 ರಷ್ಟು ಪರಿಷ್ಕೃತ ಪಠ್ಯ, ಪುಸ್ತಕಗಳು ಬಿಇಓ ಕಚೇರಿ ಸೇರಿವೆ. ಇನ್ನೊಂದು ತಿಂಗಳಲ್ಲಿ ಎಲ್ಲಾ ಪುಸ್ತಕಗಳನ್ನು ಕೊಡುವ ಹಾಗೆ ಮಾಡುತ್ತೇವೆ. ಪಠ್ಯದಲ್ಲಿ ಯಾವುದೇ ಸಾಹಿತಿಗಳನ್ನು ನಾವು ಕಡೆಗಣಿಸಿಲ್ಲ. ಕಾಂಗ್ರೆಸ್ ಅವಧಿಯಲ್ಲಿ ಮಹರಾಜರ ಕಥೆಗಳನ್ನು ತೆಗೆದು ಟಿಪ್ಪು ಸುಲ್ತಾನ್ ಕಥೆ ಹಾಕಲಾಗಿತ್ತು. ಸಿಂಧೂ ಸಂಸ್ಕೃತಿ ಕಿತ್ತು ಹಾಕಿ ನೆಹರೂ ಪಾಠ ಹಾಕಲಾಗಿತ್ತು. ಇಸ್ಲಾಂ ಮತ್ತು ಕ್ರೈಸ್ತರನ್ನು ಮಾತ್ರ ಪುಸ್ತಕದಲ್ಲಿ ತರಲಾಗಿತ್ತು. ಇಂತಹ ನೂರು ಉದಾಹರಣೆಗಳಿವೆ ಎಂದರು.
ದೇವನೂರು ಮಹಾದೇವನವರು ಪಠ್ಯದಲ್ಲಿ ತಪ್ಪುಗಳಾಗಿದ್ದನ್ನು ನಮಗೆ ಹೇಳಬಹುದಿತ್ತು. ಆದರೆ, ಪುಸ್ತಕ ಬಿಡುಗಡೆಯಾದ ಮೇಲೆ ಹೇಳಿದ್ದು ನೋವಾಗಿದೆ. ಬರಗೂರು ರಾಮಚಂದ್ರಪ್ಪನವರ ಕಾಲದಲ್ಲೂ ಪಠ್ಯದಲ್ಲಿ ತಪ್ಪುಗಳಾಗಿದ್ದವು. ಸಿದ್ದರಾಮಯ್ಯ ಸರ್ಕಾರವಿದ್ದಾಗಲೇ ನಾಡಗೀತೆಗೆ ಅವಮಾನ ಮಾಡಲಾಗಿತ್ತು ಎಂದರು.

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ಟೆಲಿಗ್ರಾಮ್ ಚಾನೆಲ್ ಸೇರಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಓದಿರಿ :-   ಖ್ಯಾತ ಸುಗಮ ಸಂಗೀತ ಗಾಯಕ ಶಿವಮೊಗ್ಗ ಸುಬ್ಬಣ್ಣ ನಿಧನ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

/ 5. ಒಟ್ಟು ವೋಟುಗಳು

ನಿಮ್ಮ ಕಾಮೆಂಟ್ ಬರೆಯಿರಿ

advertisement