ಉಪ್ಪಿನಂಗಡಿ ಕಾಲೇಜ್‌: ಹಿಜಾಬ್ ತೆಗೆದಿಟ್ಟು ತರಗತಿಗೆ ಹಾಜರಾದ 46 ಮುಸ್ಲಿಂ ವಿದ್ಯಾರ್ಥಿನಿಯರು

posted in: ರಾಜ್ಯ | 0

ಮಂಗಳೂರು:ಮಂಗಳೂರು: ಹಿಜಾಬ್ ಧರಿಸಿಯೇ ಕಾಲೇಜ್ ಪ್ರವೇಶಿಸುವುದಾಗಿ ಪಟ್ಟು ಹಿಡಿದಿದ್ದ ವಿದ್ಯಾರ್ಥಿನಿಯರಲ್ಲಿ 6 ವಿದ್ಯಾರ್ಥಿನಿಯರು ಸಮವಸ್ತ್ರ ನಿಯಮಾಳಿ ಉಲ್ಲಂಘಿಸುವುದಿಲ್ಲ ಎಂದು ಮುಚ್ಚಳಿಕೆ ಬರೆದುಕೊಟ್ಟು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಕಾಲೇಜು ತರಗತಿಗೆ ಹಾಜರಾಗಿದ್ದಾರೆ.
ಕಾಲೇಜಿನ ಸಮವಸ್ತ್ರ ನಿಯಮಾಳಿಗಳನ್ನು ಉಲ್ಲಂಘಿಸುವುದಿಲ್ಲ ಎಂದು ಮುಚ್ಚಳಿಕೆ ಬರೆದು ಕೊಟ್ಟ ನಂತರ ಕಾಲೇಜಿನ ಪ್ರಾಂಶುಪಾಲರು ಇವರಿಗೆ ತರಗತಿಗೆ ಹಾಜರಾಗಲು ಅನುವು ಮಾಡಿಕೊಟ್ಟಿದ್ದಾರೆ. ಹಿಜಾಬ್ ಧರಿಸಿಯೇ ಕಾಲೇಜ್ ಪ್ರವೇಶಿಸುವುದಾಗಿ ಪಟ್ಟು ಹಿಡಿದು ಉಪ್ಪಿನಂಗಡಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ನಡೆಸಿದ ಹೋರಾಟ ಮಾಡಿ ತರಗತಿ ಪ್ರವೇಶದ ನಿರ್ಬಂಧಕ್ಕೆ ಒಳಗಾಗಿದ್ದ ವಿದ್ಯಾರ್ಥಿನಿಯರಲ್ಲಿ ಆರು ಮಂದಿ ವಿದ್ಯಾರ್ಥಿನಿಯರು ತರಗತಿಗೆ ಹಾಜರಾಗಿದ್ದಾರೆ.

advertisement

ಈ ಕಾಲೇಜಿನಲ್ಲಿ ಒಟ್ಟು 101 ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರಿದ್ದು, ಈ ಪೈಕಿ 46 ವಿದ್ಯಾರ್ಥಿನಿಯರು ಬುಧವಾರ ಸಮವಸ್ತ್ರ ಹಾಗೂ ನಿಯಮ ಪಾಲನೆಯೊಂದಿಗೆ ಕಾಲೇಜಿಗೆ ಹಾಜರಾಗಿದ್ದಾರೆ.
ಮೊದಲ ಹಂತದಲ್ಲಿ ಅಮಾನತಾಗಿದ್ದ ಆರು ಮಂದಿ ಮತ್ತು ಹಿಜಾಬ್ ಪ್ರತಿಭಟನೆಯಿಂದ ದೂರ ಸರಿದು ಮೊದಲಿನಿಂದಲೂ ಕಾಲೇಜಿಗೆ ಆಗಮಿಸುತ್ತಿದ್ದ 29 ಮಂದಿ ಹಾಗೂ ಕಾಲೇಜಿಗೂ ಬರದೆ, ಪ್ರತಿಭಟನೆಯಿಂದಲೂ ದೂರವಿದ್ದ 11 ವಿದ್ಯಾರ್ಥಿನಿಯರು ಸೇರಿ ಒಟ್ಟು 46 ವಿದ್ಯಾರ್ಥಿನಿಯರು ಬುಧವಾರ ಸಮವಸ್ತ್ರ ಧರಿಸಿ, ತರಗತಿಗೆ ಹಾಜರಾಗಿದ್ದಾರೆ. ಎರಡು ದಿನಗಳ ಹಿಂದೆ ಅಮಾನತಾಗಿರುವ 24 ವಿದ್ಯಾರ್ಥಿನಿಯರು ಕಾಲೇಜಿಗೆ ಬಂದಿಲ್ಲ ಎನ್ನಲಾಗಿದೆ. ಉಳಿದ ವಿದ್ಯಾರ್ಥಿನಿಯರು ಒಂದೆರಡು ದಿನಗಳಲ್ಲಿ ಕಾಲೇಜಿಗೆ ಬರಬಹುದೆಂಬ ನಿರೀಕ್ಷಿಸಲಾಗಿದೆ.

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ಟೆಲಿಗ್ರಾಮ್ ಚಾನೆಲ್ ಸೇರಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಓದಿರಿ :-   ಪ್ರವೀಣ ನೆಟ್ಟಾರು ಹತ್ಯೆ ಪ್ರಕರಣ: ಐವರು ಆರೋಪಿಗಳನ್ನು ವಶಕ್ಕೆ ಪಡೆದ ಎನ್‌ಐಎ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 2

ನಿಮ್ಮ ಕಾಮೆಂಟ್ ಬರೆಯಿರಿ

advertisement