ಪ್ರವಾದಿ ವಿವಾದ: ನೂಪುರ್ ಶರ್ಮಾ, ನವೀನ್ ಜಿಂದಾಲ್, ಸಬಾ ನಖ್ವಿ, ಇತರರ ವಿರುದ್ಧ ಎಫ್‌ಐಆರ್ ದಾಖಲಿಸಿದ ದೆಹಲಿ ಪೊಲೀಸರು

ನವದೆಹಲಿ: ಪ್ರವಾದಿ ಕುರಿತು ಮಾಡಿದ ವಿವಾದಾತ್ಮಕ ನಡುವೆ ದ್ವೇಷದ ಸಂದೇಶಗಳನ್ನು ಹರಡಿದ ಆರೋಪದಲ್ಲಿ ಅಮಾನತುಗೊಂಡ ಬಿಜೆಪಿ ವಕ್ತಾರರಾದ ನೂಪುರ್ ಶರ್ಮಾ, ಉಚ್ಛಾಟಿತ ಬಿಜೆಪಿ ನಾಯಕ ನವೀನ್ ಜಿಂದಾಲ್ ಮತ್ತು ಪತ್ರಕರ್ತ ಸಾಬಾ ನಖ್ವಿ ಹಾಗೂ ಇತರರ ವಿರುದ್ಧ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ದೆಹಲಿ ಪೊಲೀಸರು ಎರಡು ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ – ಒಂದು ನೂಪುರ್ ಶರ್ಮಾ ವಿರುದ್ಧ ಮತ್ತು ಇನ್ನೊಂದು “ವಿವಾದಾತ್ಮಕ” ಹೇಳಿಕೆಗಳನ್ನು ನಿರಂತರವಾಗಿ ನೀಡುತ್ತಿರುವ ಆರೋಪ ಹೊತ್ತಿರುವವರ ವಿರುದ್ಧ ದಾಖಲಿಸಲಾಗಿದೆ.

ಮೊದಲ ಎಫ್‌ಐಆರ್‌ನಲ್ಲಿ ನೂಪುರ್ ಶರ್ಮಾ ಹೆಸರಿದ್ದರೆ, ಎರಡನೆಯದರಲ್ಲಿ ನವೀನ್ ಜಿಂದಾಲ್, ಶಾದಾಬ್ ಚೌಹಾಣ್, ಸಾಬಾ ನಖ್ವಿ, ಮೌಲಾನಾ ಮುಫ್ತಿ ನದೀಮ್, ಅಬ್ದುರ್ ರೆಹಮಾನ್, ಗುಲ್ಜಾರ್ ಅನ್ಸಾರಿ ಮತ್ತು ಅನಿಲ್ ಕುಮಾರ್ ಮೀನಾ ಅವರನ್ನು ಹೆಸರಿಸಲಾಗಿದೆ.

ವಿವಿಧ ಗುಂಪುಗಳನ್ನು ಪ್ರಚೋದಿಸುವ ಮತ್ತು ದೇಶದಲ್ಲಿ ಸಾರ್ವಜನಿಕ ನೆಮ್ಮದಿಯ ನಿರ್ವಹಣೆಗೆ ಹಾನಿಕಾರಕ ಸನ್ನಿವೇಶಗಳನ್ನು ಸೃಷ್ಟಿಸುವ ಆರೋಪದ ಮೇಲೆ ಇವರ ವಿರುದ್ಧ ದೆಹಲಿ ಪೊಲೀಸ್ ವಿಶೇಷ ಸೆಲ್‌ನ ಇಂಟೆಲಿಜೆನ್ಸ್ ಫ್ಯೂಷನ್ ಮತ್ತು ಸ್ಟ್ರಾಟೆಜಿಕ್ ಆಪರೇಷನ್ (ಐಎಫ್‌ಎಸ್‌ಒ) ಘಟಕವು ಎಫ್‌ಐಆರ್ ದಾಖಲಿಸಿದೆ.
ಎಫ್‌ಐಆರ್ ವಿವಿಧ ಧರ್ಮಗಳ ಹಲವಾರು ವ್ಯಕ್ತಿಗಳ ವಿರುದ್ಧವಾಗಿದೆ ಎಂದು ಪೊಲೀಸ್ ಉಪ ಆಯುಕ್ತ (ಐಎಫ್‌ಎಸ್‌ಒ) ಕೆಪಿಎಸ್ ಮಲ್ಹೋತ್ರಾ ಹೇಳಿದ್ದಾರೆ.
ಈ ಘಟಕವು ಸೈಬರ್‌ಸ್ಪೇಸ್‌ನಲ್ಲಿ ಅಶಾಂತಿಯನ್ನು ಸೃಷ್ಟಿಸುವ ಉದ್ದೇಶದಿಂದ ಸುಳ್ಳು ಮಾಹಿತಿಯನ್ನು ಪ್ರಚಾರ ಮಾಡುವಲ್ಲಿ ಸಾಮಾಜಿಕ ಮಾಧ್ಯಮ ವೇದಿಕೆಗಳ ಪಾತ್ರವನ್ನು ತನಿಖೆ ಮಾಡುತ್ತದೆ ಎಂದು ಮಲ್ಹೋತ್ರಾ ಹೇಳಿದರು.

ಪ್ರಮುಖ ಸುದ್ದಿ :-   ಬಿಹಾರದಲ್ಲಿ ಮತಪಟ್ಟಿ ಪರಿಷ್ಕರಣೆ ; ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ ಆರ್‌ಜೆಡಿ

ಪ್ರವಾದಿ ಮುಹಮ್ಮದ್ ವಿರುದ್ಧ ದೂಷಣೆಯ ಹೇಳಿಕೆಗಳ ಆರೋಪದ ಮೇಲೆ ನೂಪುರ್ ಶರ್ಮಾ ಅವರಿಗೆ ಮುಂಬ್ರಾ ಪೊಲೀಸರು ಸಮನ್ಸ್ ನೀಡಿದ ಒಂದು ದಿನದ ನಂತರ ಈ ಬೆಳವಣಿಗೆಯಾಗಿದೆ ಮತ್ತು ಅವರ ಹೇಳಿಕೆಯನ್ನು ದಾಖಲಿಸಲಾಗಿದೆ. ಮಹಾರಾಷ್ಟ್ರದಲ್ಲಿ ನೂಪುರ್ ಶರ್ಮಾ ವಿರುದ್ಧ ಕನಿಷ್ಠ 2 ಇತರ ಎಫ್‌ಐಆರ್‌ಗಳನ್ನು ಈಗಾಗಲೇ ದಾಖಲಿಸಲಾಗಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement