ರಾಜ್ಯಸಭೆ ಚುನಾವಣೆ: ಬಿಜೆಪಿಯ ನಿರ್ಮಲಾ ಸೀತಾರಾಮನ್, ಜಗ್ಗೇಶ್, ಕಾಂಗ್ರೆಸ್ಸಿನನ ಜೈರಾಂ ರಮೇಶ್ ನಿಶ್ಚಿತ-ಅಧಿಕೃತ ಘೋಷಣೆ ಬಾಕಿ

ಬೆಂಗಳೂರು: ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ನಿರ್ಮಲಾ ಸೀತಾರಾಮನ್ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಜೈರಾಂ ರಮೇಶ್ ಅವರಿಗೆ ಮೊದಲ ಸುತ್ತಿನ ಪ್ರಾಶಸ್ತ್ಯ ಮತಗಳಲ್ಲಿ ಗೆಲುವು ನಿಶ್ಚಿತ ಎಂದು ಹೇಳಲಾಗಿದ್ದು, ಚುನಾವಣಾ ಆಯೋಗದಿಂದ ಅಧಿಕೃತ ಘೋಷಣೆ ಮಾತ್ರ ಬಾಕಿ ಇದೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮೊದಲ ಸುತ್ತಿನ 46 ಪ್ರಾಶಸ್ತ್ಯ ಮತಗಳು ಸಿಕ್ಕಿವೆ. ಇನ್ನು ಎರಡನೇ ಪ್ರಾಶಸ್ತ್ಯ ಮತದಲ್ಲಿ ನಟ ಜಗ್ಗೇಶ್ ಅವರಿಗೆ 44 ಮತಗಳು ಸಿಕ್ಕಿದ್ದು, ಬಿಜೆಪಿಯಲ್ಲಿ ಒಂದು ಮತವನ್ನು ಕೊನೆ ಕ್ಷಣದವರೆಗೆ ಉಳಿಸಿಕೊಳ್ಳಲಾಗಿದೆ. ಮೂರನೇ ಅಭ್ಯರ್ಥಿ ಲೆಹರ್ ಸಿಂಗ್ ಅವರಿಗೆ 32 ಮತಗಳು ಲಭಿಸಿವೆ. ನಿರ್ಮಲಾ ಸೀತಾರಾಮನ್ ಬಳಿಯಿರುವ ಮೊದಲ ಪ್ರಾಶಸ್ತ್ಯದ 1.17 ಮತಗಳು ಲೆಹರ್ ಸಿಂಗ್ ಗೆ ವರ್ಗಾವಣೆಯಾಗಲಿದ್ದು, ಲೆಹರ್ ಸಿಂಗ್ ಗೆ 33.17 ಮತಗಳಾಗಿವೆ. ಮೊದಲ ಪ್ರಾಶಸ್ತ್ಯದಲ್ಲಿ ಕಾಂಗ್ರೆಸ್ ಅಥವಾ ಜೆಡಿಎಸ್ ಮತಗಳು 33.17 ದಾಟಿದರೆ ಮನ್ಸೂರ್ ಖಾನ್ ಅಥವಾ ಕುಪೇಂದ್ರ ರೆಡ್ಡಿಗೆ ಗೆಲುವು ಸಿಗಲಿದೆ. ಇಲ್ಲದಿದ್ದರೆ ಲೆಹರ್ ಸಿಂಗ್ ಗೆಲುವು ನಿಶ್ಚಿತ ಎಂಬುದು ಲೆಕ್ಕಾಚಾರ.
ಕಾಂಗ್ರೆಸ್ ಅಭ್ಯರ್ಥಿ ಜೈರಾಂ ರಮೇಶ್ ಅವರಿಗೆ 46 ಮೊದಲ ಪ್ರಾಶಸ್ತ್ಯ ಮತಗಳು ಸಿಕ್ಕಿವೆ. ನಾಲ್ಕನೇ ಅಭ್ಯರ್ಥಿ ಆಯ್ಕೆಯಲ್ಲಿ ಕಾಂಗ್ರೆಸ್ ಅಥವಾ ಜೆಡಿಎಸ್ ನಿಂದ ಅಡ್ಡ ಮತದಾನವಾದರೆ ಲೆಹರ್ ಸಿಂಗ್ ಗೆ ಸಿಗುವ ಮತಗಳು ಹೆಚ್ಚಾಗಲಿವೆ.

ಪ್ರಮುಖ ಸುದ್ದಿ :-   ಹುಡುಗಿಗೆ ಅಶ್ಲೀಲ ಸಂದೇಶ ಕಳುಹಿಸಿದ ಆರೋಪ; ಯುವಕನ ವಿವಸ್ತ್ರಗೊಳಿಸಿ ಹಿಗ್ಗಾಮುಗ್ಗಾ ಥಳಿತ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement